ಜನ ಮನದ ನಾಡಿ ಮಿಡಿತ

Advertisement

ಪ್ರಯಾಣಿಕರಿದ್ದ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡು 19 ಮಂದಿ ಗಂಭೀರ ಗಾಯ

ಉತ್ತರ ಪ್ರದೇಶದ ಇಟವಾ ಜಿಲ್ಲೆಯಲ್ಲಿ ಪ್ರಯಾಣಿಕರಿದ್ದ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡು 19 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ದೆಹಲಿ-ಸಹರ್ಸಾ ವೈಶಾಲಿ ಸೂಪರ್​ಫಾಸ್ಟ್ ಎಕ್ಸ್​ಪ್ರೆಸ್​ ರೈಲಿನ ಒಂದು ಕೋಚ್​​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ವಿಷಯ ಗೊತ್ತಾಗುತ್ತಿದ್ದಂತೆಯೇ ಅಗ್ನಿಶಾಮ ಸಿಬ್ಬಂದಿ ಸ್ಥಳಕ್ಕೆ ಡೌಡಾಯಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಬೆಂಕಿ ತಗುಲಿ ದಟ್ಟ ಹೊಗೆ ಆವರಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಗಾಬರಿಗೊಂಡ ಪ್ರಯಾಣಿಕರು ಬೋಗಿಯಿಂದ ಇಳಿದು ವೀಕ್ಷಣೆ ಮಾಡುತ್ತಿರೋದನ್ನು ನೋಡಬಹುದು.

ಬಿಹಾರದ ಶಹರ್ಸಾ ದಿಂದ ದೆಹಲಿಗೆ ರೈಲು ಪ್ರಯಾಣಿಸುತ್ತಿತ್ತು. ಬೋಗಿ ಎಸ್​-6 ನಲ್ಲಿ ಮಧ್ಯರಾತ್ರಿ 2.30ಕ್ಕೆ ಬೆಂಕಿ ಕಾಣಿಸಿಕೊಂಡಿದೆ ಎಂದು ರೈಲ್ವೇ ಇಲಾಖೆ ಅಧಿಕಾರಿ ಉದಯ್ ಶಂಕರ್ ತಿಳಿಸಿದ್ದಾರೆ. ಯಾವುದೇ ಪ್ರಾಣಹಾನಿ ಆಗಿಲ್ಲ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

ಬೆಂಗಳೂರು: ಗ್ರಾಮ ಪಂಚಾಯತ್‌ನಿಂದ ವಿಧಾನಸಭೆಯವರೆಗೆ AI ಕಡ್ಡಾಯ- ಯು.ಟಿ. ಖಾದರ್

ಬೆಂಗಳೂರು: ಸೇಫ್ ಫುಟ್‌ಪಾತ್ ಅಭಿಯಾನ ಯಶಸ್ಸು; ಪೀಣ್ಯದಲ್ಲಿ ರಾತ್ರಿ ಟ್ರಾಫಿಕ್ ಡೈವರ್ಷನ್…!

18 ಸೈನಿಕರ ಸಾವಿನ ಬಳಿಕ ಇರಾನ್ ವಿರುದ್ಧ ಹೊಸ ಯುದ್ಧ ತಂತ್ರಕ್ಕೆ ಮೊರೆ ಹೋದ ಟ್ರಂಪ್ ಆಡಳಿತ

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಮಂಜುನಾಥ್ ಶೆಟ್ಟಿ ದಂಪತಿಗೆ ಸನ್ಮಾನ

ಉಡುಪಿ: ಕರಾವಳಿ ನಿವಾಸಿಗಳ ಸಂಕಷ್ಟಕ್ಕೆ ಸ್ಪಂದಿಸಿದ ಜಿಲ್ಲಾಡಳಿತ…!

ಬಂಟ್ವಾಳ: ಮಾಣಿ ಸಮೀಪ ಜೋಗಿಬೆಟ್ಟು ರಸ್ತೆ ಕೆರೆಯಂತಾದ ದೃಶ್ಯ….!

ವಾಷಿಂಗ್ಟನ್: ಉತ್ತರ ಅಮೆರಿಕಾ ಬಂಟರ ಸಂಘದ `ದಿಬ್ಬಣ’ ಮಹಾ ಅಧಿವೇಶನ..!

ಮಂಗಳೂರು: ಮಂಗಳೂರಿನಲ್ಲಿ ಎಐ ಸಿ.ಸಿ ಕ್ಯಾಮರಾಗಳ ಅಳವಡಿಕೆ….!

ಬಂಟ್ವಾಳ: ಮಳೆ ಅನಾಹುತ: ರಾಯಿಯ ಜೀವನ್ ಪಿಂಟೋ ಮೃತದೇಹ ಪ*ತ್ತೆ…..!

error: Content is protected !!