ಮುಲ್ಕಿ: 550ಕ್ಕೂ ಮಿಕ್ಕಿ ಚಾನೆಲ್ ಗಳಿರುವ, ಅತಿ ಹೆಚ್ಚು ವೇಗದ ಇಂಟರ್ನೆಟ್ ಹೊಂದಿರುವ, 14ಕ್ಕೂ ಮಿಕ್ಕಿ ಒಟಿ ಟಿ ಅಪ್ಲಿಕೇಶನ್ ಸೌಲಭ್ಯದ ಹಾಗೂ ಅನ್ ಲಿಮಿಟೆಡ್ ಲ್ಯಾಂಡ್ ಲೈನ್ ಕರೆಗಳಿರುವ ಸೌಲಭ್ಯದ ಜಿಯೋ ಫೈಬರ್ ಡಿ. 6ರಂದು ಮುಲ್ಕಿಯ ಪ್ರಕಾಶ್ ಭವನದಲ್ಲಿರುವ ಪ್ರತಿಷ್ಠಿತ ಸುಮುಖ ಸ್ಟಾರ್ ವಿಷನ್ ನಲ್ಲಿ ಲೋಕಾರ್ಪಣೆಗೊಂಡಿತು.


ಮುಲ್ಕಿ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಸುಭಾಶ್ ಶೆಟ್ಟಿ ಕೇಕ್ ಕತ್ತರಿಸುವ ಮೂಲಕ ಜಿಯೋ ಫೈಬರ್ ಲೋಕಾರ್ಪಣೆಗೊಳಿಸಿ ಮಾತನಾಡಿ ಮುಲ್ಕಿ ಪರಿಸರದ ಜನತೆಗೆ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಜಿಯೋ ಫೈಬರ್ ಲೋಕಾರ್ಪಣೆಗೊಂಡಿದ್ದು ಗ್ರಾಹಕರು ಸದುಪಯೋಗಪಡಿಸಿಕೊಂಡು ನೆಟ್ವರ್ಕ್ ಬೆಂಬಲಿಸಿ ಸದುಪಯೋಗಪಡಿಸಿಕೊಳ್ಳಿ ಎಂದರು.ಮುಲ್ಕಿ ನಗರ ಪಂಚಾಯತ್ ಮಾಜಿ ಉಪಾಧ್ಯಕ್ಷ ಸತೀಶ್ ಅಂಚನ್ ಮಾತನಾಡಿ ಜಿಯೋ ಫೈಬರ್ ಮೂಲಕ ಗ್ರಾಹಕರು , ಉದ್ಯಮಿಗಳು ತಮ್ಮ ಉದ್ಯಮದಲ್ಲಿ ಯಶಸ್ಸು ಸಾಧಿಸಲಿ ಎಂದು ಶುಭ ಹಾರೈಸಿದರು.


ದಕ್ಷಿಣ ಕನ್ನಡ ಜಿಲ್ಲೆಯ ಜಿಯೋ ಮ್ಯಾನೇಜರ್ ಹರೀಶ್ ಪಾಟಾಳಿ ಜಿಯೋ ಫೈಬರ್ ಉಪಯೋಗ ಹಾಗೂ ಸಬಲತ್ತುಗಳ ಬಗ್ಗೆ ಮಾಹಿತಿ ನೀಡಿದರು.ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿ ಲ.ಅರ್ಜುನ್ ಹಿರೇಮಠ ಕೆಎಸ್ ರಾವ್ ನಗರ, ಪ್ರತಿಷ್ಠಿತ ಸುಮುಖ ಸ್ಟಾರ್ ವಿಷನ್ ನ ಪಾಲುದಾರರಾದ ಸತೀಶ್ ಮುಂಚೂರು, ಸೂರಜ್ ಅಂಚನ್, ಯಜ್ಞೇಶ್, ಗಣೇಶ್, ಮ್ಯಾನೇಜರ್ ಬಾಲಕೃಷ್ಣ ಮುಂಚೂರು, ಶಿವಾನಂದ ಆರ್ ಕೆ ಮತ್ತಿತರರು ಉಪಸ್ಥಿತರಿದ್ದರು ದ.ಕ.ಜಿಲ್ಲಾ ಜಿಯೋ ಫೈಬರ್ ಪ್ರಬಂದಕ ಕಿರಣ್ ಕುಮಾರ್ ಶೆಟ್ಟಿ ಬೆಳ್ತಂಗಡಿ ನಿರೂಪಿಸಿದರು.ಮುಲ್ಕಿ ಪರಿಸರದಲ್ಲಿ ಜಿಯೋ ಫೈಬರ್ ಪ್ರಥಮ ಗ್ರಾಹಕರಾದ ಕೆ ಎಸ್ ರಾವ್ ನಗರದ ಹಿಲರಿ ಡಿ’ಸೋಜ ರವರನ್ನು ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು ಜಿಯೋ ಫೈಬರ್ ಕೇಬಲ್ ಅಳವಡಿಕೆ ಮತ್ತು ತಾಂತ್ರಿಕ ವಿಭಾಗದಲ್ಲಿ ದುಡಿದಿರುವ ಸಿಬ್ಬಂದಿಗಳನ್ನು ಗೌರವಿಸಲಾಯಿತು.












