ಮೂಡುಬಿದಿರೆ: ವಿಜ್ಞಾನವನ್ನು ಕೇವಲ ಪುಸ್ತಕದ ಮೂಲಕ ಅರಿತರೆ ಸಾಲದು ನಮ್ಮ ಸುತ್ತಮುತ್ತಲಿನ ಪರಿಸರದಿಂದಲೂ ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳಬಹುದು ಎಂದು ಆತ್ಮಾ ಸಂಶೋಧನ ಕೇಂದ್ರದ ಮುಖ್ಯ ವೈಜ್ಞಾನಿಕ ಅಧಿಕಾರಿ ಹಾಗೂ ಆಳ್ವಾಸ್ ದ್ರವ್ಯಗುಣ ವಿಭಾಗದ ಪ್ರಾಧ್ಯಪಕ ಡಾ. ಫರ್ಹಾನ್ ಜಮೀರ್ ಹೇಳಿದರು.
ಆಳ್ವಾಸ್ ಪದವಿಪೂರ್ವ ಕಾಲೇಜಿನ ಇಕೋ ಕ್ಲಬ್‌ವತಿಯಿಂದ ಡಾ ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಹಮ್ಮಿಕೊಂಡ ‘’ಶೈಕ್ಷಣಿಕ ಪರಿಧಿಯಾಚೆಗಿನ ಬದುಕಿನ ಅನ್ವೇಷಣೆ’’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು . ಶಿಕ್ಷಣದ ಮೂಲ ಉದ್ದೇಶ ಅಂಕಗಳಿಸುದಷ್ಟೆ ಅಲ್ಲ. ತನ್ನಲ್ಲಿ ಹುದುಗಿರುವ ಕೌಶಲಗಳ ವೃದ್ಧಿ ಮುಖ್ಯವಾಗಿರುತ್ತದೆ. ಯಾವುದೇ ವಿಷಯವನ್ನು ಗ್ರಹಿಸಿ ಅರ್ಥಮಾಡಿಕೊಳ್ಳಬೇಕೆ ವಿನಃ ಕಂಠಪಾಠ ಮಾಡುವುದು ಒಳಿತಲ್ಲ. ವಿಜ್ಞಾನದ ವಿಷಯಗಳನ್ನು ನಿಜ ಜೀವನದಲ್ಲಿ ಸಹಸಂಬಂಧಿಸಿ ಗ್ರಹಿಸುವುದು ಮುಖ್ಯ.
ಹೆಣ್ಣು ಮಕ್ಕಳು ವಿಷಯವನ್ನು ಇದ್ದ ಹಾಗೆ ಬರೆದರೆ ಗಂಡು ಮಕ್ಕಳು ಅದೇ ವಿಷಯನ್ನು ವಿಭಿನ್ನ ರೀತಿಯಲ್ಲಿ ಬರೆಯುತ್ತಾರೆ. ಇದಕ್ಕೆ ಕಾರಣ ಹುಡುಗರ ಮೆದುಳು ತಾರ್ಕಿಕ ಸ್ಮರಣೆಗೆ ಹೆಚ್ಚಿನ ಒತ್ತು ನೀಡಿದರೆ (ಲಾಜಿಕಲ್ ಮೆಮೊರಿ) ಹಾಗೂ ಹುಡುಗಿಯರ ಮೆದುಳು ಛಾಯಾಸ್ಮರಣೆಗೆ (ಫೋಟೊಗ್ರಾಫಿಕ್ ಮೆಮೊರಿ) ಪ್ರಾಶಸ್ತö್ಯವನ್ನು ನೀಡುತ್ತದೆ.
