ಕರಾವಳಿ

ಕೆನರಾ ಸಮೂಹ ಶಿಕ್ಷಣ ಸಂಸ್ಥೆಗಳು–ಕೆನರಾ ಎಕ್ಸ್ಪೋ -2023 ಉದ್ಘಾಟನೆ


ಮಂಗಳೂರು: ಡಿ 23, ಮಂಗಳೂರಿನ ಪ್ರತಿಷ್ಠಿತ ಕೆನರಾ ಸಮೂಹ ಶಿಕ್ಷಣ ಸಂಸ್ಥೆಗಳ ಆಯೋಜನೆಯಲ್ಲಿ ಮೂಡಿ ಬಂದ ವಿಶಿಷ್ಟ ಪೂರ್ಣ ವಸ್ತು ಪ್ರದರ್ಶನ- ಕೆನರಾ ಎಕ್ಸ್ಪೋ 2023 ಶನಿವಾರದಂದು ಕೆನರಾ ಪ್ರೌಢಶಾಲೆ, ಕೊಡಿಯಾಲ್ ಬೈಲ್ ಇಲ್ಲಿ ಉದ್ಘಾಟನೆಗೊಂಡಿತು. ಕೆನರಾ ಬ್ಯಾಂಕ್ ಮಂಗಳೂರು ವೃತ್ತ ಕಚೇರಿಯ ಜನರಲ್ ಮ್ಯಾನೇಜರ್ ಶ್ರೀ ಸುಧಾಕರ್ ಕೊಠಾರಿ ಉದ್ಘಾಟನೆ ಮಾಡಿದರು.ಕೆನರಾ ಹಳೆ ವಿದ್ಯಾರ್ಥಿಗಳ ಜಾಗತಿಕ ಸಮಾವೇಶದ ಮುನ್ನ ದಿನ ಜರುಗಿದ ಈ ವಿಶಿಷ್ಟ ಪೂರ್ಣ ಕಾರ್ಯಕ್ರಮವು ಸಾರ್ವಜನಿಕರ ಮನಸೆಳೆಯಿತು.

