ಶ್ರೀ ಮಹಾಲಿಂಗೇಶ್ವರ ದೇವರು ಅವಭೃಯ ಸ್ನಾನಕ್ಕೆ ತೆರಳುವ ಶಾಂತಿಗೋಡು ಗ್ರಾಮದ ವೀರಮಂಗಲ ದಂಡಿ ರಸ್ತೆಗೆ ಕಾಂಕ್ರಿಟೀಕರಣಕ್ಕೆ ಶಿಲಾನ್ಯಾಸ ಮಾಡಿದ ಶಾಸಕರು ದೇವರು ಅವಭೃತ ಸ್ನಾನಕ್ಕೆ ತೆರಳುವ ರಸ್ತೆಯನ್ನು ಯಾಕೆ ಕಾಂಕ್ರಿಟೀಕರಣ ಮಾಡಿಲ್ಲ ಎಂಬುದು ನನಗೆ ಗೊತ್ತಿಲ್ಲ.ಕಳೆದ ಏಳು ವರ್ಷಗಳಿಂದ ಇಲ್ಲಿನವರ ಬೇಡಿಕೆ ಇತ್ತು.
ಊರಿಡೀ ನಾನೇ ಅನುದಾನ ತಂದದ್ದು ಎಂದು ಹೇಳುವವರಿಗೆ ಈ ಪವಿತ್ರ ರಸ್ತೆಯ ಗೋಚರವಾಗಲಿಲ್ಲ ಎಂಬುದು ದುರಂತ. ಈ ರಸ್ತೆಗೆ ಸದ್ಯಕ್ಕೆ 5ಲಕ್ಷ ಅನುದಾನ ನೀಡಿದ್ದೇನೆ ಮುಂದೆ ಇದೇ ರಸ್ತೆಗೆ 15 ಲಕ್ಷ ಅನುದಾನ ನೀಡುವ ಮೂಲಕ ಪೂರ್ತಿಯಾಗಿ ಕಾಂಕ್ರೀಟ್ ಮಾಡುತ್ತೇವೆ ಎಂದು ಹೇಳಿದರು. ಹಿಂದುತ್ವದ ಆಧಾರದಲ್ಲಿ ಮತ ಕೇಳುವವರಿಗೆ ದೇವರು ತೆರಳುವ ರಸ್ತೆ ಮರೆಯಬಾರದಿತ್ತು. ನಮ್ಮದು ಪಕ್ಷಾತೀತ,ಜಾತ್ಯಾತೀತ ವ್ಯವಸ್ಥೆಯಾಗಿದೆ ನಾವು ಎಲ್ಲವನ್ನೂ ಒಂದೇ ದೃಷ್ಟಿಯಲ್ಲಿ ಕಾಣುವ ಮೂಲಕ ರಾಜಧರ್ಮ ಪಾಲನೆ ಮಾಡುತ್ತೇವೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂಬಿ ವಿಶ್ವನಾಥ ರೈ ಮಾತನಾಡಿ ಜನರ ಬೇಡಿಕೆಗಳನ್ನು ಈಡೇರಿಸುವ ಮೂಲಕ ಶಾಸಕರು ಜನಪ್ರಿಯತೆಯನ್ನು ಪಡೆಯುತ್ತಿದ್ದು ಪುತ್ತೂರಿನಲ್ಲಿ ಅಭಿವೃದ್ದಿ ಪರ್ವ ಪ್ರಾರಂಭವಾಗಿದೆ. ಎಲ್ಲಾ ಗ್ರಾಮಗಳಿಗೂ ಅನುದಾನವನ್ನು ಮೀಸಲಿಡುವ ಮೂಲಕ ಶಾಸಕರು ಸಮಾನತೆಯನ್ನು ಉಳಿಸಿಕೊಂಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರುಗಾಲದ ಬಾಬು ಶೆಟ್ಡಿ ವೀರಮಂಗಲ, ಹೊನ್ನಪ್ಪ ಪೂಜಾರಿ ಕೈಂದಾಡಿ, ನರಿಮೊಗರು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್
ಬೂತ್ ಅಧ್ಯಕ್ಷ ವಸಂತಪೂಜಾರಿ
