ಬಂಟ್ವಾಳ: ನಾಟಕ ಕಲಾವಿದನೋರ್ವ ಬೈಕ್ ಸ್ಕಿಡ್ ಆಗಿ ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ವಗ್ಗ ಸಮೀಪದ ಕೊಡ್ಯಮಲೆ ಎಂಬಲ್ಲಿ ಮುಂಜಾನೆ ವೇಳೆ ನಡೆದಿದೆ.
ಕೊಡ್ಯಮಲೆ ನಿವಾಸಿ ಗೌಮ್ (28) ಮೃತಪಟ್ಟ ಅವಿವಾಹಿತ ಯುವಕ. ಈತ ಬೆಳುವಾಯಿಯಲ್ಲಿ ನಡೆದ ಕದಂಬ ನಾಟಕದಲ್ಲಿ ಭಾಗವಹಿಸಿ ಹಿಂತಿರುಗುವ ವೇಳೆ ಅಪಘಾತ ಸಂಭವಿಸಿದೆ. ಈತ ಕದಂಬ ನಾಟಕದ ಓರ್ವ ಕಲಾವಿದನಾಗಿ ಮಿಂಚುವ ಯುವಕನಾಗಿದ್ದಾನೆ.
ಹಗಲು ಹೊತ್ತಿನಲ್ಲಿ ಬಿಸಿರೋಡಿನ ವಿಜಯಲಕ್ಷ್ಮಿ ಸಂಸ್ಥೆಯಲ್ಲಿ ಅಕೌಂಟಿಂಗ್ ವಿಭಾಗದ ಕೆಲಸಗಾರನಾಗಿದ್ದಾನೆ.
ರಾತ್ರಿ ಬೆಳುವಾಯಲ್ಲಿ ನಡೆದ ನಾಟಕ ಮುಗಿಸಿ ವಾಪಸು ಆಗುತ್ತಿದ್ದವೇಳೆ ಮನೆಯ ಸಮೀಪವೇ ದುರಂತ ನಡೆದಿದೆ.
ಅಪಘಾತ ನಡೆದು ಬೆಳಿಗ್ಗೆ ವರೆಗೆ ಯಾರು ನೋಡಿರಲಿಲ್ಲ. ಬೆಳಿಗ್ಗೆ ದಾರಿಯಲ್ಲಿ ಹೋಗುವವರು ನೋಡಿ ಪೋಲೀಸರಿಗೆ ತಿಳಿಸಿದ್ದಾರೆ.
ಟ್ರಾಫಿಕ್ ಎಸ್.ಐ.ಸುತೇಶ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಭಾರತೀಯ ಕರಾವಳಿ ಕಾವಲು ಪಡೆ ಹಾಗೂ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ATS) ಜಂಟಿ ಕಾರ್ಯಾಚರಣೆ ನಡೆಸಿ ಅರಬ್ಬಿ ಸಮುದ್ರದಲ್ಲಿ…
ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL)ನಲ್ಲಿ ಇಂದು ಮಧ್ಯಾಹ್ನ ಕೋಕರ್ ಹೈಡ್ರೋ ಟ್ರೀಟರ್ ಘಟಕದಲ್ಲಿ ಘಟನೆ ಸಂಭವಿಸಿದ್ದು, ಘಟನಾ…
ಪಾಲಕ್ಕಾಡ್ ವಿಭಾಗದ ವ್ಯಾಪ್ತಿಯಲ್ಲಿದ್ದ ಮಂಗಳೂರು ರೈಲು ಪ್ರದೇಶವನ್ನು ಅ.1ರ ಮಧ್ಯರಾತ್ರಿಯಿಂದ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹೊಸ ವಿಭಾಗೀಯ…
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂಚಾರ ದಟ್ಟಣೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಾಲೆಗಳ ಆರಂಭದ ಸಮಯದಲ್ಲಿ ಬದಲಾವಣೆ…
ಶ್ರೀ ಕ್ಷೇತ್ರ ಶಂಕರಪುರ ದ್ವಾರಕಾಮಾಯಿ ಮಠ ಏಕ ಜಾತಿ ಧರ್ಮ ಪೀಠದ ಶ್ರೀ ಸಾಯಿ ಈಶ್ವರ್ ಗುರೂಜಿ ಅವರ ಪಂಚಾಶತ್…
ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗೆ ಅವಧಿ ಮೀರಿದ ಮಾತ್ರೆಗಳನ್ನು ವಿತರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಈ ಕುರಿತು ಆಸ್ಪತ್ರೆ ಆಡಳಿತ…