ನಗರದ ಗೀತಾಂಜಲಿ ಸಿಲ್ಕ್ಸ್ ರಸ್ತೆಯಲ್ಲಿ ಸಾವಿರಾರು ರೆಕ್ಕೆ ಗೆದ್ದಲುಗಳು ಏಕಕಾಲದಲ್ಲಿ ಹಾರಾಡಿದ್ದು, ಸಾರ್ವಜನಿಕರ ಗಮನ ಸೆಳೆಯಿತು.
ರಸ್ತೆಯ ಇಕ್ಕೆಲಗಳಲ್ಲಿರುವ ಅಂಗಡಿಗಳ ವಿದ್ಯುತ್ ದೀಪ ಹಾಗೂ ದಾರಿದೀಪಗಳಿಗೆ ಆಕರ್ಷಿತಗೊಂಡ ಗೆದ್ದಲುಗಳು ಗುಂಪು ಗುಂಪಾಗಿ ಹಾರಾಡಿದವು. ಕೆಲ ಸಮಯದ ಬಳಿಕ ರೆಕ್ಕೆಗಳನ್ನು ಕಳಚಿಕೊಂಡ ಗೆದ್ದಲುಗಳು ಹಾಗೂ ಸಾವಿರಾರು ರೆಕ್ಕೆಗಳು ದೀಪಗಳ ಕೆಳಗೆ ಮತ್ತು ರಸ್ತೆಯಂಚಿನಲ್ಲಿ ಕಂಡುಬಂದವು.
ಮಳೆ ಹಾಗೂ ತೇವಾಂಶದ ವಾತಾವರಣದ ಬಳಿಕ ಗೆದ್ದಲುಗಳ ಕಾಲೋನಿಯಿಂದ ಸಂತಾನೋತ್ಪತ್ತಿ ಹಂತದಲ್ಲಿರುವ ರೆಕ್ಕೆ ಗೆದ್ದಲುಗಳು ಹೊರಬಂದು ಗುಂಪಾಗಿ ಹಾರಾಡುವುದು ಸಾಮಾನ್ಯ. ರಾತ್ರಿ ವೇಳೆ ಬೆಳಕಿನತ್ತ ಆಕರ್ಷಿತವಾಗುವ ಇವುಗಳಲ್ಲಿ ಜೋಡಿಗಳು ಸೂಕ್ತ ಸ್ಥಳ ಆಯ್ಕೆ ಮಾಡಿಕೊಂಡು ಹೊಸ ಕಾಲೋನಿ ಸ್ಥಾಪಿಸುತ್ತವೆ.
ಮಳೆಗಾಲದಲ್ಲಿ ಕಂಡುಬರುವ ಈ ‘ಟರ್ಮೈಟ್ ಸ್ವಾರ್ಮಿಂಗ್’ ಗೆದ್ದಲುಗಳ ನೈಸರ್ಗಿಕ ಸಂತಾನೋತ್ಪತ್ತಿ ಚಕ್ರದ ಪ್ರಮುಖ ಹಂತವಾಗಿದ್ದು, ಪರಿಸರದಲ್ಲಿ ಸಹಜವಾಗಿ ನಡೆಯುವ ಪ್ರಕ್ರಿಯೆಯಾಗಿದೆ ಎಂದು ಕೀಟ ತಜ್ಞರು ತಿಳಿಸಿದ್ದಾರೆ.
ಸರ್ಕಾರ ಅಧಿಕೃತವಾಗಿ ಘೋಷಿಸಿರುವ ದಸರಾ ರಜೆಯ ಅವಧಿಯಲ್ಲಿ ತರಗತಿ ಹಾಗೂ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿರುವ ಶ್ರೀರಾಮ ಸೇನೆಯ ರಾಷ್ಟ್ರೀಯ…
ತಾಲೂಕಿನ ನಾಲ್ಕೂರು ಗ್ರಾಮದ ಪಾಡಿ ಎಂಬಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಮಾನವನ ಅಸ್ಥಿಪಂಜರ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಬಳಂಜ ಪಾಡಿ…
ಬಂಟರ ಸಂಘ ಮುಂಬೈನ ಜ್ಞಾನ ಮಂದಿರ ಸಮಿತಿಯ ವತಿಯಿಂದ ಸಾರ್ವಜನಿಕ ಸತ್ಯನಾರಾಯಣ ಪೂಜಾ ಉದ್ಯಾಪನ ಕಾರ್ಯಕ್ರಮವು ಸೆ.26ರಂದು ಕುರ್ಲಾದ ಶ್ರೀಮತಿ…
ಎಬಿವಿಪಿ ಸಂಘಟನೆಯ ಮೂಲಕ ಸಾಮಾಜಿಕ ಹಾಗೂ ಸಂಘಟನಾ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಪ್ರದೀಪ್ ಅಜ್ಜಿಬೆಟ್ಟು ಅವರನ್ನು ಹಿಂದೂ ಜಾಗರಣಾ ವೇದಿಕೆಯ…
ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಬ್ಯಾಟಿಯಾಣಿ ಎಂಬಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕೆಂಪುಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ಬೈಂದೂರು ಪೊಲೀಸರು…
ಮಾಜಿ ಕ್ರಿಕೆಟಿಗ ಹಾಗೂ ಖ್ಯಾತ ವೀಕ್ಷಕ ವಿವರಣೆಕಾರ ರವಿಶಾಸ್ತ್ರಿ ಅವರು ಗುರುವಾರ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಶ್ರೀಕೃಷ್ಣ…