ಮಂಗಳೂರು; ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮ 1997-2001ರ ಸಂಖ್ಯೆ 33ರ ಪ್ರಕಾರ ದೇವಸ್ಥಾನಗಳಲ್ಲಿ ಹಿಂದೂಗಳಿಗೆ ಮಾತ್ರ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಿಕೊಡಬೇಕು ಹಾಗೂ ಈ ನಿಯಮದ ಪ್ರಕಾರ ಏಲಂನ್ನು ನಿಲ್ಲಿಸಬೇಕು ಎಂದು ಕರ್ನಾಟಕ ರಾಜ್ಯ ಹಿಂದೂ ಜಾತ್ರೆ ವ್ಯಾಪಾರಸ್ಥರ ಸಂಘ ಆಗ್ರಹಿಸಿದೆ.

ಸಂಘದ ಗೌರವಾಧ್ಯಕ್ಷ ಮಹೇಶ್ ದಾಸ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮದಂತೆ ಹಿಂದೂ ದೇವಸ್ಥಾನಗಳು ಮಾತ್ರ ಇದರಲ್ಲಿ ಅನ್ವಯವಾಗುತ್ತಿದೆ. ಜತೆಗೆ ವ್ಯಾಪಾರಕ್ಕೂ ಹಿಂದೂಗಳಿಗೆ ಅವಕಾಶ ಎಂಬುದು ನಿಯಮದಲ್ಲಿದೆ. ಒಂದು ವೇಳೆ ಇತರ ಧರ್ಮದವರು ವ್ಯಾಪಾರ ಮಾಡುವುದಾದರೆ ಮುಜರಾಯಿ ಇಲಾಖೆಯಡಿ ಮಸೀದಿ ಹಾಗೂ ಚರ್ಚ್ಗಳನ್ನೂ ಸೇರಿಸಿದರೆ ನಮ್ಮ ಯಾವುದೇ ತಕರಾರು ಇಲ್ಲ. ಸಂತೆ ವ್ಯಾಪಾರದ ಬಗ್ಗೆ ಯಾವುದೇ ಆಕ್ಷೇಪವನ್ನೂ ನಾವು ಮಾಡುವುದಿಲ್ಲ ಎಂದರು. ಈ ಸಂದರ್ಭದಲ್ಲಿ ಸಂಘದ ಕೋಶಾಧಿಕಾರಿ ಪ್ರಮೀಳಾ, ಕೃಷ್ಣಲೀಲಾ, ಪ್ರದೀಪ್ ಉಪಸ್ಥಿತರಿದ್ದರು.



