ಜನ ಮನದ ನಾಡಿ ಮಿಡಿತ

Advertisement

ವಿಶ್ವಕಪ್ ಗಲಾಟೆ: ಅರ್ಜೆಂಟೀನಾ ವಿರುದ್ಧ ಫಿಫಾ ಕಠಿಣ ಶಿಸ್ತು ಕ್ರಮ!

ಫಿಫಾ ವಿಶ್ವಕಪ್ 2026ರ ಫೈನಲ್ ಹಾಗೂ ಸೆಮಿಫೈನಲ್ ಪಂದ್ಯಗಳ ವೇಳೆ ನಡೆದ ಗಲಾಟೆ ಮತ್ತು ನಿಯಮ ಉಲ್ಲಂಘನೆಗಳ ಹಿನ್ನೆಲೆಯಲ್ಲಿ, ಅರ್ಜೆಂಟೀನಾ ಫುಟ್‌ಬಾಲ್ ಸಂಸ್ಥೆ ಹಾಗೂ ಹಲವು ಆಟಗಾರರ ವಿರುದ್ಧ ಫಿಫಾ ಶಿಸ್ತು ಕ್ರಮ ಆರಂಭಿಸಿದೆ.

ಸ್ಪೇನ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಸೋಲಿನ ಬಳಿಕ ಮೈದಾನದಲ್ಲೇ ಆಟಗಾರರ ನಡುವೆ ಭಾರಿ ವಾಗ್ವಾದ ಮತ್ತು ತಳ್ಳಾಟ ನಡೆದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಲಿಯಾಂಡ್ರೊ ಪರೇಡೆಸ್, ನಾಹ್ಯುಯೆಲ್ ಮೊಲಿನಾ, ಥಿಯಾಗೊ ಅಲ್ಮಾಡಾ ಸೇರಿದಂತೆ ಹಲವು ಆಟಗಾರರ ವಿರುದ್ಧ ಪ್ರಕರಣ ದಾಖಲಾಗಿದೆ.

ಸಹಾಯಕ ಕೋಚ್ ರೋಬರ್ಟೊ ಅಯಾಲಾ ವಿರುದ್ಧವೂ ಕ್ರಮಕ್ಕೆ ಮುಂದಾಗಿದೆ. ಇದರ ಜೊತೆಗೆ, ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಬಳಿಕ ಅರ್ಜೆಂಟೀನಾ ಆಟಗಾರರು “ಲಾಸ್ ಮಾಲ್ವಿನಾಸ್ ಸನ್ ಅರ್ಜೆಂಟೀನಾಸ್” ಎಂಬ ರಾಜಕೀಯ ಸಂದೇಶವಿರುವ ಬ್ಯಾನರ್ ಪ್ರದರ್ಶಿಸಿದ್ದು ಕೂಡ ಫಿಫಾ ತನಿಖೆಗೆ ಕಾರಣವಾಗಿದೆ.

ಕ್ರೀಡಾಂಗಣದಲ್ಲಿ ರಾಜಕೀಯ ಸಂದೇಶಗಳನ್ನು ಪ್ರದರ್ಶಿಸುವುದು ಫಿಫಾ ನಿಯಮಗಳಿಗೆ ವಿರುದ್ಧವಾಗಿದೆ. ಅಷ್ಟೇ ಅಲ್ಲ, ಅರ್ಜೆಂಟೀನಾ ಫುಟ್‌ಬಾಲ್ ಸಂಸ್ಥೆ ವಿರುದ್ಧವೂ ಅಭಿಮಾನಿಗಳ ದುರ್ವರ್ತನೆ, ಜನಾಂಗೀಯ ನಿಂದನೆ, ಮೈದಾನಕ್ಕೆ ವಸ್ತು ಎಸೆದ ಆರೋಪ ಹಾಗೂ ಪಂದ್ಯವನ್ನು ತಡವಾಗಿ ಆರಂಭಿಸಿದ ಆರೋಪಗಳಡಿ ಪ್ರಕರಣ ದಾಖಲಾಗಿದೆ.

ಈ ಎಲ್ಲ ಪ್ರಕರಣಗಳ ವಿಚಾರಣೆ ಬಳಿಕ, ಅರ್ಜೆಂಟೀನಾ ಆಟಗಾರರು ಹಾಗೂ ಫುಟ್‌ಬಾಲ್ ಸಂಸ್ಥೆಗೆ ದಂಡ, ಅಮಾನತು ಅಥವಾ ಇತರೆ ಕಠಿಣ ಶಿಸ್ತು ಕ್ರಮ ವಿಧಿಸುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

ಮಂಗಳೂರು: ದಸರಾ ರಜೆ ವೇಳೆ ತರಗತಿ, ಪರೀಕ್ಷೆ ನಡೆಸಿದರೆ ಪ್ರತಿಭಟನೆ: ಪ್ರಮೋದ್ ಮುತಾಲಿಕ್

ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ಅಪರಿಚಿತ ಮಾನವನ ಅಸ್ಥಿಪಂಜರ ಪತ್ತೆ

ಉಡುಪಿ: ಉಡುಪಿಯಲ್ಲಿ ಸಾವಿರಾರು ರೆಕ್ಕೆ ಗೆದ್ದಲುಗಳ ಹಾರಾಟ; ಸಾರ್ವಜನಿಕರ ಗಮನ ಸೆಳೆದ ದೃಶ್ಯ

ಮುಂಬೈ: ಮುಂಬೈಯಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜಾ ಉದ್ಯಾಪನ…!

ಬಂಟ್ವಾಳ: ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಹಸಂಚಾಲಕರಾಗಿ ಪ್ರದೀಪ್ ಅಜ್ಜಿಬೆಟ್ಟು ನೇಮಕ

ಉಡುಪಿ: ಸರ್ಕಾರಿ ಜಾಗದಲ್ಲಿ ಅಕ್ರಮ ಕೆಂಪುಕಲ್ಲು ಗಣಿಗಾರಿಕೆ; ₹16 ಲಕ್ಷ ಮೌಲ್ಯದ ಸೊತ್ತು ವಶ

ಉಡುಪಿ: ಶ್ರೀಕೃಷ್ಣ ಮಠಕ್ಕೆ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಭೇಟಿ; ಶ್ರೀಕೃಷ್ಣ ದೇವರ ದರ್ಶನ..!

ಮಂಗಳೂರು: ಲೋಕಾಯುಕ್ತ ಬಲೆಗೆ ಬಿದ್ದ ಬಜ್ಪೆ ಇನ್ಸ್‌ಪೆಕ್ಟರ್‌ಗೆ 14 ದಿನಗಳ ನ್ಯಾಯಾಂಗ ಬಂಧನ

ಗುಜರಾತ್: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ; ಕರಾವಳಿಯ ಮೂವರು ಪ್ರತಿಭೆಗಳಿಗೆ ರಾಷ್ಟ್ರ ಪ್ರಶಸ್ತಿ…!

error: Content is protected !!