ಜನ ಮನದ ನಾಡಿ ಮಿಡಿತ

Advertisement

ಸ್ವರಾಜ್ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್..! ಲೋನ್ ಆಪ್ ಕಂಪೆನಿಯಿ0ದ ಬೆದರಿಕೆ ಕರೆ

ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ಬಾಯತ್ಯಾರು ಎಂಬಲ್ಲಿ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಟ್ವಿಸ್ಟ್ ಸಿಕ್ಕಿದ್ದು, ಆತ ಲೋನ್ ಆಪ್‌ನಿಂದ ಪಡೆದುಕೊಂಡ ಹಣದಿಂದ ಕಂಪನಿಯ ಬ್ಲಾಕ್ ಮೇಲ್ ಬೆದರಿಕೆಗೆ ಹೆದರಿ ಪ್ರಾಣ ಬಿಟ್ಟಿದ್ದಾನೆ.

ಪುದುವೆಟ್ಟುವಿನ ಸ್ವರಾಜ್ (24) ಆತ್ಮಹತ್ಯೆ ಮಾಡಿಕೊಂಡ ಯುವಕ.

ಸ್ವರಾಜ್ ಆನ್ ಲೈನ್ ಲೋನ್ ಆಪ್ ಕಂಪನಿಯಿಂದ ಲೋನ್ ಪಡೆದಿದ್ದು, ಹಂತಹಂತವಾಗಿ ಕಂಪನಿ ಹೆಚ್ಚುವರಿ ಹಣ ವಾಪಸ್ ಪಡೆಯಲು ಬೆದರಿಕೆಗಳನ್ನು ಹಾಕುತ್ತಿತ್ತು. ಸ್ವರಾಜ್ ವಾಟ್ಸಪ್ ನಲ್ಲಿ ಅಕ್ಕನ ಮಗಳ ಡಿಪಿ ಫೋಟೋ ಹಾಕಿದ್ದ.‌ ಇದನ್ನೇ ಬಂಡವಾಳ ಮಾಡಿಕೊಂಡ ಆಪ್ ಕಂಪನಿ ವಿದೇಶದ ವಾಟ್ಸಪ್ ನಂಬರಿನಿಂದ ಸ್ನೇಹಿತರಿಗೆ ‘ಮಗು ಮಾರಾಟಕ್ಕಿದೆ’ ಎಂದು ಬರೆದು ವಿದೇಶಿ ನಂಬರ್ ಹಾಕಿ ಸ್ವರಾಜ್ ಸ್ನೇಹಿತರಿಗೆ ಕೆಲ ದಿನಗಳ ಹಿಂದೆ ಶೇರ್ ಮಾಡಿದ್ದರು.ಇನ್ನು ಈ ವಿಷಯವನ್ನು ಸ್ಬರಾಜ್ ಗೆ ಸ್ನೇಹಿತರು ತಿಳಿಸಿದ್ದು, ಆಗಸ್ಟ್ 30 ಕ್ಕೆ ಸ್ವರಾಜ್ ತನ್ನ ಬ್ಯಾಂಕ್ ಖಾತೆಯಿಂದ 30,000 ಸಾವಿರ ಹಣ ಡ್ರಾ ಮಾಡಿ ಆಪ್ ಕಂಪನಿಗೆ ಕಟ್ಟಿದ್ದ‌. ಮತ್ತೆ ಹೆಚ್ಚುವರಿ ಹಣ ನೀಡಲು ಆಪ್ ಕಂಪನಿ ಬೆದರಿಕೆ ಹಾಕುತ್ತಿತ್ತು. ಅದಲ್ಲದೆ ಆಗಸ್ಟ್ 31 ರ ಮಧ್ಯಾಹ್ನ 2 ಗಂಟೆಗೆ ಕೊನೆಯ ಡೆಡ್ ಲೈನ್ ನಿನಗೆ ಎಂದು ಕಂಪನಿ ಸಂದೇಶ ಕಳುಹಿಸಿತ್ತು ಎನ್ನಲಾಗಿದೆ.ಈ ಎಲ್ಲಾ ವಿಚಾರದಿಂದ ನೊಂದಿದ್ದ ಸ್ಬರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

ನವದೆಹಲಿ: ಅರಬ್ಬಿ ಸಮುದ್ರದಲ್ಲಿ ಭರ್ಜರಿ ಡ್ರಗ್ಸ್ ಬೇಟೆ: ₹3 ಸಾವಿರ ಕೋಟಿ ಮೌಲ್ಯದ ಮಾದಕವಸ್ತು ವಶ..!

ಮಂಗಳೂರು: MRPL ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಭೇಟಿ; ಪರಿಸ್ಥಿತಿ ಪರಿಶೀಲನೆ..!

ಬಂಟ್ವಾಳ: ಮಂಗಳೂರು ರೈಲು ಪ್ರದೇಶ ಮೈಸೂರು ವಿಭಾಗಕ್ಕೆ: ಪ್ರಮುಖ ನಿಲ್ದಾಣಗಳಿಗೆ ಅಧಿಕಾರಿಗಳ ಭೇಟಿ.

ಬೆಂಗಳೂರು: ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಶಾಲಾ ಸಮಯ ಬದಲಾವಣೆಗೆ ಚಿಂತನೆ.

ಉಡುಪಿ: ಶಂಕರಪುರ ಮಠದಲ್ಲಿ ಅ.3, 4ರಂದು ಸಾಯಿ ಈಶ್ವರ್ ಗುರೂಜಿ ಪಂಚಾಶತ್ ಜನ್ಮ ವೈಭವ…!

ಪುತ್ತೂರು: ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಅವಧಿ ಮೀರಿದ ಮಾತ್ರೆ ವಿತರಣೆ ಆರೋಪ; ಅಧಿಕಾರಿಗಳಿಂದ ವಿಚಾರಣೆ

ನವದೆಹಲಿ: ಮೋದಿ–ಟ್ರಂಪ್ ದೂರವಾಣಿ ಮಾತುಕತೆ: ವ್ಯಾಪಾರ, ರಕ್ಷಣೆ, ಇಂಧನ ಸಹಕಾರದ ಕುರಿತು ಚರ್ಚೆ

ಮಂಗಳೂರು: ಮಂಗಳೂರು ರೈಲು ಪ್ರದೇಶ ಇಂದಿನಿಂದ ಮೈಸೂರು ವಿಭಾಗದ ಅಧೀನಕ್ಕೆ…!

ದುಬೈ: ಫ್ಲೈದುಬೈ ವಿಮಾನದಲ್ಲಿ ಕಾಕ್‌ಪಿಟ್ ಘಟನೆ: ಸಹ ಪೈಲಟ್‌ನ ಯತ್ನ ತಡೆದ ಭಾರತೀಯ ಪೈಲಟ್…!

error: Content is protected !!