ಜನ ಮನದ ನಾಡಿ ಮಿಡಿತ

Advertisement

ದಸಂಸ ಭೀಮವಾದ ವತಿಯಿಂದ ರಾಜ ಮಹಿಷಾಸುರ ಹಬ್ಬ ಆಚರಣೆ


ಉಡುಪಿ: ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ಘಟಕ ಮತ್ತು ದಸಂಸ ಭೀಮವಾದ ಉಡುಪಿ ಜಿಲ್ಲೆ ಇದರ ವತಿಯಿಂದ ಅಂಬೇಡ್ಕರ್ ಅವರ ಧಮ್ಮದೀಕ್ಷೆ ದಿನಾಚರಣೆ ಮತ್ತು ಮೂಲನಿವಾಸಿಗಳ ರಾಜ ಮಹಿಷಾಸುರ ಹಬ್ಬ ಕಾರ್ಯಕ್ರಮವನ್ನು ಬೈರಂಪಳ್ಳಿ ಗ್ರಾಮದ ಅಂಬೇಡ್ಕರ್ ಭವನದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು.


ಕಾರ್ಯಕ್ರಮ ಉದ್ಘಾಟಿಸಿ ಸಾಹಿತಿ‌ ಡಾ. ಕೆ.ಎ. ಓಬಳೇಶ್ ಮಾತನಾಡಿ, ಈ ನೆಲದ ಮೂಲನಿವಾಸಿಗಳ ರಾಜ ಮಹಿಷಾಸುರ. ಈ ದೇಶಕ್ಕೆ ವಲಸೆ ಬಂದ ಆರ್ಯರು ಮಹಿಷಾನನ್ನು ರಾಕ್ಷಸ ಎಂದು ಬಿಂಬಿಸಿ, ಚಿತ್ರಿಸಿದ್ದಾರೆ. ಮಹಿಷಾಸುರನ ಆಳ್ವಿಕೆಗೆ ಒಳಪಟ್ಟ ನಾಡು ಮಹಿಷಾಮಂಡಲವಾಗಿತ್ತು. ಮಹಿಷನ ಗುರುತು ಎಮ್ಮೆ ಎನ್ನುವ ಪರಿಕಲ್ಪನೆಯಾಗಿದೆ‌ ಎಂದರು.


ಆರ್ ಪಿಐಕೆ ಪಕ್ಷದ ಜಿಲ್ಲಾಧ್ಯಕ್ಷ ಸದಾಶಿವ ಶೆಟ್ಟಿ ಹೇರೂರು ಅಧ್ಯಕ್ಷತೆ ವಹಿಸಿದ್ದರು.
ಆರ್ ಪಿಐಕೆ ಪಕ್ಷದ ರಾಜ್ಯಸಮಿತಿಯ ಸದಸ್ಯ ಕೆ.ಬಿ. ರಾಜು ಕೊಡಗು, ಜನಪರ ಹೋರಾಟಗಾರ ಶೇಖರ್ ಹಾವಂಜೆ, ದಸಂಸ ಜಿಲ್ಲಾ ಸಂಚಾಲಕ‌ ಸಂಜೀವ ಕುಕ್ಕೆಹಳ್ಳಿ, ಜಿಲ್ಲಾ ಸಂಘಟಕ ರಮೇಶ್ ಹರಿಖಂಡಿಗೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಮೂಡುಬಿದಿರೆ: ಗರ್ಭಿಣಿ ದನಗಳ ಮೇಲೆ ಕತ್ತಿಯಿಂದ ಹ*ಲ್ಲೆ…..!

ಮಂಗಳೂರು: ಮಂಗಳೂರಿನಲ್ಲಿ ಮಾದಕ ವಸ್ತು ಮಾರಾಟಕ್ಕೆ ಯತ್ನ; ಮೂವರು ಆರೋಪಿಗಳ ಬಂಧನ..!

ಬಂಟ್ವಾಳ: ಪಾಣೆಮಂಗಳೂರಿನಲ್ಲಿ ಅಕ್ರಮ ಮರಳುಗಾರಿಕೆ ಆರೋಪ; ನೇತ್ರಾವತಿ ನದಿಯಲ್ಲಿ ಮರಳು ದಂಧೆ…!

ಬಂಟ್ವಾಳ: ಶಾಲಾ ಬಸ್ ನಿಯಮ ಪರಿಶೀಲನೆ ; ಶಾಲಾ ಬಸ್‌ಗಳನ್ನು ಪರಿಶೀಲಿಸಿದ ಟ್ರಾಫಿಕ್ ಪೋಲಿಸ್ ಎಸ್.ಐ.ಆದರ್ಶ್…!

ಬಂಟ್ವಾಳ: ಪಾಣೆಮಂಗಳೂರು ಫ್ಲೈಓವರ್ ಪಕ್ಕದ ಕಲ್ಲುರ್ಟಿ ಸನ್ನಿಧಿಯ ಬಳಿ ಕೃತಕ ನೆರೆ…..!

ಉಡುಪಿ: ಹೆಬ್ರಿಯಲ್ಲಿ ಅಂದರ್ ಬಾಹರ್ ಇಸ್ಪೀಟ್ ಜೂಜು ಅಡ್ಡೆಗೆ ಪೊಲೀಸರ ದಾಳಿ; 7 ಮಂದಿಯ ಬಂಧನ..!

ಬೆಳ್ತಂಗಡಿ: ಪಿಕಪ್ ವಾಹನ ಡಿಕ್ಕಿಯಾಗಿ ಸ್ಕೂಟರ್ ಸವಾರರಿಬ್ಬರು ಸಾ*ವು..!

ಉಡುಪಿ: ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಿ: ಮುಸ್ಲಿಂ ಬಾಂಧವ್ಯ ವೇದಿಕೆ ಆಗ್ರಹ

ಕುಂದಾಪುರ: ಕಂಟೇನರ್ ಲಾರಿ ಡಿಕ್ಕಿಯಾಗಿ ಬೈಕ್ ಸವಾರ ಮೃತ್ಯು..!

error: Content is protected !!