ಜನ ಮನದ ನಾಡಿ ಮಿಡಿತ

Advertisement

ಗಟ್ಟಿಮೇಳವನ್ನ ಹಿಂದಿಕ್ಕಿದ ಸೀತಾರಾಮ ಜೋಡಿ..!

ಕನ್ನಡ ಕಿರುತೆರೆಯ ಅಗ್ನಿ ಪರೀಕ್ಷೆಯ ದಿನ ಅಂದ್ರೆ, ಗುರುವಾರ. ಈ ವಾರ ಜನ ಯಾರ ಕೈ ಹಿಡಿದ್ರು?ಯಾರ ಕೈನ ಬಿಟರು? ಯಾರು ರೇಸ್​​ನಿಂದ ಆಚೆ ಉಳಿದಿದ್ದಾರೆ? ಯಾರು ರೇಸ್​ನಲ್ಲಿದ್ದಾರೆ ಇದ್ದೆಲ್ಲದಕ್ಕೂ ಉತ್ತರ ಇಲ್ಲಿದೆ.

ಮೊದಲ ಸ್ಥಾನದಲ್ಲಿ ಪುಟ್ಟಕ್ಕನ ಮಕ್ಕಳು ಎಂದಿನಂತೆ ಡಬಲ್ ಡಿನಿಟ್ 11.3 ಟಿವಿಆರ್ ಪಡೆದುಕೊಂಡು ರಾರಾಜಿಸುತ್ತಾ ಇದೆ. ಇನ್ನೂ ಅಚ್ಚರಿಯಂತೆ ಹಾಗೂ ಅಂದುಕೊಂಡತೆ, ಸೀತಾ ರಾಮ ಗಟ್ಟಿಮೇಳವನ್ನ ಹಿಂದಿಕ್ಕಿ ಎರಡನೇ ಸ್ಥಾನಕ್ಕೆ ಏರಿ ಬೀಗಿದೆ. ಹೌದು ಇಷ್ಟು ದಿನ ಗಟ್ಟಿಮೇಳ ಎರಡನೇ ಸ್ಥಾನವನ್ನ ಯಾರಿಗೂ ಬಿಟ್ಟುಕೊಡದೆ ತನ್ನ ಪ್ರಬುದ್ಧತೆ ಮೆರೆದಿತ್ತು. ಆದ್ರೆ ಸೀತಾರಾಮ ಅದನ್ನ ಬಂದ ನಾಲ್ಕೇ ವಾರಕ್ಕೆ ಧೂಳಿಪಟ ಮಾಡಿದೆ. ಸೀತಾ ರಾಮನಿಗೆ ವೀಕ್ಷಕರು 8.9ಟಿವಿಆರ್ ನೀಡಿದ್ರೆ, ಗಟ್ಟಿಮೇಳಾಗೆ 8.8ಕೊಟ್ಟಿದ್ದಾರೆ.

ಇನ್ನೂ ಶ್ರೀರಸ್ತು ಶುಭಮಸ್ತು ಮದುವೆಯ ಎಪಿಸೋಡ್ಸ್​ಗಳಿಗೆ ವೀಕ್ಷಕರು ಶರಣಾಗಿದ್ದಾರೆ. ಈ ಬಾರಿ ನಾಲ್ಕನೆ ಸ್ಥಾನದಲ್ಲಿ 7.9 ಟಿವಿಆರ್ ಪಡೆದು ಮಾಧವ-ತುಳಸಿ ನಂಟು ಬಿಗಿಯಾಗಿದೆ. ಇನ್ನೂ ಐದನೇ ಸ್ಥಾನದಲ್ಲಿ 7.6 ಟಿವಿಆರ್ ಪಡೆದು ಗೌತಮ್ -ಭೂಮಿಕ ಎಲ್ಲರನ್ನ ರಂಜಿಸ್ತಾ ಇದ್ದಾರೆ.ಈ ಬಾರಿ ಟಾಪ್ ಐದು ಸ್ಥಾನವನ್ನ ಅಲಂಕರಿಸಿದ್ದು ಜೀವಾಹಿನಿಯ ಕತೆಗಳೇ.

