ಜನ ಮನದ ನಾಡಿ ಮಿಡಿತ

Advertisement

ಉಡುಪಿ: ಬೆಂಗಳೂರಿಗೆ ಉದ್ಯೋಗಕ್ಕೆ ತೆರಳುತ್ತಿದ್ದ ಯುವ ಇಂಜಿನಿಯರ್ ಅಪಘಾತದಲ್ಲಿ ದುರ್ಮರಣ

ಉದ್ಯೋಗ ನಿಮಿತ್ತ ಬೈಕ್‌ನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ಬೈಂದೂರು ತಾಲೂಕಿನ ಚುಂಗಿಗುಡ್ಡೆ ನಿವಾಸಿ ಪ್ರತಿಭಾವಂತ ಯುವ ಇಂಜಿನಿಯರ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ದಾರುಣ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಸಮೀಪ ನಡೆದಿದೆ.

ಮೃತ ಯುವಕನನ್ನು ಚುಂಗಿಗುಡ್ಡೆ ನಿವಾಸಿ ನಾರಾಯಣ ಹೆಬ್ಬಾರ್ ಅವರ ಪುತ್ರ ಅಕ್ಷಯ್ ಎನ್. ಹೆಬ್ಬಾರ್ ಎಂದು ಗುರುತಿಸಲಾಗಿದೆ.

ಅಕ್ಷಯ್ ಅವರು ಚುಂಗಿಗುಡ್ಡೆಯಲ್ಲಿರುವ ಮನೆಯಿಂದ ಬೈಕ್‌ನಲ್ಲಿ ಬೆಂಗಳೂರಿನತ್ತ ಪ್ರಯಾಣ ಆರಂಭಿಸಿದ್ದರು. ಪ್ರಯಾಣದ ನಡುವೆ ಅಪಘಾತ ಸಂಭವಿಸುವುದಕ್ಕೂ ಮುನ್ನ ತಾಯಿಗೆ ದೂರವಾಣಿ ಕರೆ ಮಾಡಿದ್ದರು ಎನ್ನಲಾಗಿದೆ.

ಚನ್ನರಾಯಪಟ್ಟಣ ಸಮೀಪ ಸಂಚರಿಸುತ್ತಿದ್ದ ವೇಳೆ ಟ್ರಕ್‌ಗೆ ಬೈಕ್‌ನ ಹ್ಯಾಂಡಲ್‌ನ ಭಾಗ ತಾಗಿ, ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎಂಬ ಮಾಹಿತಿ ಸ್ಥಳೀಯರಿಂದ ಲಭ್ಯವಾಗಿದೆ. ಆದರೆ ಅಪಘಾತದ ನಿಖರ ಕಾರಣ ಹಾಗೂ ಘಟನೆಯ ಕುರಿತ ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ.

ಓದಿನಲ್ಲಿ ಪ್ರತಿಭಾವಂತನಾಗಿದ್ದ ಅಕ್ಷಯ್ ಉತ್ತಮ ಉದ್ಯೋಗ ಪಡೆದು ತಂದೆ-ತಾಯಿಯ ಕನಸುಗಳಿಗೆ ಆಸರೆಯಾಗಿದ್ದರು. ಆದರೆ ವಿಧಿಯಾಟಕ್ಕೆ ಯುವಕನ ಬದುಕು ಅರ್ಧದಲ್ಲೇ ಅಂತ್ಯಗೊಂಡಿರುವುದು ಕುಟುಂಬಸ್ಥರು, ಬಂಧುಮಿತ್ರರು ಹಾಗೂ ಗ್ರಾಮಸ್ಥರನ್ನು ತೀವ್ರ ದುಃಖಕ್ಕೀಡು ಮಾಡಿದೆ.

ಅಕ್ಷಯ್ ಅವರ ಅಕಾಲಿಕ ನಿಧನದಿಂದ ಚುಂಗಿಗುಡ್ಡೆ ಹಾಗೂ ಪಡುಕೋಣೆ ಪರಿಸರದಲ್ಲಿ ಶೋಕದ ಛಾಯೆ ಆವರಿಸಿದೆ.

Leave a Reply

Your email address will not be published. Required fields are marked *

ಉಡುಪಿ: ಒತ್ತಡ ನಿವಾರಣೆಗೆ ಕ್ರೀಡೆ ಸಹಕಾರಿ: ಪ್ರತೀಕ್ ಬಾಯಲ್

ಬಂಟ್ವಾಳ: ಬಂಟ್ವಾಳಕ್ಕೆ ಗ್ರಾಮಾಂತರ ಸೈಬರ್ ಪೊಲೀಸ್ ಠಾಣೆ ಸ್ಥಳಾಂತರ

ಬಂಟ್ವಾಳ: ಉಪ್ಪಿನಂಗಡಿ ಟೋಲ್ ವಿರೋಧಿಸಿ ಬ್ರಹ್ಮರಕೂಟ್ಲು ಟೋಲ್‌ಗೆ ಎಸ್‌ಡಿಪಿಐ ಮುತ್ತಿಗೆ

ಬಂಟ್ವಾಳ: ಪಾಣೆಮಂಗಳೂರು ಹಳೆ ಸೇತುವೆಯ ಕಬ್ಬಿಣದ ಕಮಾನು ಮರುಜೋಡಣೆ

ಬಂಟ್ವಾಳ: ನಿಂತಿದ್ದ ಟಿಪ್ಪರ್ ಲಾರಿಗೆ ಬೈಕ್ ಡಿಕ್ಕಿ: ಸವಾರನಿಗೆ ಗಂಭೀರ ಗಾಯ

ಮಂಗಳೂರು: ಕ್ಲಸ್ಟರ್ ಕಿಚನ್ ವಿರೋಧಿಸಿ ಉಳ್ಳಾಲದಲ್ಲಿ ಬಿಸಿಯೂಟ ನೌಕರರ ಪ್ರತಿಭಟನೆ

ಬಂಟ್ವಾಳ: ಪಾಣೆಮಂಗಳೂರು ಹಳೆ ಸೇತುವೆಯ ಕಬ್ಬಿಣದ ಕಮಾನು ಮರುಜೋಡಣೆ

ಬೆಂಗಳೂರು: ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಆಡಳಿತ ಭಾಷೆಯಾಗಿ ತುಳುವಿಗೆ ಮಾನ್ಯತೆ

ಮಂಗಳೂರು: ಬಂಟ್ವಾಳದಲ್ಲಿ ಅಬಕಾರಿ ದಾಳಿ: 20.37 ಲಕ್ಷ ಮೌಲ್ಯದ ಗೋವಾ ಮದ್ಯ ಜಪ್ತಿ

error: Content is protected !!