ಪುಟ್ಟ ಪುಟ್ಟ ಮರಿಗಳು ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ??? ಮಾತು ಬಾರದ ಪ್ರಾಣಿಗಳನ್ನ ನಾವು ದೇವರಂತೆ ಕಾಣುವಾಗ ಇಲ್ಲೊಬ್ಬ ನರ ರಾಕ್ಷಸ ಪುಟ್ಟ ನಾಯಿ ಮರಿಯನ್ನ ಎತ್ತಿ ನೆಲಕ್ಕೆ ಹೊಡೆದು, ಅದನ್ನ ತುಳಿದು ಕೊಂದಿದ್ದಾನೆ .

ಇದಕ್ಕೆ ಸಂಬoಧ ಪಟ್ಟ ವಿಡಿಯೋ ಇದೀಗ ನೆಟ್ಟಿಗರ ರಕ್ತ ಕುದಿಯುವಂತೆ ಮಾಡಿದೆ. ವಿಡಿಯೋದಲ್ಲಿ ವ್ಯಕ್ತಿಯೋರ್ವ ರಸ್ತೆ ಬದಿಯಲ್ಲಿ ಕುಳಿತುಕೊಂಡಿರುವಾಗ ಮುದ್ದಾದ ನಾಯಿ ಮರಿಯೊಂದು ಆಟ ಆಡುತ್ತ ಅವನ ಹತ್ತಿರ ಬರುತ್ತದೆ. ನಾಯಿ ಮರಿಗಳು ಕಂಡ ಕೂಡಲೇ ಅದನ್ನೆತ್ತಿ ಮುದ್ದಾಡುವ ಜನರ ನಡುವೆ ಈತ ಮಾಡಿದ್ದು ಮನುಷ್ಯ ಕುಲವೇ ಸಂಕಟ ಪಡುವ ಕೆಲಸ. ಆ ನಾಯಿ ಮರಿಯನ್ನ ಎತ್ತಿ ರಸ್ತೆಗೆ ಜೋರಾಗಿ ಬೀಸಾಡಿದ್ದಾನೆ.
ಅದಾದ ಮೇಲೆಯೂ ಬಿಡದ ರಕ್ಕಸ ಯುವಕ ನಾಯಿಯನ್ನ ತುಳಿದು ಕೊಲೆ ಮಾಡಿದ್ದಾನೆ. . ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ವಿಡಿಯೋ ನೋಡಿ ಸ್ವತಹ ಮಧ್ಯಪ್ರದೇಶದ ಸಿಎಂ ಶಿವರಾಜ್? ಸಿಂಗ್ ಚೌಹಣ್, ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧ್ಯಾ ಕೂಡ ತೀವ್ರವಾಗಿ ಖಂಡನೆ ವ್ಯಕ್ತಪಡಿಸಿದ್ದಾರೆ. ಇಂತಹ ಕ್ರೂರತೆ ತೋರಿದ ಪಾಪಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಸಿಎಂ ತಿಳಿಸಿದ್ದಾರೆ.



