ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ವಲಯದಲ್ಲಿ ನಮ್ಮೂರು ನಮ್ಮಕೆರೆ ಕೆರೆ ಕಾರ್ಯಕ್ರಮದಡಿಯಲ್ಲಿ ಕುಟ್ರುಪ್ಪಾಡಿ ಗ್ರಾಮಪಂಚಾಯತ್ ವ್ಶಾಪ್ತಿಯ ಹಳೇಸ್ಟೇಷನ್ ಬಳಿಯಲ್ಲಿರುವ ಅಮೃತ ಸರೋವರ ಕೆರೆ ಅಭಿವೃಧ್ಧಿ ಸಮಿತಿರಚನೆ ಸಭಾ ಕಾರ್ಯಕ್ರಮವು ಕುಟ್ರುಪ್ಪಾಡಿ ಗ್ರಾಮಪಂಚಾಯತ್ ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉಧ್ಘಾಟಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪಗೌಡ ನಾವೂರು ಮಾತನಾಡಿ… ಧರ್ಮಸ್ಥಳ ಯೋಜನೆ ˌ ಗ್ರಾಮಪಂಚಾಯತ್ ಹಾಗೂ ಊರವರ ಸಹಕಾರ ದೊಂದಿಗೆ ಕರ್ನಾಟಕ ರಾಜ್ಶಾದ್ಶಂತ 1600ಕ್ಕೂ ಹೆಚ್ಚು ಕೆರೆಗಳ ಅಭಿವೃಧ್ಧಿಯನ್ನು ಹೂಳೇತ್ತುವುದರ ಮೂಲಕ ಮಾಡಲಾಗಿದೆ. ಕೆರೆಯನ್ನು ಅಭಿವೃಧ್ಧಿಪಡಿಸುವುದರಿಂದ ಕುಡಿಯಲು ಯೋಗ್ಶವಾದ ನೀರಿನ ಪೂರೈಕೆ ಕೃಷಿಗೆ ಪೂರಕವಾಗಿರುವ ಕೊಳವೆ ಬಾವಿಗಳ ಒಳಹರಿವು ಹೆಚ್ಚಿಸಲು ಪ್ರಾಣಿಪಕ್ಷಿಗಳಿಗೆ ಕುಡಿಯಲು ನೀರಿನ ಪೂರೈಕೆ ಹಾಗೂ ಜಲಚರ ಗಳ ಸಾಕಾಣಿಕೆಗೆ ಅನುಕೂಲವಾಗುತ್ತದೆ.. ಕುಟ್ರುಪ್ಪಾಡಿ ಗ್ರಾಮಪಂಚಾಯತ್ ವ್ಶಾಪ್ತಿಯಲ್ಲಿ ಹಳೇ ಸ್ಟೇಷನ್ ನ ಪಟ್ಟಣಪಂಚಾಯತ್ ಸಮೀಪದ ಅಮೃತಸರೋವರ ಕೆರೆಯ ಹೂಳೇತ್ತುವುದರ ಮೂಲಕ ಕೆರೆಅಭಿವೃದ್ದಿ ಪಡಿಸಲು ಧರ್ಮಸ್ಥಳ ಯೋಜನೆಯು ಕೈಜೋಡಿಸುತ್ತಿದ್ದು ಊರಿನವರ ಸಹಕಾರ ಹಾಗೂ ಗ್ರಾಮಪಂಚಾಯತ್ ಸಹಕಾರದ ಅವಶ್ಶಕತೆಇದೆ..ಇದಕ್ಕಾಗಿ ನಮ್ಮೂರು ನಮ್ಮ ಕೆರೆಯ ಸಮಿತಿ ರಚನೆ ಮಾಡಬೇಕಾಗಿದ್ದು ಸೂಕ್ತ ಸಮಿತಿಯನ್ನು ರಚಿಸಿ ಸಹಕರಿಸುವಂತೆ ಮಾರ್ಗದರ್ಶನ ನೀಡಿದರು.
