ಜನ ಮನದ ನಾಡಿ ಮಿಡಿತ

Advertisement

ಬಂಟ್ವಾಳ: ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ ವ್ಯಕ್ತಿಯೋರ್ವನಿಗೆ ಕಾರೊಂದು ಡಿಕ್ಕಿ

ಬಂಟ್ವಾಳ: ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ ವ್ಯಕ್ತಿಯೋರ್ವನಿಗೆ ಕಾರೊಂದು ಡಿಕ್ಕಿ ಹೊಡೆದು ಗಾಯಗೊಂಡ ಘಟನೆ ನಡೆದಿದ್ದು, ಘಟನೆಯ ಕುರಿತಾಗಿ ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ತಡವಾಗಿ ಪ್ರಕರಣ ದಾಖಲಾಗಿದೆ.


ಬಿಸಿರೋಡಿನ ತಲಪಾಡಿ ಬಸ್ ಡಿಪೋ ದ ಮುಂಭಾಗದಲ್ಲಿ ರಸ್ತೆಯ ಬದಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಮಂಗಳೂರು ಬೆಂಗಳೂರು ಹೆದ್ದಾರಿಯಲ್ಲಿ ಬಿಸಿರೋಡು ಕಡೆಯಿಂದ ಬಂದ ಕಾರು ಡಿಕ್ಕಿಯಾಗಿದೆ.
ಚಿತ್ರದುರ್ಗಾ ತಾಲೂಕಿನ ಮಾಳಪ್ಪನ ಹಟ್ಟಿಮನೆ ನಿವಾಸಿ ಆರ್.ಪ್ರಭು ಗಾಯಗೊಂಡವರು.
ಕಿಸನ್ ಎನ್ನುವ ವ್ಯಕ್ತಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ಕಾರು ಚಾಲನೆ ಮಾಡಿಕೊಂಡು ‌ಬಂದ ಕಾರಣದಿಂದ ಈ ಅಪಘಾತ ಸಂಭವಿಸಿದ್ದು, ಅಪಘಾತದಿಂದ ಆರ್.ಪ್ರಭು ಅವರಿಗೆ ಗಾಯವಾಗಿತ್ತು.
‌‌‌ ಗಾಯಗೊಂಡಿದ್ದ ಆರ್. ಪ್ರಭು ಅವರನ್ನು ಬಂಟ್ವಾಳ ‌ಸರಕಾರಿ ಆಸ್ಪತ್ರೆಗೆ ದಾಖಲಿಸಿಲಾಗಿದ್ದು, ಚಿಕಿತ್ಸಾ ಹಾಗೂ ಖರ್ಚು ವೆಚ್ಚಗೆ ಕಾರು ಚಾಲಕ ಕೊಡುತ್ತೇನೆಂದು ಹೇಳಿ ಮೋಸ ಮಾಡಿದ್ದ, ಹಾಗಾಗಿ ತಡವಾಗಿ ದೂರು ನೀಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಕಾರು ಮತ್ತು ಬೈಕ್ ನಡುವೆ ಸಜೀಪ ನಡು ಎಂಬಲ್ಲಿ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ಬೈಕ್ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಬಗ್ಗೆ ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯ ಲ್ಲಿ ದೂರು ದಾಖಲಾಗಿದೆ.
ಲೊರೆಟ್ಟೋ ನಿವಾಸಿ ಖಲಂದರ್ ಶಾಫಿ ಗಾಯಗೊಂಡ ವ್ಯಕ್ತಿ.
ಖಲಂದರ್ ಶಾಫಿ ಅವರು ಮುಡಿಪು ಕಡೆಯಿಂದ ಲೊರೆಟ್ಟೊ ಕಡೆಗೆ ಮುಂಜಾನೆ ಸುಮಾರು 3 ಗಂಟೆ ವೇಳೆ ದ್ವಿ ಚಕ್ರವಾಹನದಲ್ಲಿ ಬರುತ್ತಿದ್ದ ವೇಳೆ ಬಿಸಿರೋಡಿನ ಕಡೆಯಿಂದ ಮುಡಿಪು ಕಡೆಗೆ ಹೋಗುತ್ತಿದ್ದ ಕಾರು ನಜೀಪ ನಡು ಎಂಬಲ್ಲಿ ಡಿಕ್ಕಿ ಹೊಡೆದಿದೆ.
‌ಡಿಕ್ಕಿಯಿಂದ ಬೈಕ್ ಖಲಂದರ್ ಅವರಿಗೆ ಗಾಯವಾಗಿದ್ದು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರು ಚಾಲಕ ರಿತೇಶ್ ಅವರ ಅತೀ ವೇಗ ಮತ್ತು ಅಜಾಗರೂಕತೆಯಿಂದ ಮಾಡಿದ ಚಾಲನೆಯೇ ಅಪಘಾತ ಸಂಭವಿಸಲು ಕಾರಣ ಎಂದು ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ

Leave a Reply

Your email address will not be published. Required fields are marked *

ಉಡುಪಿ: ತುಳುನಾಡಿಗೆ ಕಯ್ಯಾರ ಕಿಞ್ಞಣ್ಣ ರೈ ಕೊಡುಗೆ ಅಪಾರ: ಜಯಕರ ಶೆಟ್ಟಿ

ಮಂಗಳೂರು: ಮಂಗಳೂರು ಪತ್ರಕರ್ತ ಸುರೇಶ್ ಡಿ. ಪಳ್ಳಿಗೆ ನಾರದ ಪುರಸ್ಕಾರ ಘೋಷಣೆ

ರಾಷ್ಟ್ರ ಪ್ರಶಸ್ತಿ ವಿಜೇತೆ ರೂಪಶ್ರೀ ವರ್ಕಾಡಿಗೆ ಬಿಜೆಪಿ ಜಿಲ್ಲಾ ಘಟಕದಿಂದ ಸನ್ಮಾನ…!

ಬಿಜೆಪಿ ರಾಷ್ಟ್ರೀಯ ವಕ್ತಾರ ಹುದ್ದೆಗೆ ಪೂನಾವಾಲಾ ಗುಡ್‌ಬೈ?…

ಚಿನ್ನದ ದರದಲ್ಲಿ ಬದಲಾವಣೆ; ಹೊಸ ಬೆಲೆ ಪ್ರಕಟ…!

ತುಮಕೂರು: ಪೊಲೀಸ್ ಪುತ್ರನೇ ಹೈಡ್ರೋ ಗಾಂಜಾ ಜಾಲದ ರೂವಾರಿ..!

ಪಾಕಿಸ್ತಾನದಲ್ಲಿ ಭೀಕರ ಗಣಿ ಸ್ಫೋಟ; 32 ಕಾರ್ಮಿಕರ ದುರ್ಮರಣ…!

ಬೀರತಮ್ಮನಹಳ್ಳಿ ಕೆರೆಯಲ್ಲಿ ಮೀನುಗಳ ಮಾರಣಹೋಮ; ತನಿಖೆ ಆರಂಭ…!

ಕುಂದಾಪುರ: ಐವನ್ ಮಸ್ಕರೇನಸ್ ಹತ್ಯೆ; ಪೊಲೀಸ್ ತನಿಖೆಯಲ್ಲಿ ಹೊಸ ಮಾಹಿತಿ..!

error: Content is protected !!