ಕೆನರಾ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಪೂರೈಸಿ, ಬೇರೆ ಬೇರೆ ಉದ್ಯಮಗಳಲ್ಲಿ ತೊಡಗಿಸಿಕೊಂಡ ಹಳೆ ವಿದ್ಯಾರ್ಥಿಗಳಿಗೆ ತಮ್ಮ ನಾವಿನ್ಯತೆ, ಸೃಜನಶೀಲತೆ, ಕೌಶಲಗಳನ್ನು ಅನಾವರಣಗೊಳಿಸಲು ಹಾಗೂ ಮತ್ತೊಮ್ಮೆ ವಿದ್ಯಾಸಂಸ್ಥೆಯೊಂದಿಗೆ ತಮ್ಮ ಸಂಬಂಧಗಳನ್ನು ನವೀಕರಿಸಲು ಈ ಕಾರ್ಯಕ್ರಮವು ಅತ್ಯುತ್ತಮ ವೇದಿಕೆಯಾಗಿ ರೂಪುಗೊಂಡಿತು. ಕೇಂದ್ರ ಸರ್ಕಾರವು ಉತ್ತೇಜಿಸಿದ ಸ್ಟಾರ್ಟ್ ಅಪ್ ಆಲೋಚನೆಗಳಿಗೆ ಯೋಜನೆಯ ರೂಪ ಕೊಟ್ಟು ತಯಾರಿಸಿದ ವಿವಿಧ ಪ್ರಾಜೆಕ್ಟ್ ಗಳು, ವೈವಿಧ್ಯಪೂರ್ಣ ಆಹಾರ ವಿಚಾರಗಳು ಈ ಕಾರ್ಯಕ್ರಮದಲ್ಲಿ ಕಂಡು ಬಂದವು. ಎಲೆಕ್ಟ್ರಿಕ್ ತ್ರಿ ಚಕ್ರ ಹೊಸ ವಿನ್ಯಾಸ ವಾಹನಗಳ ಮಾದರಿ, ಪುಸ್ತಕಮಳಿಗೆ, ವಿವಿಧ ಪಾನಿಯ ಆಹಾರ ವಿವಿಧ ವಿನ್ಯಾಸದ ಕೆನರಾ ಬ್ರಾಂಡ್ ನ ಬಟ್ಟೆ, ಪೈ ದ್ವಿ ಚಕ್ರ ಶೋರೂಂ,ಕೆನರಾ ಬ್ಯಾಂಕ್, ಪೀಠೋಪಕರಣ, ಎಸ್ ಕೆ ಟ್ರೇಡರ್ಸ್, ಅಮೋಘ ಗಾರ್ಮೆಂಟ್ಸ್, ಡೇ ಟು ಡೇ ಡಿಜಿಟಲ್, ವೇದಾಮರೋಗ್ಯ, ಎಸ್ ಎಲ್ ಶೇಟ್ ಡೈಮಂಡ್ಸ್,ಫೋರ್ ಟೀಕ್ ಸೊಲ್ಯೂಷನ್ಸ್,ಕುಂಬ್ಳೆ ಸೋಲಾರ್ ಎನರ್ಜಿ ಸೊಲ್ಯೂಷನ್ಸ್,ಶ್ರೇಯಸ್ ಸ್ವೀಟ್ಸ್, ಹೀಗೆ ಅನೇಕ ಪ್ರಮೋಷನ್ ಮಳಿಗೆಗಳು, ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು ಇದ್ದವು.ಸಂಜೆ ಹಳೆಯ ವಿದ್ಯಾರ್ಥಿಗಳಿಂದ ಕನ್ನಡ ಹಿಂದಿ ಹಳೆಯ, ಹೊಸ ಚಲನಚಿತ್ರ ಗೀತೆಗಳು ಹಾಗೂ ವಿವಿಧ ಹಾಡುಗಳು ಕರೋಕೆ ಮೀಟ್ ಕಾರ್ಯಕ್ರಮವು ನಡೆಯಿತು.
ಕೆನರಾ ಆಡಳಿತ ಮಂಡಳಿಯ ಕಾರ್ಯದರ್ಶಿ ಶ್ರೀ ರಂಗನಾಥ ಭಟ್, ಜಂಟಿ ಕಾರ್ಯದರ್ಶಿಗಳಾದ ಶ್ರೀ ಸುರೇಶ್ ಕಾಮತ್ ಹಾಗೂ ಶ್ರೀ ಗೋಪಾಲಕೃಷ್ಣ ಶೆಣೈ, ಕೆನರಾ ವಿಕಾಸ ಕಾಲೇಜಿನ ಸಂಯೋಜಕರಾದ ಶ್ರೀ ಬಸ್ತಿ ಪುರುಷೋತ್ತಮ ಶೆಣೈ, ಕೆನರಾ ಪದವಿ ಕಾಲೇಜಿನ ಮ್ಯಾನೇಜರ್ ಶ್ರೀ ಶಿವಾನಂದ ಶೆಣೈ, ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ನರೇಶ್ ಶೆಣೈ, ಶ್ರೀಮತಿ ಅಶ್ವಿನಿ ಶೆಣೈ, ಕೆನರಾ ಆಂಗ್ಲ ಪ್ರಾಥಮಿಕ ಶಾಲೆ ಹಾಗೂ ಕೆನರಾ ಹೈಸ್ಕೂಲ್ ಉರ್ವಾ ಇಲ್ಲಿಯ ಮ್ಯಾನೇಜರ್ ಶ್ರೀ ಯೋಗೀಶ್ ಕಾಮತ್, ಆಡಳಿತ ಅಧಿಕಾರಿ ಡಾ. ದೀಪ್ತಿ ನಾಯಕ್, ಪಿ ಆರ್ ಓ ಶ್ರೀಮತಿ ಉಜ್ವಲ್ ಮಲ್ಯ, ಸಮ್ಮಿಲನದ ಉಸ್ತುವಾರಿ ಶ್ರೀ ಗೋಪಾಲಕೃಷ್ಣ ಶೆಟ್ಟಿ,ಕೆನರಾ ಸಹೋದರಿ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರುಗಳು, ಬೋಧಕ ಬೋಧಕೇತರ ಸಿಬ್ಬಂದಿ ವರ್ಗ,ಸಂಸ್ಥೆಯ ಹಳೆಯ ಹಿರಿಯ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಸಹಭಾಗಿಗಳಾಗಿದ್ದರು.

