ಜನ ಮನದ ನಾಡಿ ಮಿಡಿತ

Advertisement

ಸರ್ಕಾರದ ಯೋಜನೆಗಳನ್ನು ಮನೆಮನೆಗೆ ತಲುಪಿಸಿ; ಚುನಾವಣೆಗೆ ಸನ್ನದ್ಧರಾಗಿ… ಅಭಯ ಚಂದ್ರ ಜೈನ್ ಕರೆ

ಹಳೆಯಂಗಡಿ : ಕಾರ್ಯಕರ್ತರ ಶ್ರಮದಿಂದಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಿದೆ. ಸ್ಥಳೀಯ ಆಡಳಿತ ಚುನಾವಣೆ, ಮತ್ತು ತಾಲೂಕು ಪಂಚಾಯತ್ ಜಿಲ್ಲಾ ಪಂಚಾಯತ್ ಚುನಾವಣೆ ಶೀಘ್ರದಲ್ಲಿಯೇ ನಡೆಯಲಿರುವುದರಿಂದ ಕಾರ್ಯಕರ್ತರು ಸರ್ಕಾರದ ಯೋಜನೆಗಳನ್ನು ಮನೆಮನೆಗೆ ತಲುಪಿಸಿ ಚುನಾವಣೆಗೆ ತಯಾರಿ ನಡೆಸಬೇಕೆಂದು ಮಾಜಿ ಸಚಿವರಾದ ಕೆ ಅಭಯಚಂದ್ರ ಜೈನ್ ಕರೆ ನೀಡಿದರು.

ಅವರು ಮುಲ್ಕಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಪದಾಧಿಕಾರಿಗಳ ಮತ್ತು ನಾಯಕರುಗಳ ಸಭೆಯಲ್ಲಿ ಮಾತನಾಡಿದರು. ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೋಹನ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.

ಕೆಪಿಸಿಸಿ ಸದಸ್ಯರಾದ ವಸಂತ ಬರ್ನಾಡ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಉಲ್ಲಾಸ್ ಶೆಟ್ಟಿ, ಕಿಲ್ಪಾಡಿ ಪಂಚಾಯತ್ ಮಾಜಿ ಉಪಾಧ್ಯಕ್ಷ ಗೋಪಿನಾಥ ಪಡಂಗ, ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರ್, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಮಂಜುನಾಥ ಕಂಬಾರ, ಸೂರಿಂಜೆ ಪಂಚಾಯತ್ ಅಧ್ಯಕ್ಷೆ ಗೀತಾ ಶೆಟ್ಟಿ, ಎಕ್ಕಾರು ಮೋನಪ್ಪ ಶೆಟ್ಟಿ, ಯೋಗೀಶ್ ಕೋಟ್ಯಾನ್, ಮೊದಲಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಬೀರತಮ್ಮನಹಳ್ಳಿ ಕೆರೆಯಲ್ಲಿ ಮೀನುಗಳ ಮಾರಣಹೋಮ; ತನಿಖೆ ಆರಂಭ…!

ಕುಂದಾಪುರ: ಐವನ್ ಮಸ್ಕರೇನಸ್ ಹತ್ಯೆ; ಪೊಲೀಸ್ ತನಿಖೆಯಲ್ಲಿ ಹೊಸ ಮಾಹಿತಿ..!

ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ದಾಳಿ…!

ಬಂಟ್ವಾಳ: ಭಾರೀ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಕುಸಿತಗೊಂಡ ಮನೆಯ ಚಾವಣಿ…!

ಬಂಟ್ವಾಳ: ಸಜೀಪಮೂಡದಲ್ಲಿ ವಿದ್ಯುತ್ ಅವಘಡ; ಪೀಠೋಪಕರಣಗಳು ಸೇರಿ ದಿನನಿತ್ಯದ ವಸ್ತುಗಳು ಸುಟ್ಟು ಭಸ್ಮ…!

ವಾಷಿಂಗ್ಟನ್: ಅಮೆರಿಕ ಕಾಂಗ್ರೆಸ್‌ನಿಂದ ಡಾ. ಯು.ಟಿ. ಖಾದರ್‌ಗೆ ಪ್ರತಿಷ್ಠಿತ ಗೌರವ…!

ವಿಶ್ವಕಪ್ ಗಲಾಟೆ: ಅರ್ಜೆಂಟೀನಾ ವಿರುದ್ಧ ಫಿಫಾ ಕಠಿಣ ಶಿಸ್ತು ಕ್ರಮ!

ನವದೆಹಲಿ: ‘ಪಾಕಿಸ್ತಾನಿ ಕಾಶ್ಮೀರ’ ಅಲ್ಲ, ಅದು PoK ಮಾತ್ರ: ನ್ಯೂಯಾರ್ಕ್ ಟೈಮ್ಸ್‌ಗೆ ಭಾರತದ ತಿರುಗೇಟು…!

ವಾಷಿಂಗ್ಟನ್: ಚೀನಾ-ಪಾಕ್ ಮೂಲಕ ಇರಾನ್‌ಗೆ 400 ರಾಕೆಟ್ ಲಾಂಚರ್? ಟ್ರಂಪ್ ಆತಂಕ…!

error: Content is protected !!