ಪುತ್ತೂರು: ಪುತ್ತೂರು ಕಾವು ಲಯನ್ಸ್ ಕ್ಲಬ್, ಪುತ್ತುರು ಪಾಣಾಜೆ ಲಯನ್ಸ್ ಕ್ಲಬ್, ಆಲಂಗಾರು ದುರ್ಗಾಂಬ ಲಯನ್ಸ್ ಕ್ಲಬ್ ಮತ್ತು ಪುತ್ತರ‍್ದ ಮುತ್ತು ಲಯನ್ಸ್ ಕ್ಲಬ್‌ಗಳು ಹಲವು ಸಮಾಜಮುಖಿ ಸೇವಾ ಕಾರ್ಯ ಮಾಡುತ್ತಾ ಬಂದಿದ್ದು ಈ ಭಾಗದ ಅತ್ಯುತ್ತಮ ಕ್ಲಬ್‌ಗಳಾಗಿ ಮೂಡಿ ಬಂದಿದೆ ಎಂದು ಲಯನ್ಸ್ ಕ್ಲಬ್ ೩೧೭ಡಿ ಇದರ ಜಿಲ್ಲಾ ಗವರ್ನರ್ ಮೆಲ್ವಿನ್ ಡಿ’ಸೋಜಾ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಲಯನ್ಸ್ ಕ್ಲಬ್ 4 ಕಂದಾಯ ಜಿಲ್ಲೆಗಳಾಗಿ ದಕ್ಷಿಣ ಕನ್ನಡ, ಕೊಡಗು, ಹಾಸನ, ಚಿಕ್ಕಮಗಳೂರು ಒಟ್ಟಾಗಿ 121 ಕ್ಲಬ್‌ಗಳಿವೆ. ಸುಮಾರು 4,600 ಮಂದಿ ಸದಸ್ಯರಿದ್ದಾರೆ. ಈ ಭಾರಿ ‘ಬಿ ಕೈಂಡ್’ (ಕರುಣಾಮಯಿ) ಎಂಬ ಘೋಷವಾಕ್ಯದೊದಿಗೆ ವಿವಿಧ ಸೇವಾ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದರಲ್ಲಿ ಹಿರಿಯ ನಾಗರಿಕರ ಸೇವೆ, ವಿಶೇಷ ಮಕ್ಕಳಿಗೆ ಪ್ರೇರಣೆ, ಯುವಜನಾಂಗಕ್ಕೆ ಸ್ಪೂರ್ತಿ, ದೇಶಪ್ರೇಮ ಹಾಗೂ ಮಹಿಳಾ ಸಬಲೀಕರಣ ಕಾರ್ಯಕ್ರಮಗಳು ಒಳಗೊಂಡಿವೆ. ಇದಲ್ಲದೆ ದೃಷ್ಟಿ, ಯುವಜನ, ವಿಪತ್ತು ಪರಿಹಾರ, ಮಾನವೀಯ ಸೇವೆಗಳು, ಮಧುಮೇಹ, ಬಾಲ್ಯದ ಕ್ಯಾನ್ಸರ್, ಪರಿಸರ ಮತ್ತು ಹಸಿವು ನಿವಾರಣೆಗೆ ಸಂಬAಧಿಸಿ ಹಲವು ಕಾರ್ಯಕ್ರಮ ನಡೆಸಲು ಉದ್ದೇಶಿಸಿದಂತೆ ಪುತ್ತೂರಿನ ನಾಲ್ಕು ಕ್ಲಬ್‌ಗಳು ಈ ಎಲ್ಲಾ ಕಾರ್ಯದಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡಿದ್ದು, ಅದರಲ್ಲಿ ಕೆಲವೊಂದರ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಇದರ ಜೊತೆಗೆ ಈ ಸಲದ ಸ್ಮೆöÊಲ್ ವಿಶೇಷ ಕಾರ್ಯಕ್ರಮವಾಗಿದ್ದು, ಇದರ ಅಡಿಯಲ್ಲಿ 121 ಕ್ಲಬ್‌ಗಳು ಸೇವೆ ಸಲ್ಲಿಸುತ್ತಿವೆ. ವಿಶೇಷ ಕಾರ್ಯಕ್ರಮವಾಗಿ ರೂ. ೧ಕೋಟಿ ಪೌಂಡೇಶನ್‌ಮೂಲಕ ಸೇವೆ ನೀಡಿದ್ದೇವೆ. ೪ ಹೊಸ ಕ್ಲಬ್, 7 ಲಿಯೋ ಕ್ಲಬ್‌ಗಳನ್ನು ಉದ್ಘಾಟಿಸಲಾಗುವುದು. ೫೦೦ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆಯಾಗಲಿದೆ. ಪುತ್ತೂರನಲ್ಲಿ ಲಿಯೋ ಕ್ಲಬ್ ಪುತ್ತೂರು ಮತ್ತು ಶ್ರೀ ರಾಮಕೃಷ್ಣ ಶಾಲೆಯಲ್ಲಿ ಲಿಯೋ ಕ್ಲಬ್ ಉದ್ಘಾಟನೆಯಾಗಲಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಟಿಯಲ್ಲಿ ಪುತ್ತೂರು ಕಾವು ಲಯನ್ಸ್ ಕ್ಲಬ್ ಅಧ್ಯಕ್ಷ ದಿವ್ಯನಾಥ ಶೆಟ್ಟಿ, ಪುತ್ತೂರು ಪಾಣಾಜೆ ಲಯನ್ಸ್ ಕ್ಲಬ್ ಅಧ್ಯಕ್ಷ ಮಹಮ್ಮದ್ ಕುಕ್ಕುವಳ್ಳಿ, ಆಲಂಗಾರು ದುರ್ಗಾಂಬ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ರೈ ಮನವಳಿಕೆ, ಪುತ್ತರ‍್ದ ಮುತ್ತು ಲಯನ್ಸ್ ಕ್ಲಬ್ ಅಧ್ಯಕ್ಷ ರವೀಂದ್ರ ಪೈ, ಲಯನ್ಸ್ಕ್ಲಬ್ ಪ್ರಾಂತೀಯ ರಾಯಬಾರಿ ಗಣೇಶ್ ಶೆಟ್ಟಿ, ರವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.
ಯುಎಇ ಮೂಲದ ಟೋರ್ಟಿಲ್ಲಾ ಮತ್ತು ಫ್ಲಾಟ್‌ಬ್ರೆಡ್ ತಯಾರಕರಾದ ಫ್ಲೋರ್ ಮಾಸ್ಟರ್ಸ್, ಆಂಧ್ರಪ್ರದೇಶದಲ್ಲಿ ವಿಶ್ವ ದರ್ಜೆಯ ಸಂಯೋಜಿತ ಫ್ಲಾಟ್‌ಬ್ರೆಡ್ ಉತ್ಪಾದನಾ ಪರಿಸರ…
ಕಾರಿಗೆ ಖಾಸಗಿ ಬಸ್ ಡಿಕ್ಕಿಯಾಗಿ ಕಾರಿನಲ್ಲಿದ್ದ ಪುಟ್ಟ ಮಕ್ಕಳು ಸಹಿತ ಚಾಲಕ ಅಪಾಯದಿಂದ ಪಾರಾಗಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ…
ಅಮೆರಿಕ ಮತ್ತು ಇರಾನ್ ನಡುವೆ ಪರ್ಷಿಯನ್ ಕೊಲ್ಲಿಯಲ್ಲಿನ ಮಿಲಿಟರಿ ದಾಳಿಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ…
ದೇಶಾದ್ಯಂತ ವ್ಯಾಪಕ ಸಂಚಲನ ಮೂಡಿಸಿದ್ದ ನೀಟ್-ಯುಜಿ (NEET-UG) ಪರೀಕ್ಷಾ ಅಕ್ರಮ ಹಾಗೂ ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ತೀವ್ರ…
ನಗರದ ಲಾಲ್‌ಬಾಗ್ ಸಿಗ್ನಲ್ ಸಮೀಪ ಶನಿವಾರ ಮಧ್ಯಾಹ್ನ ಸಾರ್ವಜನಿಕರ ಕಣ್ಣೆದುರಲ್ಲೇ ಭೀಕರ ಮಾರಕಾಸ್ತ್ರ ದಾಳಿ ನಡೆದಿದ್ದು, ಪ್ರಸಿದ್ಧ ರೌಡಿಶೀಟರ್ ಒಬ್ಬ…
ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇದೀಗ ಆತನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ವಿಷಸೇವನೆ…