ಆ್ಯಪ್‌ನಲ್ಲಿ ಪರಿಚಯವಾದವನ ಜೊತೆ ಸಲುಗೆ ಬೆಳೆಸಿದ ಪತ್ನಿ ತನ್ನ ಪತಿಯ ಫೋನ್ನಿಂದಲೇ RDX ಸ್ಫೋಟಿಸೋದಾಗಿ ಬೆದರಿಕೆ ಹಾಕಿರೋ ಘಟನೆ ಬೆಂಗಳೂರಿನ ಆನೇಕಲ್‌ನ ಮಾರುತಿ ಬಡಾವಣೆಯಲ್ಲಿ ನಡೆದಿದೆ.
ಕಿರಣ್ ಮತ್ತು ವಿದ್ಯಾರಾಣಿ ದಂಪತಿಗಳಾಗಿದ್ದು, ಮಾರುತಿ ಬಡಾವಣೆಯಲ್ಲಿ ವಾಸವಿದ್ದರು. ಈ ಜೋಡಿಗಳು ಮೂಲತಃ ಉತ್ತರ ಕರ್ನಾಟಕ ಮೂಲದವರಾಗಿದ್ದಾರೆ. ವಿದ್ಯಾರಾಣಿ ಮೊಬೈಲ್ ಬಳಸುತ್ತಿದ್ದು, ಈಕೆಗೆ ಸೋಷಿಯಲ್ ಮೀಡಿಯಾ ಆ್ಯಪ್‌ನಲ್ಲಿ ರಾಮ್‌ಪ್ರಸಾದ್ ಎಂಬ ವ್ಯಕ್ತಿಯ ಪರಿಚಯವಾಗುತ್ತದೆ. ಬಳಿಕ ವಿದ್ಯಾರಾಣಿ ಪರಿಚಯವಾದ ರಾಮ್‌ಪ್ರಸಾದ್ ಜೊತೆ ನಿರಂತರ ಚ್ಯಾಟಿಂಗ್ ಮಾಡುತ್ತಿದ್ದಳು. ಒಂದು ದಿನ ಈ ವಿಚಾರ ಗಂಡ ಕಿರಣ್‌ಗೆ ಗೊತ್ತಾಗಿ ಮೊಬೈಲ್ ಒಡೆದು ಹಾಕಿದ್ದ. ಈ ವಿಚಾರವನ್ನು ಬೇರೆ ನಂಬರ್ ಮೂಲಕ ರಾಮ್‌ಪ್ರಸಾದ್‌ಗೆ ವಿದ್ಯಾರಾಣಿ ತಿಳಿಸಿದ್ದಳು.
ಬಳಿಕ ವಿದ್ಯಾರಾಣಿಗೆ ರಾಮ್ ಪ್ರಸಾದ್ ಫ್ರೆಂಡ್ ಅಜಿತ್ ಎಂಬಾತ ಮೆಸೇಜ್ ಮಾಡಿದ್ದಾನೆ. ನೀನು ರಾಮ್ ಗೆ ಮೆಸೇಜ್ ಮಾಡು ಇಲ್ಲದಿದ್ದರೆ ನಿನ್ನ ಗಂಡನನ್ನ ಸಾಯಿಸುತ್ತೇನೆ ಎಂದು ಹೇಳಿದ್ದಾನೆ. ಮಾತ್ರವಲ್ಲದೆ, ನಿನ್ನ ಗಂಡ ಕಿರಣ್ನನ್ನ ನಾನು ಸಾಯಿಸಿ ಸ್ಟೇಷನ್ ಗೆ ಹೋಗಿ ನಿನ್ನ ಹೆಸರನ್ನ ಹೇಳುತ್ತೇನೆ. ನೀನೇ ಸಾಯಿಸು ಎಂಂದು ಹೇಳಿದ್ದಕ್ಕೆ ನಾನು ಸಾಯಿಸಿದೆ ಎಂದು ಸರೆಂಡರ್ ಆಗುತ್ತೇನೆ ಎಂದು ಅಜಿತ್ ಆಕೆಯನ್ನ ಹೆದರಿಸಿದ್ದಾನೆ.
ಹಾಗಾಗಿ ಅಜಿತ್ ಮೆಸೇಜ್ಗೆ ಹೆದರಿ ವಿದ್ಯಾ ಮತ್ತೆ ರಾಮ್ ಪ್ರಸಾದ್ ಗೆ ಮೆಸೇಜ್ ಮಾಡಿದ್ದಾಳೆ. ಈ ವಿಚಾರ ಕೂಡ ಗಂಡ ಕಿರನ್ಗೆ ಗೊತ್ತಾಗಿ ಆಕೆ ಮಾಡಿದ್ದ ಚಾಟ್ ನೋಡಿ ವಿದ್ಯಾಳ ಮೊಬೈಲ್ ಒಡೆದು ಹಾಕಿದ್ದಾನೆ. ಬಳಿಕ ಈ ಸಂಗತಿಯನ್ನು ವಿದ್ಯಾ ಅಜಿತ್ ಬಳಿ ಹೇಳಿದ್ದಾಳೆ.