,ಹಿರಿಯ ಕಾಂಗ್ರೆಸ್ ಮುಖಂಡವೇದನಾಥ ಸುವರ್ಣ, ಬ್ಲಾಕ್ ಎಸ್ ಟಿ ಘಟಕದ ಅಧ್ಯಕ್ಷರಾದ ಮಹಾಲಿಂಗ ನಾಯ್ಕ್
ಮಂಜುನಾಥ ಶೇಖ, ಗಂಗಾಧರ್ ಶೆಟ್ಟಿ ಎಲಿಕ ,ಜಗದೀಶ್ ಗೌಡ ಎರುಕಡಪ್ಪು, ಲೋಕೇಶ್ ಗೌಡ ಎರುಕಡಪ್ಪು, ಗಣೇಶ್ ದೋಳ, ವಿಜೇತ್ ಗೌಡ ನಾಗರಾಜ್ ದೋಳ,ಮಹಿಳಾ ಕಾಂಗ್ರೆಸ್ ಘಡಕದ ವಿಶಾಲಾಕ್ಷಿ ಬನ್ನೂರು, ನರಿಮೊಗರು ಗ್ರಾಪಂ ಮಾಜಿ ಅಧ್ಯಕ್ಷೆ ಚಂದ್ರಕಲಾ ಸೇರಿದಂತೆ ಹಲವು ಮಂದಿ ಗ್ರಾಮಸ್ಥರು ಉಪಸ್ಥಿತರಿದ್ದರು.
ಅಂತರರಾಷ್ಟ್ರೀಯ ಮಟ್ಟದಲ್ಲಿ ಅಥ್ಲೆಟಿಕ್ಸ್ ಕ್ಷೇತ್ರದಲ್ಲಿ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದಿರುವ ಖ್ಯಾತ ಕ್ರೀಡಾಪಟು ಎಂ.ಆರ್. ಪೂವಮ್ಮ ಅವರನ್ನು ದಕ್ಷಿಣ…
ಖ್ಯಾತ ಸಾಹಿತಿ ಕೋಟ ಶಿವರಾಮ ಕಾರಂತರ ಜನ್ಮದಿನದ ಅಂಗವಾಗಿ ಕಲ್ಕೂರ ಪ್ರತಿಷ್ಠಾನದ ಕಾರಂತ ಪ್ರಶಸ್ತಿ ಸಮಿತಿ ನೀಡುವ 2026ನೇ ಸಾಲಿನ…
ಗುಂಡ್ಯ-ಸುಬ್ರಹ್ಮಣ್ಯ ಹೆದ್ದಾರಿಯಲ್ಲಿ ಕಾರಿಗೆ ಕಡವೆಯೊಂದು ಡಿಕ್ಕಿಯಾಗಿ ಮೃತಪಟ್ಟ ಘಟನೆ ಕಡಬ ತಾಲೂಕಿನ ಅನಿಲ ಸಮೀಪ ನಡೆದಿದೆ. ಹೆದ್ದಾರಿಯಲ್ಲಿ ಕಾರು ಸಂಚರಿಸುತ್ತಿದ್ದ…
ಅಂತಾರಾಷ್ಟ್ರೀಯ ಹಾಗೂ ವಿಶ್ವಮಟ್ಟದ ಕ್ರೀಡಾಕೂಟಗಳಲ್ಲಿ ಪದಕ ಗೆಲ್ಲುವ ಕರ್ನಾಟಕದ ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಪ್ರೋತ್ಸಾಹಧನ ತೀರಾ ಕಡಿಮೆಯಾಗಿದ್ದು, ಇತರ…
ತಾಲೂಕಿನ ವಿವಿಧೆಡೆ ಚಿರತೆ ಓಡಾಟ ಕಂಡುಬಂದಿರುವ ಬಗ್ಗೆ ಸ್ಥಳೀಯರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಎರಡು ಕಡೆ ಬೋನು…
ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಮಾಡೂರು ಯೂಸುಫ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳಿಗೆ ಮಂಗಳೂರಿನ ಎರಡನೇ ಹೆಚ್ಚುವರಿ…