ಜನ ಮನದ ನಾಡಿ ಮಿಡಿತ

Advertisement

ಪತಿಯನ್ನ ಸಿಲುಕಿ ಹಾಕಲು ಪ್ರಿಯಕರನ ಮಾತು ಕೇಳಿದ ಪತ್ನಿ.. ತನಿಖಾ ಸಂಸ್ಥೆಗೇ ಬಾಂಬ್ ಬೆದರಿಕೆ ಹಾಕಿ ಸಿಕ್ಕಿಬಿದ್ದ ಖತರ್ನಾಕ್ ಲೇಡಿ..!

ಆ್ಯಪ್​ನಲ್ಲಿ ಪರಿಚಯವಾದವನ ಜೊತೆ ಸಲುಗೆ ಬೆಳೆಸಿದ ಪತ್ನಿ ತನ್ನ ಪತಿಯ ಫೋನ್​ನಿಂದಲೇ RDX ಸ್ಫೋಟಿಸೋದಾಗಿ ಬೆದರಿಕೆ ಹಾಕಿರೋ ಘಟನೆ ಬೆಂಗಳೂರಿನ ಆನೇಕಲ್‌ನ ಮಾರುತಿ ಬಡಾವಣೆಯಲ್ಲಿ ನಡೆದಿದೆ.

ಕಿರಣ್ ಮತ್ತು ವಿದ್ಯಾರಾಣಿ ದಂಪತಿಗಳಾಗಿದ್ದು, ಮಾರುತಿ ಬಡಾವಣೆಯಲ್ಲಿ ವಾಸವಿದ್ದರು. ಈ ಜೋಡಿಗಳು ಮೂಲತಃ ಉತ್ತರ ಕರ್ನಾಟಕ ಮೂಲದವರಾಗಿದ್ದಾರೆ. ವಿದ್ಯಾರಾಣಿ ಮೊಬೈಲ್ ಬಳಸುತ್ತಿದ್ದು, ಈಕೆಗೆ ​ಸೋಷಿಯಲ್ ಮೀಡಿಯಾ ಆ್ಯಪ್‌ನಲ್ಲಿ ರಾಮ್‌ಪ್ರಸಾದ್ ಎಂಬ ವ್ಯಕ್ತಿಯ ಪರಿಚಯವಾಗುತ್ತದೆ. ಬಳಿಕ ವಿದ್ಯಾರಾಣಿ ಪರಿಚಯವಾದ ರಾಮ್‌ಪ್ರಸಾದ್ ಜೊತೆ ನಿರಂತರ ಚ್ಯಾಟಿಂಗ್ ಮಾಡುತ್ತಿದ್ದಳು. ಒಂದು ದಿನ ಈ ವಿಚಾರ ಗಂಡ ಕಿರಣ್‌ಗೆ ಗೊತ್ತಾಗಿ ಮೊಬೈಲ್ ಒಡೆದು ಹಾಕಿದ್ದ. ಈ ವಿಚಾರವನ್ನು ಬೇರೆ ನಂಬರ್ ಮೂಲಕ ರಾಮ್‌ಪ್ರಸಾದ್‌ಗೆ ವಿದ್ಯಾರಾಣಿ ತಿಳಿಸಿದ್ದಳು.

ಬಳಿಕ ವಿದ್ಯಾರಾಣಿಗೆ ರಾಮ್ ಪ್ರಸಾದ್ ಫ್ರೆಂಡ್ ಅಜಿತ್ ಎಂಬಾತ ಮೆಸೇಜ್ ಮಾಡಿದ್ದಾನೆ. ನೀನು ರಾಮ್ ಗೆ ಮೆಸೇಜ್ ಮಾಡು ಇಲ್ಲದಿದ್ದರೆ ನಿನ್ನ ಗಂಡನನ್ನ ಸಾಯಿಸುತ್ತೇನೆ ಎಂದು ಹೇಳಿದ್ದಾನೆ. ಮಾತ್ರವಲ್ಲದೆ, ನಿನ್ನ ಗಂಡ ಕಿರಣ್​ನನ್ನ ನಾನು ಸಾಯಿಸಿ ಸ್ಟೇಷನ್ ಗೆ ಹೋಗಿ ನಿನ್ನ ಹೆಸರನ್ನ ಹೇಳುತ್ತೇನೆ. ನೀನೇ ಸಾಯಿಸು ಎಂಂದು ಹೇಳಿದ್ದಕ್ಕೆ ನಾನು ಸಾಯಿಸಿದೆ ಎಂದು ಸರೆಂಡರ್ ಆಗುತ್ತೇನೆ ಎಂದು ಅಜಿತ್​ ಆಕೆಯನ್ನ ಹೆದರಿಸಿದ್ದಾನೆ.

ಹಾಗಾಗಿ ಅಜಿತ್ ಮೆಸೇಜ್​ಗೆ ಹೆದರಿ ವಿದ್ಯಾ ಮತ್ತೆ ರಾಮ್ ಪ್ರಸಾದ್ ಗೆ ಮೆಸೇಜ್ ಮಾಡಿದ್ದಾಳೆ. ಈ ವಿಚಾರ ಕೂಡ ಗಂಡ ಕಿರನ್​ಗೆ ಗೊತ್ತಾಗಿ ಆಕೆ ಮಾಡಿದ್ದ ಚಾಟ್ ನೋಡಿ ವಿದ್ಯಾಳ ಮೊಬೈಲ್ ಒಡೆದು ಹಾಕಿದ್ದಾನೆ. ಬಳಿಕ ಈ ಸಂಗತಿಯನ್ನು ವಿದ್ಯಾ ಅಜಿತ್ ಬಳಿ ಹೇಳಿದ್ದಾಳೆ.