ಕೊನೆಗೆ ವಿದ್ಯಾ ಹೇಳಿದ ವಿಚಾರ ಕೇಳಿ ಅಜಿತ್ ಹಾಗೂ ರಾಮ್ ಪ್ರಸಾದ್ ಒಂದು ಐಡಿಯಾ ಹೇಳಿದ್ದಾರೆ. ನಾನು ಕಳುಹಿಸುವ ಮೆಸೇಜ್‌ನ ಗಂಡನ ನಂಬರ್‌ನಿಂದ ಫಾರ್ವಡ್ ಮಾಡು ಅಂತ ಸೂಚನೆ ನೀಡಿದ್ದಾರೆ. ಡಿಸೆಂಬರ್ 5ರಂದು RDX ಬಾಂಬ್ ಹಾಕುವುದಾಗಿ ಬೆದರಿಕೆ ಸಂದೇಶ ಬರೆದು ಕಳುಹಿಸಿ ಬಳಿಕ ಗಂಡ ಕಿರಣ್ ಮೊಬೈಲ್‌ನಿಂದ ತನಿಖಾ ಸಂಸ್ಥೆಗಳಿಗೆ ರವಾನಿಸುವುದಾಗಿ ಹೇಳಿದ್ದಾರೆ. ಅಜಿತ್ ಮತ್ತು ರಾಮ್ ಹೇಳಿದಂತೆಯೇ ಆ ಸಂದೇಶವನ್ನು ವಿದ್ಯಾ ಗಂಡನ ಮೊಬೈಲ್‌ನಿಂದ ತನಿಖಾ ಸಂಸ್ಥೆಗೆ ಕಳುಹಿಸುತ್ತಾಳೆ.
ಮೆಸೇಜ್ ಕಳುಹಿಸಿದ ಬಳಿಕ ಗಂಡನ ಮೊಬೈಲ್‌ನಿಂದ ಮೆಸೇಜ್ ಡಿಲೀಟ್ ಮಾಡಿದ್ದಳು. ಆದರೆ ಅತ್ತ ಕಡೆಯಿಂದ ತನಿಖಾ ಸಂಸ್ಥೆ ಈ ಮೆಸೇಜ್ ಬಂದಿದ್ದ ನಂಬರ್‌ನ ಮೂಲ ಹುಡುಕಿ ಹೊರಟಿದ್ದಾರೆ. ಬಳಿಕ ಮನೆಗೆ ಬಂದು ಇಬ್ಬರನ್ನು ವಿಚಾರಣೆಗೊಳಪಡಿಸಿದಾಗ ಸತ್ಯ ಬಯಲಿಗೆ ಬಂದಿದೆ. ಈ ಸಂಬಂಧ ಆನೇಕಲ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಸದ್ಯ ಪ್ರಿಯಕರ ಮತ್ತು ಆತನ ಸ್ನೇಹಿತನ ಪತ್ತೆಗಾಗಿ ಆನೇಕಲ್ ಪೊಲೀಸರ ತಂಡ ಬಲೆ ಬೀಸಿದೆ.
ತಾಲೂಕಿನ ವಿವಿಧೆಡೆ ಚಿರತೆ ಓಡಾಟ ಕಂಡುಬಂದಿರುವ ಬಗ್ಗೆ ಸ್ಥಳೀಯರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಎರಡು ಕಡೆ ಬೋನು…
ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಮಾಡೂರು ಯೂಸುಫ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳಿಗೆ ಮಂಗಳೂರಿನ ಎರಡನೇ ಹೆಚ್ಚುವರಿ…
ಪತಿಯ ಸ್ನೇಹಿತೆಯ ಮೇಲೆ ಅತ್ಯಾಚಾರ ನಡೆಸಲು ಸುಪಾರಿ ನೀಡಿದ ಆರೋಪದಲ್ಲಿ ಮಹಿಳೆಯೊಬ್ಬಳನ್ನು ಸೇರಿ ಐವರನ್ನು ಪೊಲೀಸರು ಬಂಧಿಸಿರುವ ಘಟನೆ ಕೇರಳದ…
ಕೊಲ್ಲೂರು ಠಾಣಾ ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿದ್ದ ಬೀಡಾಡಿ ದನವನ್ನು ಬಿಳಿ ಬಣ್ಣದ ಸ್ವೀಫ್ಟ್ ಡಿಸೈರ್ ಕಾರಿನಲ್ಲಿ ಹಿಂಸಾತ್ಮಕವಾಗಿ ಎಳೆದುಕೊಂಡು ಹೋದ…
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ. ಟ್ರಸ್ಟ್ ಹಾಗೂ ಜನಜಾಗೃತಿ ವೇದಿಕೆ ಟ್ರಸ್ಟ್ ದಕ್ಷಿಣ ಕನ್ನಡ ಜಿಲ್ಲೆ ಇದರ…
ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಮಹಾತ್ಮ ಗಾಂಧೀಜಿಯವರ 157ನೇ ಜನ್ಮದಿನದ ಅಂಗವಾಗಿ ಶುಕ್ರವಾರ ನಗರದ ರಾಜಾಜಿ…