ದಕ್ಷಿಣ ಕನ್ನಡ: ಬ್ರಾಹ್ಮಣ ಸಂಸ್ಕಾರ, ಸಂಘಟನೆ, ಮತ್ತು ಕ್ಷೇಮಾಭಿವೃದ್ಧಿಗಾಗಿ ಗಾಯತ್ರಿ ಜಪ ಯಜ್ಞ ಸಮಿತಿ ಸಹಕಾರದಿಂದ ಆಲಂಗಾರು ಮಹಾಲಿಂಗೇಶ್ವರ ದೇವಸ್ಥಾನ ಮೂಡಬಿದರೆ ಇಲ್ಲಿ ಮೂಡಬಿದ್ರೆ ವಲಯ ಬ್ರಾಹ್ಮಣ ಸಮಾಜ ಒಂದುಗೂಡಿ “ಗಾಯತ್ರಿ ಜಪಯಜ್ಞ” ಕಾರ್ಯಕ್ರಮ ವಿದ್ಯುಕ್ತವಾಗಿ ನಡೆಯಿತು.

ರವಿವಾರ ಬೆಳಗ್ಗೆ ಪ್ರಾರ್ಥನೆಯ ಸಂಕಲ್ಪ, ಕಲಶಸ್ಥಾಪನೆ, ಗಣಪತಿ ಹೋಮದ ಮುಖಾಂತರ ಆರಂಭಗೊಂಡ ಜಪಯಜ್ಞ, ಅಗ್ನಿ ಪ್ರತಿಷ್ಠೆ ನಂತರ ಬೇರೆ ಬೇರೆ ಯಜ್ಞ ಕುಂಡಗಳಲ್ಲಿ ವಿಧಿವತ್ತಾಗಿ ನಡೆಸಿ ನಂತರ ಪೂರ್ಣಾಹುತಿ ಜರುಗಿತು.
ಅಡಿಗಳು ಅನಂತ ಕೃಷ್ಣ ಭಟ್, ವಾಗೀಶ ಶಾಸ್ತ್ರಿ, ಸುಬ್ರಮಣ್ಯ ಭಟ್, ಪ್ರಭಾಕರ ಭಟ್, ಶಿವಪ್ರಸಾದ ಭಟ್, ಶ್ರೀನಿಧಿ ಅಬ್ಯಂಕರ್ ಇವರು ವಿಧಿವತ್ತಾಗಿ ಗಾಯತ್ರಿ ಜಪಯಜ್ಞ ನಡೆಸಿಕೊಟ್ಟರು
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಗಾಯತ್ರಿ ಪಠಣದ ಮಹತ್ವವನ್ನು ಸೇರಿದ ಸಭಿಕರಿಗೆ ಮತ್ತು ಸಮಾಜ ಬಾಂಧವರಿಗೆ ವಿವರಿಸಲಾಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಪತಿ ಭಟ್ ವಹಿಸಿದ್ದರು, ಸಭಾ ಕಾರ್ಯಕ್ರಮದ ನಿರೂಪಣೆ ದೇವಾನಂದ ಭಟ್, ಚಂದ್ರಶೇಖರ ರಾವ್ ಇವರು ಧನ್ಯವಾಧ ನೀಡಿದರು.
ನಂತರದಲ್ಲಿ ಕಾರ್ಯಕ್ರಮಕ್ಕೆ ಬಂದ ಎಲ್ಲರಿಗೂ ಪ್ರಸಾದ ವಿತರಣೆ ಹಾಗೂ ಪ್ರಸಾದ ಭೋಜನ ವಿತರಿಸಲಾಯಿತು.