ಕೊನೆಗೆ ವಿದ್ಯಾ ಹೇಳಿದ ವಿಚಾರ ಕೇಳಿ ಅಜಿತ್ ಹಾಗೂ ರಾಮ್ ಪ್ರಸಾದ್ ಒಂದು ಐಡಿಯಾ ಹೇಳಿದ್ದಾರೆ. ನಾನು ಕಳುಹಿಸುವ ಮೆಸೇಜ್‌ನ ಗಂಡನ ನಂಬರ್‌ನಿಂದ ಫಾರ್ವಡ್ ಮಾಡು ಅಂತ ಸೂಚನೆ ನೀಡಿದ್ದಾರೆ. ಡಿಸೆಂಬರ್ 5ರಂದು RDX ಬಾಂಬ್ ಹಾಕುವುದಾಗಿ ಬೆದರಿಕೆ ಸಂದೇಶ ಬರೆದು ಕಳುಹಿಸಿ ಬಳಿಕ ಗಂಡ ಕಿರಣ್ ಮೊಬೈಲ್​ನಿಂದ ತನಿಖಾ ಸಂಸ್ಥೆಗಳಿಗೆ ರವಾನಿಸುವುದಾಗಿ ಹೇಳಿದ್ದಾರೆ. ಅಜಿತ್​ ಮತ್ತು ರಾಮ್​ ಹೇಳಿದಂತೆಯೇ ಆ ಸಂದೇಶವನ್ನು ವಿದ್ಯಾ ಗಂಡನ ಮೊಬೈಲ್​ನಿಂದ ತನಿಖಾ ಸಂಸ್ಥೆಗೆ ಕಳುಹಿಸುತ್ತಾಳೆ.

ಮೆಸೇಜ್​ ಕಳುಹಿಸಿದ ಬಳಿಕ ಗಂಡನ ಮೊಬೈಲ್‌ನಿಂದ ಮೆಸೇಜ್ ಡಿಲೀಟ್ ಮಾಡಿದ್ದಳು. ಆದರೆ ಅತ್ತ ಕಡೆಯಿಂದ ತನಿಖಾ ಸಂಸ್ಥೆ ಈ ಮೆಸೇಜ್ ಬಂದಿದ್ದ ನಂಬರ್‌ನ ಮೂಲ ಹುಡುಕಿ ಹೊರಟಿದ್ದಾರೆ. ಬಳಿಕ ಮನೆಗೆ ಬಂದು ಇಬ್ಬರನ್ನು ವಿಚಾರಣೆಗೊಳಪಡಿಸಿದಾಗ ಸತ್ಯ ಬಯಲಿಗೆ ಬಂದಿದೆ. ಈ ಸಂಬಂಧ ಆನೇಕಲ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸದ್ಯ ಪ್ರಿಯಕರ ಮತ್ತು ಆತನ ಸ್ನೇಹಿತನ ಪತ್ತೆಗಾಗಿ ಆನೇಕಲ್ ಪೊಲೀಸರ ತಂಡ ಬಲೆ ಬೀಸಿದೆ.

Leave a Reply

Your email address will not be published. Required fields are marked *

ಮಂಗಳೂರು: ಆಟವಾಡುತ್ತಾ 15 ಅಡಿ ಆಳದ ನೀರಿದ್ದ ಬಾವಿಗೆ ಬಿದ್ದ ಹೆಣ್ಣು ಮಗು….!

ಮಂಗಳೂರು: ಕಲ್ಲಡ್ಕ ಪ್ರಭಾಕರ್ ಭಟ್ ಅವರ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ..!

ಬಂಟ್ವಾಳ: ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ “ಶ್ರೀರಾಮನ ಚರಿತ್ರೆಯ” ಯಕ್ಷಗಾನ….!

ಮಂಗಳೂರು: ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ’ ಕೃತಿ ಬಿಡುಗಡೆ..!

ಬಂಟ್ವಾಳ: ಜೋರಾದ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿ..!

ಉಡುಪಿ: ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಮೋಸ ಮಾಡಿದ ಮಹಿಳೆ..!

ದುಬೈ: ಅಕ್ಟೋಬರ್ 25 ರಂದು ದುಬೈನಲ್ಲಿ ದುಬೈ ಗಡಿನಾಡ ಉತ್ಸವ

ಮಂಗಳೂರು: ಅಶೋಕ ಜನಮನ ಕಾರ್ಯಕ್ರಮ ಆಯೋಜನೆ; ನೂಕು ನುಗ್ಗಲು ಉಂಟಾಗಿ ಅಸ್ವಸ್ಥರಾದ 11ಕ್ಕೂ ಹೆಚ್ಚು ಜನ…!

ಬಂಟ್ವಾಳ: ದ.ಕ.ಜಿಲ್ಲಾ ತುಳು ನಾಟಕ ಕಲಾವಿದರ ಒಕ್ಕೂಟ ವಾರ್ಷಿಕ ಮಹಾಸಭೆ; ನೂತನ ಅಧ್ಯಕ್ಷರಾಗಿ ಕಿಶೋರ್ ಡಿ.ಶೆಟ್ಟಿ ಪುನರಾಯ್ಕೆ….!

error: Content is protected !!