ಪೆರ್ಲ: ಕುದುಕ್ಕೊಳಿ ಹವ್ವಾ ಹಸನ್ ಪೌಂಡೇಶನ್ ವತಿಯಿಂದ ನಡೆಸುತ್ತಿರುವ “ಪ್ರಕೃತಿಯೊಂದಿಗೆ ಮೈತ್ರಿ” ಅಭಿಯಾನದಂತೆ ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ಜಮೀನಿನಲ್ಲಿ ಉಚಿತವಾಗಿದೇಸೀ ಹಣ್ಣುಗಳ ಗಿಡಗಳನ್ನು ನೆಡಲಾಯಿತು.

ಹವ್ವಾ ಹಸನ್ ಪೌಂಡೇಶನ್ ನ ಸ್ಥಾಪಕ, ಅಬುದಾಬಿ ಇಂಡಿಯನ್ ಶಾಲೆಯ ಕಾರ್ಯದರ್ಶಿ, ಸಾಮಾಜಿಕ ಮುಂದಾಳು ಅಬ್ದುಲ್ ಮದುಮೂಲೆ ಗಿಡ ನೆಡುವ ಮೂಲಕ ಸಾಮಾಜಿಕ ಕಳಕಳಿಗೆ ಹೊಸ ಭಾಷ್ಯ ಬರೆದರು. ಭೂಮಿಯ ತಾಪಮಾನ ಹಾಗೂ ಮನುಷ್ಯನ ಬದುಕಿಗೆ ಹಸಿರು ವಾತವರಣ ಉಸಿರಾಗಬೇಕಿದ್ದು ಜಾತಿ ಮತ ಧರ್ಮ ಬೇಧ ಭಾವ ತೊರೆದು ಎಲ್ಲರೂ ಇದರ ಸಂರಕ್ಷಣೆ ಹಾಗೂ ಉಳಿವಿಕೆಗೆ ಪ್ರಯತ್ನ ಪಟ್ಟಲ್ಲಿ ಮುಂದಿನ ತಲೆಮಾರಿಗೆ ಇದೊಂದು ಉದಾತ್ತ ಕೊಡುಗೆಯಾಗಬಲ್ಲುದು ಎಂದು ಅವರು ಅಭಿಪ್ರಾಯಪಟ್ಟರು.

ಶ್ರೀ ಸುಬ್ರಾಯ ದೇವಸ್ಥಾನ ಆಡಳಿತ ಮೊಕ್ತೇಸರ ಪಡ್ಡಂಬೈಲು ಗುತ್ತುತಾರನಾಥ ರೈ ಕಾಟುಕುಕ್ಕೆ, ಕ್ಷೇತ್ರ ಆಡಳಿತ ಸಮಿತಿ ಟ್ರಸ್ಟಿ ರಿತೇಶ್ ಕಿರಣ್, ಸುಧಾಕರ ಕಲ್ಲಗದ್ದೆ ಮೊದಲಾದವರು ಉಪಸ್ಥಿತರಿದ್ದರು.



