ಜನ ಮನದ ನಾಡಿ ಮಿಡಿತ

Advertisement

ರಸ್ತೆ ಮಧ್ಯೆ ಗಜರಾಜನ ದರ್ಬಾರ್..! ಹೈರಾಣಾದ ವಾಹನ ಸವಾರರು..

ಇತ್ತೀಚೆಗೆ ಕಾಡನ್ನ ತೊರೆದು ನಾಡಿಗೆ ಬರ್ತಿರೋ ಪ್ರಾಣಿಗಳ ಸಂಖ್ಯೆ ದಿನೇ ದಿನೆ ಹೆಚ್ಚಾಗ್ತಾನೆ ಇದೆ. ಅದರಲ್ಲೂ ನಾಡಿಗೆ ಬರುವ ಪ್ರಾಣಿಗಳು ಕಾಡಿನಲ್ಲಿ ದರ್ಬಾರ್ ಮಾಡೋ ರೀತಿಯೇ ನಾಡಲ್ಲೂ ದರ್ಬಾರ್ ಮಾಡುತ್ತಿವೆ.


ಹೌದು, ಇಲ್ಲಿ ಒಂದು ಕಾಡಾನೆ ಅದೇ ರೀತಿ ಮಾಡಿದೆ. ತನ್ನದಲ್ಲದ ಏರಿಯಾದಲ್ಲಿ ತಾನೇ ಕಿಂಗ್ ಅಂದುಕೊAಡು ವಾಹನ ಸವಾರರಿಗೆ ಕಾಟ ಕೊಟ್ಟಿದೆ.
ಅಷ್ಟಕ್ಕೂ ಈ ಕಾಡಾನೆ ಏನು ಮಾಡಿದೆ ಅಂತ ಕೇಳ್ತೀರಾ ಹಾಗಿದ್ದರೆ ಹೇಳ್ತಿವಿ ಓದಿ, ಈ ಗಜರಾಜ ರಸ್ತೆಯಲ್ಲಿ ಬಂದು ನಿಂತು ನಾನೇ ಈ ರಸ್ತೆಗೆ ಕಿಂಗ್ ಅಂತಾ ಬರೋ ಗಾಡಿಗಳನ್ನ ಅಡ್ಡಗಟ್ಟಿ ನಿಂತ್ಬಿಟ್ಟಿದೆ. ಯಾರನ್ನೂ ಮುಂದೆ ಹೋಗೋಕೆ ಬಿಡ್ತಿಲ್ಲ. ನನ್ನನ್ನ ದಾಟಿ ಅದ್ಹೆಂಗೆ ಮುಂದೆ ಹೋಗ್ತೀರಾ ನೋಡ್ತೀನಿ ಅಂತಾ ಸವಾಲ್ ಹಾಕಿ ನಿಂತಿದೆ.

ಕೇರಳದ ಶೋಲಯಾರ್ ಬಳಿ ಒಂಟಿಸಲಗ ರಸ್ತೆಲೀ ದರ್ಬಾರ್ ಮಾಡ್ತಿದಿದೆ. ಒಂಟಿಸಲಗ ಕೆಎಸ್‌ಆರ್‌ಟಿಸಿ ಬಸ್ ಸೇರಿದಂತೆ ಅನೇಕ ಬಸ್‌ಗಳನ್ನ ತಡೆದಿದೆ. ಇನ್ನೂ ಅಚ್ಚರಿ ಎಂಬ0ತೆ ಆನೆಯೊಂದಿಗೆ ಚಾಲಕ ಮಾತನಾಡಿದ್ದು, ದಾರಿ ಬಿಟ್ಟುಕೊಡುವಂತೆ ಮನವಿ ಮಾಡಿದ್ದಾನೆ. ಆಗಲೂ ಆನೆ ಜಗ್ಗದೇ ಇದ್ದಾಗ ಒಂದಷ್ಟು ಬಾರಿ ಆನೆಯನ್ನ ಗದರಿಸಿದ್ದಾನೆ. ಆದ್ರೂ ಕೂಡ ಆನೆ ಮಾತ್ರ ದಾರಿ ಬಿಟ್ಟುಕೊಟ್ಟಿಲ್ಲ. ಸ್ವಲ್ಪ ಸಮಯ ಕಳೆದ ಮೇಲೆ, ಇದಕ್ಕೂ ತನಗೂ ಸಂಬ0ಧವೇ ಇಲ್ಲ ಅನ್ನೋ ಹಾಗೆ, ಅಲ್ಲೇನೂ ನಡೆದೇ ಇಲ್ಲವೇನೋ ಅನ್ನೋ ಹಾಗೆ, ಆನೆ ತನ್ನ ಪಾಡಿಗೆ ತಾನು ಹೊರಟೋಗಿದೆ. ಅದೃಷ್ಟವಶಾತ್ ಆನೆ ಯಾರ ಮೇಲೂ ದಾಳಿ ನಡೆಸಿಲ್ಲ.


ಇನ್ನೂ ಈ ಗಜರಾಜ ರಸ್ತೆ ಮಧ್ಯೆ ದರ್ಬಾರ್ ಮೆರೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

Leave a Reply

Your email address will not be published. Required fields are marked *

ಪುತ್ತೂರು: ಮುಳಿಯ ಗೋಲ್ಡ್ ಸಂಸ್ಥೆಯ ಮಾಲಕ ಸರಾಫ್ ಮುಳಿಯ ಶ್ಯಾಮ ಭಟ್ ನಿಧನ…!

ಮಂಗಳೂರು: ಮಗುವಿನ ಚಿಕಿತ್ಸೆಗೆ ರವಿ ಕಟಪಾಡಿಯಿಂದ ₹2.50 ಲಕ್ಷ ನೆರವು…!

ಮಂಗಳೂರು: ಕ್ರೀಡಾಪಟು ಎಂ.ಆರ್. ಪೂವಮ್ಮಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ

ಮಂಗಳೂರು: 2026ನೇ ಸಾಲಿನ ಕಾರಂತ ಪ್ರಶಸ್ತಿಗೆ ಹಿರಿಯ ಸಾಹಿತಿ ವೈದೇಹಿ ಆಯ್ಕೆ..!

ಕಡಬ: ಗುಂಡ್ಯ-ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ಕಾರಿಗೆ ಕಡವೆ ಡಿಕ್ಕಿ: ಸ್ಥಳದಲ್ಲೇ ಸಾವು

ಮಂಗಳೂರು: ಕರ್ನಾಟಕದ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ ಹೆಚ್ಚಿಸಿ: ಎಂ.ಆರ್. ಪೂವಮ್ಮ ಆಗ್ರಹ

ಬಂಟ್ವಾಳ: ಬಂಟ್ವಾಳದಲ್ಲಿ ಎರಡು ಕಡೆ ಚಿರತೆ ಸೆರೆಗೆ ಬೋನು; ಆತಂಕದಲ್ಲಿ ಸ್ಥಳೀಯರು…!

ಮಂಗಳೂರು: ಮಾಡೂರು ಯೂಸುಫ್ ಹತ್ಯೆ ಪ್ರಕರಣ: ಐವರಿಗೆ ಜೀವಾವಧಿ ಶಿಕ್ಷೆ…!

ತಿರುವನಂತಪುರಂ: ಪತಿಯ ಸ್ನೇಹಿತೆಯ ಮೇಲೆ ಅತ್ಯಾಚಾರಕ್ಕೆ ಸುಪಾರಿ ಆರೋಪ: ಮಹಿಳೆ ಸೇರಿ ಐವರ ಬಂಧನ

error: Content is protected !!