ಜನ ಮನದ ನಾಡಿ ಮಿಡಿತ

Advertisement

ಗಾಂಧಿನಗರದಲ್ಲಿ ನೂತನ ಅಂಗನವಾಡಿಯ ಕೊಠಡಿ ಉದ್ಘಾಟನೆ

ಮೂಡಬಿದಿರೆ: ರಾಜ್ಯ ಸರ್ಕಾರ ಅನುದಾನ ಬಿಡುಗಡೆಯಾದ ಕೂಡಲೇ ಪುರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳ ನಡೆಯಲಿದ್ದು, ಗಾಂಧಿನಗರದಲ್ಲಿ ಹೊಸ ಪಾರ್ಕ್ ನಿರ್ಮಾಣವಾಗುತ್ತಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದ್ದಾರೆ.

ಇವರು 2020-21ನೇ ಸಾಲಿನ ಎಸ್.ಎಫ್.ಸಿ ಮುಕ್ತನಿಧಿ ಹಾಗೂ 2022-23ನೇ ಸಾಲಿನ ಪುರಸಭೆ ನಿಧಿಯಡಿ ನಿರ್ಮಾಣಗೊಂಡ ಗಾಂಧಿನಗರ ಅಂಗನವಾಡಿ ಕೇಂದ್ರದ ನೂತನ ಕೊಠಡಿಯನ್ನು ಉದ್ಘಾಟಿಸಿ ಮಾತಾನಾಡಿದ ಇವರು ಬಂಟ್ವಾಳದಿಂದ ಪೇಪರ್‌ಮಿಲ್ಲ್ ಮಾರ್ಗವಾಗಿ ಬರುವವರಿಗೆ ನೇರವಾಗಿ ಮಂಗಳೂರಿಗೆ ಹೋಗಲು ಮಾಸ್ತಿಕಟ್ಟೆ, ಗಾಂಧಿನಗರ ಮಾರ್ಗವಾಗಿ ರಿಂಗ್‌ರೋಡ್ ಕಾಮಗಾರಿ ನಡೆಯುತ್ತಿದ್ದು, ಇದರಿಂದ ಮೂಡುಬಿದಿರೆ ನಗರದಲ್ಲಿ ವಾಹನದಟ್ಟಣೆ ಕಡಿಮೆಯಾಗಲಿದೆ ಎಂದರು. ಈ ವೇಳೆ ಶಾಸಕ ಉಮಾನಾಥ ಕೋಟ್ಯಾನ್, ಗುತ್ತಿಗೆದಾರ ಎಂ.ಕಣ್ಣನ್, ಅಂಗನವಾಡಿ ಕೇಂದ್ರದ ಹಳೇ ವಿದ್ಯಾರ್ಥಿನಿ ಹಾಗೂ ಝೀ ಕನ್ನಡ ವಾಹಿನಿಯ ಡಾನ್ಸ್ ಕರ್ನಾಟಕ ಡಾನ್ಸ್ ಸ್ಪರ್ಧಿಯಾದ ಚೈತನ್ಯ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಇನ್ನೂ ಈ ಸಂದರ್ಭದಲ್ಲಿ ವಾರ್ಡ್ ಸದಸ್ಯೆ ದಿವ್ಯಾ ಜಗದೀಶ್, ಪುರಸಭೆ ಸದಸ್ಯರಾದ ನವೀನ್ ಶೆಟ್ಟಿ, ನಾಗರಾಜ ಪೂಜಾರಿ, ಶ್ವೇತಾ ಪ್ರವೀಣ್, ಸುಜಾತ ಶಶಿಕಿರಣ, ಧನಲಕ್ಷ್ಮೀ ಮಾರೂರು, ಜಯಶ್ರೀ ಕೇಶವ್, ಸೌಮ್ಯ ಶೆಟ್ಟಿ, ಮುಖ್ಯಾಧಿಕಾರಿ ಶಿವಾ ನಾಯ್ಕ್, ಇಂಜಿನಿಯರ್ ನಳಿನ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಉಡುಪಿ: ಜಾನಪದ ಕಲಾವಿದ ಡಾ. ಗಣೇಶ್ ಗಂಗೊಳ್ಳಿ ಇನ್ನಿಲ್ಲ….!

ಉಡುಪಿ: ಕೆಎಸ್‌ಆರ್‌ಟಿಸಿ ಬಸ್ ಡಿ*ಕ್ಕಿ ಹೊಡೆದು ಮಹಿಳೆ ಮೃ*ತ್ಯು….!

ಸುಬ್ರಹ್ಮಣ್ಯ: ಕನ್ನಡಚಿತ್ರ ನಟ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ..!

ಮಂಗಳೂರು: ಕೌಡಿಚ್ಚಾರಿನಲ್ಲಿ ಪಿಕಪ್ ವಾಹನ ಮೋರಿಗೆ ಢಿ*ಕ್ಕಿ…!

ಮಂಗಳೂರು: ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿ*ಕ್ಕಿ; ಮಹಿಳೆಗೆ ಗಾಯ….!

ಬಂಟ್ವಾಳ: ವಸತಿಗೃಹದ ಮುಂಭಾಗದಲ್ಲಿದ್ದ ಸ್ಕೂಟರ್ ಕಳವು; ಇಬ್ಬರ ಬಂಧನ!

ಮುಂಡ್ಕೂರು ರವೀಂದ್ರ ಶೆಟ್ಟಿ ನಿಧನಕ್ಕೆ ಬಂಟರ ಸಂಘದ ಶ್ರದ್ದಾಂಜಲಿ..!

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ…!

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ ಅಧ್ಯಕ್ಷ ತಾರಾನಾಥ ಶೆಟ್ಟಿ ಬೋಳಾರ ಇವರ ಅಧ್ಯಕ್ಷತೆಯಲ್ಲಿ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಾಂಗಣದಲ್ಲಿ ಜರಗಿತು.

error: Content is protected !!