ಕಲರ್ಸ್​ ವಾಹಿನಿಯಲ್ಲಿ ಸದ್ಯ ಲಕ್ಷ್ಮೀ ಬಾರಮ್ಮ ಕತೆಗೆ ಜನ ಒತ್ತು ಕೊಡ್ತಿದ್ದಾರೆ. 6.8 ಟಿವಿಆರ್ ಪಡೆದುಕೊಂಡು ಎಲ್ಲರನ್ನ ರಂಜಿಸ್ತಾ ಬಂದಿದೆ. ಇನ್ನೂ ರಾಮಾಚಾರಿ ವಾರದಿಂದ ವಾರಕ್ಕೆ ಅಗ್ನಿಪರೀಕ್ಷೆ ಎದುರಿಸ್ತಾ ಇದೆ. ಇತ್ತ ಸೈಕಲ್ ಗ್ಯಾಪ್​ನಲ್ಲಿ ಗೀತಾ 5.9 ಟಿವಿಆರ್ ಪಡೆದು ಭಾಗ್ಯಲಕ್ಷ್ಮೀಯನ್ನೆ ಹಿಂದಿಕ್ಕಿದೆ. ಒಟ್ಟಿನಲ್ಲಿ ಟಿಆರ್​ಪಿ ಲಿಸ್ಟ್ ಹೊರ ಬಿದ್ದಿದ್ದು, ಈ ವಾರದ ಸೀರಿಯಲ್​ಗಳ ಲೆಕ್ಕಾಚಾರಕ್ಕೆ ತೆರೆ ಬಿದ್ದಿದೆ.

Leave a Reply

Your email address will not be published. Required fields are marked *

ಬಂಟ್ವಾಳ: ಭಾರೀ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಕುಸಿತಗೊಂಡ ಮನೆಯ ಚಾವಣಿ…!

ಬಂಟ್ವಾಳ: ಸಜೀಪಮೂಡದಲ್ಲಿ ವಿದ್ಯುತ್ ಅವಘಡ; ಪೀಠೋಪಕರಣಗಳು ಸೇರಿ ದಿನನಿತ್ಯದ ವಸ್ತುಗಳು ಸುಟ್ಟು ಭಸ್ಮ…!

ವಾಷಿಂಗ್ಟನ್: ಅಮೆರಿಕ ಕಾಂಗ್ರೆಸ್‌ನಿಂದ ಡಾ. ಯು.ಟಿ. ಖಾದರ್‌ಗೆ ಪ್ರತಿಷ್ಠಿತ ಗೌರವ…!

ವಿಶ್ವಕಪ್ ಗಲಾಟೆ: ಅರ್ಜೆಂಟೀನಾ ವಿರುದ್ಧ ಫಿಫಾ ಕಠಿಣ ಶಿಸ್ತು ಕ್ರಮ!

ನವದೆಹಲಿ: ‘ಪಾಕಿಸ್ತಾನಿ ಕಾಶ್ಮೀರ’ ಅಲ್ಲ, ಅದು PoK ಮಾತ್ರ: ನ್ಯೂಯಾರ್ಕ್ ಟೈಮ್ಸ್‌ಗೆ ಭಾರತದ ತಿರುಗೇಟು…!

ವಾಷಿಂಗ್ಟನ್: ಚೀನಾ-ಪಾಕ್ ಮೂಲಕ ಇರಾನ್‌ಗೆ 400 ರಾಕೆಟ್ ಲಾಂಚರ್? ಟ್ರಂಪ್ ಆತಂಕ…!

ಮೂಡುಬಿದಿರೆ: ಒಮಾನ್‌ನಲ್ಲಿ ಸಂಭವಿಸಿದ ವಾಹನ ಅಪ*ಘಾತದಲ್ಲಿ ಯುವಕ ಸಾ*ವು….!

ಬಂಟ್ವಾಳ: ಅಮ್ಮುಂಜೆ ವೃದ್ಧೆ ಕೊಲೆ ಪ್ರಕರಣ: ಮೂವರು ಆರೋಪಿಗಳಿಗೆ ಜೀವಾವಧಿ…!

ನವದೆಹಲಿ: ಚಿನ್ನದ ಬೆಲೆ ಇಳಿಯುತ್ತಾ? ವಿಶ್ವ ಚಿನ್ನ ಮಂಡಳಿಯ ಭವಿಷ್ಯ…!

error: Content is protected !!