ಬಂಟ್ವಾಳ: ಮಗನ ಜೊತೆಯಲ್ಲಿ ಪೇಟೆಗೆ ಬಂದು ಕಾಣೆಯಾಗಿದ್ದ ವೃದ್ದರೋರ್ವರನ್ನು ಪತ್ತೆ ಹಚ್ಚಿದ ಪೋಲೀಸರು ಅವರನ್ನು ಆಸ್ಪತ್ರೆಗೆ ದಾಖಲು ಪಡಿಸಿದ ಘಟನೆ ನಡೆದಿದೆ.
ಕಾವಳ ಪಡೂರು ಗ್ರಾಮದ ವಗ್ಗ ಸಮೀಪದ ಕೆಲೆಂಜಕೋಡಿ ಮಾಂಗಜೆ ನಿವಾಸಿ ಜಾನ್ ವಾಸ್ (88) ಕಾಣೆಯಾಗಿದ್ದ ವ್ಯಕ್ತಿ.ಅವರನ್ನು ಗೋರೆಮಾರ್ ಗುಡ್ಡವೊಂದರಲ್ಲಿ ಪತ್ತೆ ಹಚ್ಚಿದ ಪೋಲೀಸರು ಬಳಿಕ ಬಿಸಿರೋಡಿನ ಸೋಮಯಾಜಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಡಿಕೆ ಮಾರಟ ಮಾಡುವ ಉದ್ದೇಶದಿಂದ ಪೇಟೆಗೆ ಬಂದ ಮಗನಜೊತೆಗೆ ಬಂದಿದ್ದ ವೃದ್ದ ಜಾನ್ ವಾಸ್ ಅವರು ಡಿ.6 ರಂದು ಬಿಸಿರೋಡಿನ ಕೈಕಂಬ ಎಂಬಲ್ಲಿಂದ ಕಾಣೆಯಾಗಿದ್ದರು.
ಹಾಗಾಗಿ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಇವರ ಪತ್ತೆಗಾಗಿ ಮನೆಯವರು ಪೋಲಿಸರಿಗೆ ದೂರು ನೀಡಿ ಮನವಿ ಮಾಡಿಕೊಂಡಿದ್ದರು.
ಇವರ ದೂರಿನಂತೆ ಬಂಟ್ವಾಳ ಪೋಲೀಸ್ ಸಬ್ ಇನ್ಸ್ ಪೆಕ್ಟರ್ ರಾಮಕೃಷ್ಣ ಅವರ ನೇತ್ರತ್ವದಲ್ಲಿ ಅಪರಾಧ ವಿಭಾಗದ ಸಿಬ್ಬಂದಿಗಳಾದ ರಾಜೇಶ್ ಮತ್ತು ಇರ್ಶಾದ್ ಅವರು ಬಿಸಿರೋಡಿನ ಸುತ್ತಮುತ್ತಲು ಸ್ಚತಃ ಕಾರಿನ ಮೂಲಕ ನಿನ್ನೆಯಿಂದ ಹುಡುಕಾಟ ನಡೆಸಿ ಕೊನೆಗೂ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಣೆಯಾದ ಜಾನ್ ವಾಸ್ ಅವರ ಪತ್ತೆಗಾಗಿ ಗುರುವಾರ ಸಂಜೆಯಿಂದ ಇವರು ನಿರಂತರವಾಗಿ ಹುಡುಕಾಟ ನಡೆಸಿದ್ದರು. ಇಂದು ಸಂಜೆ ವೇಳೆ ಗೋರೆಮಾರ್ ಗುಡ್ಡವೊಂದರಲ್ಲಿ ಇವರು ಇರುವ ಬಗ್ಗೆ ಮಾಹಿತಿ ಲಭ್ಯವಾಗಿ ಅವರನ್ನು ಕುಟುಂಬದ ಕೈಗೆ ಒಪ್ಪಿಸಿದ್ದಾರೆ.
ನಿನ್ನೆಯಿಂದ ಹೊಟ್ಟೆಗೆ ಊಟವಿಲ್ಲದೆ ಕೊಳಕು ಬಟ್ಟೆಯಲ್ಲಿದ್ದ ಜಾನ್ ವಾಸ್ ಅವರಿಗೆ ತಿನ್ನಲು ಆಹಾರ ನೀಡಿ, ಬಟ್ಟೆಯನ್ನು ಬದಲಾವಣೆ ಮಾಡಿದ ಪೋಲೀಸರು ಅವರ ಆರೋಗ್ಯದಲ್ಲಿ ವ್ಯತ್ಯಾಸ ಕಂಡ ಹಿನ್ನೆಲೆಯಲ್ಲಿ ಪತ್ತೆ ಹಚ್ಚಿದ ಕೂಡಲೇ ಬಿಸಿರೋಡಿನ ಸೋಮಯಾಜಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.ರಾಜೇಶ್ ಮತ್ತು ಇರ್ಶಾದ್ ಅವರ ಕಾರ್ಯಕ್ಕೆ ಕುಟುಂಬಸ್ಥರು ಹಾಗೂ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಯುಎಇ ಮೂಲದ ಟೋರ್ಟಿಲ್ಲಾ ಮತ್ತು ಫ್ಲಾಟ್‌ಬ್ರೆಡ್ ತಯಾರಕರಾದ ಫ್ಲೋರ್ ಮಾಸ್ಟರ್ಸ್, ಆಂಧ್ರಪ್ರದೇಶದಲ್ಲಿ ವಿಶ್ವ ದರ್ಜೆಯ ಸಂಯೋಜಿತ ಫ್ಲಾಟ್‌ಬ್ರೆಡ್ ಉತ್ಪಾದನಾ ಪರಿಸರ…
ಕಾರಿಗೆ ಖಾಸಗಿ ಬಸ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಪುಟ್ಟ ಮಕ್ಕಳು ಸಹಿತ ಚಾಲಕ ಅಪಾಯದಿಂದ ಪಾರಾಗಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ…
ಅಮೆರಿಕ ಮತ್ತು ಇರಾನ್ ನಡುವೆ ಪರ್ಷಿಯನ್ ಕೊಲ್ಲಿಯಲ್ಲಿನ ಮಿಲಿಟರಿ ದಾಳಿಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ…
ದೇಶಾದ್ಯಂತ ವ್ಯಾಪಕ ಸಂಚಲನ ಮೂಡಿಸಿದ್ದ ನೀಟ್-ಯುಜಿ (NEET-UG) ಪರೀಕ್ಷಾ ಅಕ್ರಮ ಹಾಗೂ ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ತೀವ್ರ…
ನಗರದ ಲಾಲ್‌ಬಾಗ್ ಸಿಗ್ನಲ್ ಸಮೀಪ ಶನಿವಾರ ಮಧ್ಯಾಹ್ನ ಸಾರ್ವಜನಿಕರ ಕಣ್ಣೆದುರಲ್ಲೇ ಭೀಕರ ಮಾರಕಾಸ್ತ್ರ ದಾಳಿ ನಡೆದಿದ್ದು, ಪ್ರಸಿದ್ಧ ರೌಡಿಶೀಟರ್ ಒಬ್ಬ…
ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇದೀಗ ಆತನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ವಿಷಸೇವನೆ…