ಮಕ್ಕಳ ಕಲಾ ಲೋಕ ಕನ್ನಡ ಸಾಹಿತ್ಯ ಪರಿಷತ್ ಬಂಟ್ವಾಳ ತಾಲೂಕು ಘಟಕದ 2024ನೆಯ ಸಾಲಿನ ಅಧ್ಯಕ್ಷರಾಗಿ ರಮೇಶ ಎಂ. ಬಾಯಾರು ಪುನರಾಯ್ಕೆ. ಸರಕಾರಿ ಪ್ರೌಢಶಾಲೆ ( ಆರ್ ಎಂ ಎಸ್ ) ವಿಟ್ಲ ಇಲ್ಲಿ ನಡೆದ ಸಮಿತಿಯ ವಾರ್ಷಿಕ ಮಹಾಸಭೆಯಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅದರಂತೆ ಉಪಾಧ್ಯಕ್ಷರಾಗಿ ಎಂ.ಕೆ. ನಾಯ್ಕ್ ಅಡ್ಯನಡ್ಕ ಕಾರ್ಯದರ್ಶಿಯಾಗಿ ಪುಷ್ಪ ಎಚ್, ಜೊತೆ ಕಾರ್ಯದರ್ಶಿಯಾಗಿ ವಸಂತ ನಾಯಕ್ ಅಜೇರು, ಸಂಘಟನಾ ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಒಕ್ಕೆತ್ತೂರು, ಕೋಶಾಧಿಕಾರಿಯಾಗಿ ಶ್ರೀಪತಿ ನಾಯಕ್ ನಾಟೇಕಲ್ಲು ಆಯ್ಕೆಯಾದರು ಕಾರ್ಯಕಾರಿ ಸಮಿತಿಗೆ ಹತ್ತು ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು ಈ ಸಂದರ್ಭದಲ್ಲಿ ಭಾಸ್ಕರ ಅಡ್ವಳ, ಮಹಾಬಲ ಭಟ್ ನೆಗಳಗುಳಿ, ವಿಠಲ ಶೆಟ್ಟಿ ವಿಟ್ಲ ಉಪಸ್ಥಿತರಿದ್ದರು. ಇದೇ ಸಬೆಯಲ್ಲಿ ಇತ್ತೀಚೆಗೆ ನಿಧನರಾದ ವಿ. ಮ . ಭಟ್ ಅಡ್ಯನಡ್ಕ ಮತ್ತು ಅಮೃತ ಸೋಮೇಶ್ವರ ಇವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಯರಾಮ ಪಡ್ರೆ ಮತ್ತು ಮಹಾಬಲ ಭಟ್ ನೆಗಳಗುಳಿ ದಿವಂಗತರ ಬಗ್ಗೆ ಮಾತನಾಡಿದರು. ಲೀಲಾವತಿ ತೊರಣಕಟ್ಟೆ ಸ್ಫೂರ್ತಿ ಗೀತೆ ಹಾಡಿದರು. ಶ್ರೀಪತಿ ನಾಯಕ್ ನಾಟೇಕಲ್ಲು ಸ್ವಾಗತಿಸಿ. ಇಸ್ಮಾಯಿಲ್ ವಂದಿಸಿದರು.
ಸರ್ಕಾರ ಅಧಿಕೃತವಾಗಿ ಘೋಷಿಸಿರುವ ದಸರಾ ರಜೆಯ ಅವಧಿಯಲ್ಲಿ ತರಗತಿ ಹಾಗೂ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿರುವ ಶ್ರೀರಾಮ ಸೇನೆಯ ರಾಷ್ಟ್ರೀಯ…
ತಾಲೂಕಿನ ನಾಲ್ಕೂರು ಗ್ರಾಮದ ಪಾಡಿ ಎಂಬಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಮಾನವನ ಅಸ್ಥಿಪಂಜರ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಬಳಂಜ ಪಾಡಿ…
ನಗರದ ಗೀತಾಂಜಲಿ ಸಿಲ್ಕ್ಸ್ ರಸ್ತೆಯಲ್ಲಿ ಸಾವಿರಾರು ರೆಕ್ಕೆ ಗೆದ್ದಲುಗಳು ಏಕಕಾಲದಲ್ಲಿ ಹಾರಾಡಿದ್ದು, ಸಾರ್ವಜನಿಕರ ಗಮನ ಸೆಳೆಯಿತು. ರಸ್ತೆಯ ಇಕ್ಕೆಲಗಳಲ್ಲಿರುವ ಅಂಗಡಿಗಳ…
ಬಂಟರ ಸಂಘ ಮುಂಬೈನ ಜ್ಞಾನ ಮಂದಿರ ಸಮಿತಿಯ ವತಿಯಿಂದ ಸಾರ್ವಜನಿಕ ಸತ್ಯನಾರಾಯಣ ಪೂಜಾ ಉದ್ಯಾಪನ ಕಾರ್ಯಕ್ರಮವು ಸೆ.26ರಂದು ಕುರ್ಲಾದ ಶ್ರೀಮತಿ…
ಎಬಿವಿಪಿ ಸಂಘಟನೆಯ ಮೂಲಕ ಸಾಮಾಜಿಕ ಹಾಗೂ ಸಂಘಟನಾ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಪ್ರದೀಪ್ ಅಜ್ಜಿಬೆಟ್ಟು ಅವರನ್ನು ಹಿಂದೂ ಜಾಗರಣಾ ವೇದಿಕೆಯ…
ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಬ್ಯಾಟಿಯಾಣಿ ಎಂಬಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕೆಂಪುಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ಬೈಂದೂರು ಪೊಲೀಸರು…