ನಮ್ಮೂರು ನಮ್ಮಕೆರೆ ಅಮೃತಸರೋವರ ಕೆರೆ ಅಭಿವೃಧ್ಧಿ ಸಮಿತಿ ರಚನೆಮಾಡಲಾಯಿತು. ಸಮಿತಿಯ ಗೌರವಾಧ್ಶಕ್ಷರಾಗಿ ಗ್ರಾಮಪಂಚಾಯತ್ ಅಧ್ಶಕ್ಷೆ ಸುಮನ ಗೌರವ ಸಲಹೆಗಾರರಾಗಿ ಗ್ರಾಮಪಂಚಾಯತ್ ಉಪಾಧ್ಶಕ್ಷೆ ಯಶೋಧ .ಸಮಿತಿ ಅಧ್ಶಕ್ಷರಾಗಿ ಕೇಪು ಶ್ರೀಲಕ್ಷ್ಮೀ ಜನಾರ್ಧನ ದೇವಸ್ಥಾನ ಆಡಳಿತ ಸಮಿತಿ ಅಧ್ಶಕ್ಷರಾದ ಶಿವರಾಮ ಶೆಟ್ಟಿ, ಉಪಾಧ್ಶಕ್ಷರಾಗಿ ಜಿಲ್ಲಾ ಜನಜಾಗೃತಿ ವೇಧಿಕೆ ಸದಸ್ಶರು ತಾಲೂಕು ಯುವಜನ ಒಕ್ಕೂಟದ ಅಧ್ಶಕ್ಷರು ಶಿವಪ್ರಸಾದ್ ರೈ ಮೈಲೇರಿ, ಕಾರ್ಯದರ್ಶಿಯಾಗಿ ಯೋಜನಾಧಿಕಾರಿ ಮೇದಪ್ಪಗೌಡ ನಾವೂರು, ಜತೆಕಾರ್ಯದರ್ಶಿಯಾಗಿ ಗ್ರಾಮಪಂಚಾಯತ್ ಅಭಿವೃಧ್ಧಿಅಧಿಕಾರಿ ಆನಂದಗೌಡ
ಕೊಶಾಧಿಕಾರಿಯಾಗಿ ಸಾಮಾಜಿಕ ಕಾರ್ಯಕರ್ತರಾದ ಕೆ ಎಮ್ ಮ್ಶಾಥ್ಶೂ ಆಯ್ಕೆಯಾದರು.
ಸಮಿತಿ ಕಾರ್ಯಕಾರಿ ಸದಸ್ಶರಾಗಿ ಗ್ರಾಮಪಂಚಾಯತ್ ಸದಸ್ಶರುಗಳು ಹಾಗೂ ಒಕ್ಕೂಟದ ಅಧ್ಶಕ್ಷರುಗಳನ್ನು ಆಯ್ಕೆಮಾಡಲಾಯಿತು. ಕಾರ್ಯಕ್ರಮದ ಅಧ್ಶಕ್ಷತೆಯನ್ನು ಗ್ರಾಮಪಂಚಾಯತ್ ಅಧ್ಶಕ್ಷೆ ಸುಮನ ವಹಿಸಿದ್ದರು.
ವೇಧಿಕೆಯಲ್ಲಿ ಕಡಬ ವಲಯಒಕ್ಕೂಟಗಳ ಅಧ್ಶಕ್ಷ ರಮೇಶ್ ರೈ ಅರ್ಪಾಜೆ ˌಗ್ರಾಮಪಂಚಾಯತ್ ಉಪಾಧ್ಶಕ್ಷೆ ಯಶೋಧ ˌತಾಲೂಕು ಕೃಷಿ ಮೇಲ್ವೀಚಾರಕ ಸೋಮೇಶ್ ಹಾಗೂ ವಲಯ ಜನಜಾಗೃತಿವೇಧಿಕೆ ಅಧ್ಶಕ್ಷ ಕರುಣಾಕರ ಗೊಖಟೆ ಉಪಸ್ಥಿತರಿದ್ದರು. ಕಡಬ ಒಕ್ಕೂಟದ ಅಧ್ಶಕ್ಷೆ ನಳಿನಿ ರೈ ಪ್ರಾರ್ಥಿಸಿ ಗ್ರಾಮಪಂಚಾಯತ್ ಅಭಿವೃಧ್ಧಿ ಅಧಿಕಾರಿ ಆನಂದ ಗೌಡ ಸ್ವಾಗತಿಸಿದರು. ಶಿವಪ್ರಸಾದ್ ರೈ ಮೈಲೇರಿ ವಂದಿಸಿದರು. ಕಡಬ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಸೇವಾಪ್ರತಿನಿಧಿ ಪುಪ್ಪಾಲತಾ ಕುಟ್ರುಪ್ಪಾಡಿ ಒಕ್ಕೂಟದ ಅಧ್ಶಕ್ಷ ನಾಗಣ್ಣ ಗೌಡ ವಾಳ್ಶ ಒಕ್ಕೂಟದ ಅಧ್ಶಕ್ಷ ಚಂದ್ರಶೇಖರ ಗೌಡ ಸಂಜೀವಿನಿ ಒಕ್ಕೂಟದ ಅಧ್ಶಕ್ಷೆ ರಬೇಕಾ ಹಾಗೂ ಕುಟ್ರುಪ್ಪಾಡಿ ಗ್ರಾಮಪಂಚಾಯತ್ ನ ಎಲ್ಲಾ ಸದಸ್ಶರುಗಳು ಉಪಸ್ಥಿತರಿದ್ದರು.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…