ಅಭಿಮತ ಟಿವಿ

Abhimatha TV is a trusted channel renowned for its dedication to honest journalism and its unwavering commitment to showcasing the rich culture, heritage, and traditions of Tulunadu. With a focus on delivering unbiased news and promoting the region's vibrant art forms, rituals, and cultural events, Abhimatha TV has become a beacon of authenticity and pride for the community. Established in 2018, the channel was founded by Mamatha P. Shetty (Managing Partner) and Kanyana Sadhashiva Shetty (Chief Promoter) with a mission to provide truthful reporting and celebrate the essence of our heritage.

Recent Posts

ನವದೆಹಲಿ: ಅರಬ್ಬಿ ಸಮುದ್ರದಲ್ಲಿ ಭರ್ಜರಿ ಡ್ರಗ್ಸ್ ಬೇಟೆ: ₹3 ಸಾವಿರ ಕೋಟಿ ಮೌಲ್ಯದ ಮಾದಕವಸ್ತು ವಶ..!

ಭಾರತೀಯ ಕರಾವಳಿ ಕಾವಲು ಪಡೆ ಹಾಗೂ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಜಂಟಿ ಕಾರ್ಯಾಚರಣೆ ನಡೆಸಿ ಅರಬ್ಬಿ ಸಮುದ್ರದಲ್ಲಿ…

11 hours ago

ಮಂಗಳೂರು: MRPL ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಭೇಟಿ; ಪರಿಸ್ಥಿತಿ ಪರಿಶೀಲನೆ..!

ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL)ನಲ್ಲಿ ಇಂದು ಮಧ್ಯಾಹ್ನ ಕೋಕರ್ ಹೈಡ್ರೋ ಟ್ರೀಟರ್ ಘಟಕದಲ್ಲಿ ಘಟನೆ ಸಂಭವಿಸಿದ್ದು, ಘಟನಾ…

11 hours ago

ಬಂಟ್ವಾಳ: ಮಂಗಳೂರು ರೈಲು ಪ್ರದೇಶ ಮೈಸೂರು ವಿಭಾಗಕ್ಕೆ: ಪ್ರಮುಖ ನಿಲ್ದಾಣಗಳಿಗೆ ಅಧಿಕಾರಿಗಳ ಭೇಟಿ.

ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿದ್ದ ಮಂಗಳೂರು ರೈಲು ಪ್ರದೇಶವನ್ನು ಅ.1ರ ಮಧ್ಯರಾತ್ರಿಯಿಂದ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ವಿಭಾಗೀಯ…

11 hours ago

ಬೆಂಗಳೂರು: ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಶಾಲಾ ಸಮಯ ಬದಲಾವಣೆಗೆ ಚಿಂತನೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಾಲೆಗಳ ಆರಂಭದ ಸಮಯದಲ್ಲಿ ಬದಲಾವಣೆ…

11 hours ago

ಉಡುಪಿ: ಶಂಕರಪುರ ಮಠದಲ್ಲಿ ಅ.3, 4ರಂದು ಸಾಯಿ ಈಶ್ವರ್ ಗುರೂಜಿ ಪಂಚಾಶತ್ ಜನ್ಮ ವೈಭವ…!

ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠ ಏಕ ಜಾತಿ ಧರ್ಮ ಪೀಠದ ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ಪಂಚಾಶತ್…

11 hours ago

ಪುತ್ತೂರು: ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಅವಧಿ ಮೀರಿದ ಮಾತ್ರೆ ವಿತರಣೆ ಆರೋಪ; ಅಧಿಕಾರಿಗಳಿಂದ ವಿಚಾರಣೆ

ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗೆ ಅವಧಿ ಮೀರಿದ ಮಾತ್ರೆಗಳನ್ನು ವಿತರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಆಸ್ಪತ್ರೆ ಆಡಳಿತ…

11 hours ago