ಅಧ್ಯಯನದ ಪ್ರಕಾರ ಗಂಡಿನ ಮೆದುಳಿನ ತೂಕ ಸರಾಸರಿ 1350 ಗ್ರಾಂ ಹಾಗೂ ಹೆಣ್ಣಿನ ಮೆದುಳಿನ ತೂಕ 1260ಗ್ರಾಂ ಇರುತ್ತದೆ. ಆದರೆ ಹೆಚ್ಚು ತೂಕ ಹೊಂದಿದ ಮಾತ್ರಕ್ಕೆ ಹೆಚ್ಚು ಜ್ಞಾನವಂತಾರಾಗಿರುತ್ತರೆಂದಲ್ಲ, ಕಡಿಮೆ ಮೆದುಳಿನ ಗಾತ್ರವನ್ನು ಹೊಂದಿರುವವರು ಕಡಿಮೆ ಸಾಮರ್ಥ್ಯ ಹೊಂದಿರಲು ಸಾಧ್ಯವಿಲ್ಲ. ಗಂಡಿನ ಮೆದುಳು ಏಕ ಕಾಲದಲ್ಲಿ ಒಂದೆ ಕೆಲಸವನ್ನು ಮಾಡಿದರೆ ಅದೇ ಹೆಣ್ಣಿನ ಮೆದುಳು ಬಹು ಕೆಲಸವನ್ನು ಮಾಡಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಇದರಿಂದ ಅನುಕೂಲ ಹಾಗೂ ಅನನುಕೂಲಗಳು ಬಹಳಷ್ಟಿದೆ. ಗಂಡು ಏಕಕಾಲದಲ್ಲಿ ಒಂದೇ ಕೆಲಸ ಮಾಡುವುದರಿಂದ ಕೆಲಸದಲ್ಲಿ ಹೆಚ್ಚಿನ ಸಾಫಲ್ಯತೆ ಪಡೆದರೆ, ಹೆಣ್ಣು ಅಷ್ಟು ಫಲಿತಾಂಶವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಆದರೆ ಗಂಡು ಈ ಪ್ರಕ್ರಿಯೆಯಲ್ಲಿ ಹೆಚ್ಚಿನ ಒತ್ತಡಕ್ಕೊಳಗಾಗಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಲ್ಲದು. ಆದರೆ ಹೆಣ್ಣು ಈ ಪ್ರಕ್ರಿಯೆಯಲ್ಲಿ ಅನಾರೋಗ್ಯದಿಂದ ಬಳಲುವ ಸಂದರ್ಭಗಳು ಕಡಿಮೆ ಎಂದರು. ಋಣಾತ್ಮಕ ಮನಸ್ಥಿತಿಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಧನಾತ್ಮಕ ಚಿಂತನೆಯಿಂದ ಮಾತ್ರ ಉನ್ನತಿ ಸಾಧ್ಯ. ವಿದ್ಯಾರ್ಥಿಗಳು ಸದಾ ಧನಾತ್ಮಕ ಚಿಂತೆನೆಯಿಂದ ಪ್ರೇರೆಪಿತರಾಗಿರಬೇಕು ಎಂದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಉಪಪ್ರಾಂಶುಪಾಲೆ ಜಾನ್ಸಿ ಪಿಎನ್ ಜೀವಶಾಸ್ತç ವಿಭಾಗದ ಮುಖ್ಯಸ್ಥ ಪ್ರಶಾಂತ್ ಶೆಟ್ಟಿ ಇದ್ದರು. ಕಾಲೇಜಿನ ಇಕೋ ಕ್ಲಬ್‌ನ ಸಂಯೋಜಕಿ ಶುಭಾ ಬಂಗೇರ ಸ್ವಾಗತಿಸಿ, ಉಪನ್ಯಾಸಕಿ ರಮ್ಯಾ ರೈ ಅತಿಥಿಯನ್ನು ಪರಿಚಯಿಸಿ, ಇಂಗ್ಲೀಷ್ ವಿಭಾಗದ ಉಪನ್ಯಾಸಕಿ ದೀಪಾ ಶೆಟ್ಟಿ ನಿರೂಪಿಸಿ, ಜೀವಶಾಸ್ತ್ರ ವಿಭಾಗದ ಮಾಘೇಶ್ವರಿ ವಂದಿಸಿದರು.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…