ಮೂಡುಬಿದಿರೆ: ರೋಟರ‍್ಯಾಕ್ಟ್ ಕ್ಲಬ್ ಮೂಡುಬಿದಿರೆ ಇದರ ಸುವರ್ಣ ಮಹೋತ್ಸವ ಆಚರಣೆ ಹಿನ್ನೆಲೆಯಲ್ಲಿ ಫೆಬ್ರವರಿ ೨೪ರಂದು ಸಮಾಜ ಮಂದಿರದಲ್ಲಿ ಕರೋಕೆ ಗಾಯನ ಹಾಗೂ ಫ್ಯಾಶನ್ ಶೋ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಫರಾಝ್ ಬೆದ್ರ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಗಾನ ಸುಧಾ ಸುದರ್ಶನ್ ಹೆಸರಿನಲ್ಲಿ ಕರೋಕೆ ಗಾಯನ ಮುಕ್ತ ಸ್ಪರ್ಧೆ ನಡೆಯಲಿದೆ. ಜಿಲ್ಲೆ, ಹೊರಜಿಲ್ಲೆಯವರು ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಸಲಾಗಿದೆ. ಫೆಬ್ರವರಿ ೧೧ಕ್ಕೆ ಸಮಾಜ ಮಂದಿರದಲ್ಲಿ ನಡೆಯುವ ಅರ್ಹತಾ ಸುತ್ತಿನಲ್ಲಿ ೧೨ ಮಂದಿ ಸ್ಪರ್ಧಿಗಳನ್ನು ಫೈನಲ್‌ಗೆ ಆಯ್ಕೆ ಮಾಡಲಾಗುವುದು. ಸ್ಥಳದಲ್ಲೆ ಹೆಸರು ನೋಂದಾಯಿಸಬಹುದು. ಫೈನಲ್‌ನಲ್ಲಿ ಪ್ರತಿ ಗಾಯಕರಿಗೆ ಕನ್ನಡ ಸಹಿತ ಮೂರು ಭಾಷೆಗಳಲ್ಲಿ ಹಾಡುಗಳನ್ನು ಹಾಡಲು ಅವಕಾಶವಿರುತ್ತದೆ ಎಂದು ಸ್ಪರ್ಧೆಯ ಸಂಯೋಜಕ ನವೀನ್ ಟಿ.ಆರ್ ಹೇಳಿದರು.
ಫ್ಯಾಶನ್ ಶೋ sಸ್ಪರ್ಧೆ ನಡೆಯಲಿದ್ದು ೧೦ರಿಂದ ೧೭ ವರ್ಷದೊಳಗಿನ ಬಾಲಕರಿಗೆ ಮಿಸ್ಟರ್ ಟೀನ್' ಮತು ಅದೇ ವಿಭಾಗದ ಬಾಲಕಿಯರಿಗೆಮಿಸ್ ಟೀನ್’ ಸ್ಪರ್ಧೆ ಹಾಗೂ ೧೮ರಿಂದ ೨೫ ವರ್ಷದೊಳಗಿನವರಿಗೆ ಮಿಸ್ಟರ್ ಮೂಡುಬಿದಿರೆ' ಮತ್ತುಮಿಸ್ ಮೂಡುಬಿದಿರೆ’ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಭಾಗವಹಿಸುವ ಸ್ಪರ್ಧಿಗಳಿಗೆ ಆನ್ಲೈಲ್ ನಲ್ಲಿ ಅರ್ಹತಾ ಸುತ್ತಿನ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು ಭಾವಚಿತ್ರಗಳೊಂದಿಗೆ ಹೆಸರು ನೋಂದಾಯಿಸಲು ಫೆಬ್ರವರಿ ೧೦ ಕಡೇ ದಿನವಾಗಿರುತ್ತದೆ. ಸ್ಪರ್ಧೆಗೆ ಪ್ರವೇಶ ಶುಲ್ಕ ಇರುವುದಿಲ್ಲ.
ವಿವರಗಳಿಗೆ ಫರಾಝ್ ಮೊಬೈಲ್ ಸಂಖ್ಯೆ 8095239231 ಸಂಪರ್ಕಿಸಬಹುದೆಂದು ತಿಳಿಸಿದರು.
ಎಂ.ಜೆ. ಸ್ಟೆಪ್ ಅಪ್ ಡ್ಯಾನ್ಸ್ ಸ್ಟುಡಿಯೋ ಇದರ ಕೊರಿಯೊಗ್ರಾಫರ್ ಅನೀಶ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಮಂಗಳೂರು: ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ ನಡೆಯಲಿದ್ದು, ಅದರ ಭಾಗವಾಗಿ ಕರ್ನಾಟಕದಲ್ಲಿ 2027ರ ಜನಗಣತಿಯ…
ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ…
ಬಂಟ್ವಾಳ: ತಾಲೂಕಿನ ವಗ್ಗದ ನಿವಾಸಿ ಅಟೋ ಚಾಲಕನೋರ್ವ ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. …
ಕಾಸರಗೋಡು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕರ‍್ಯರ‍್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ನಿನ್ನೆ ಕಾಸರಗೋಡಿಗೆ…
ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್‌ನಲ್ಲಿ ಖಾಸಗಿ ಬಸ್‌ಗೆ ಹಿಂಬದಿಯಿಂದ ಪಿಕಪ್ ವಾಹನ ಡಿಕ್ಕಿ ಹೊಡೆದಿದ್ದು, ಪಿಕಪ್ ವಾಹನದ ಮುಂಭಾಗವು ಸಂಪೂರ್ಣ…
ಹೆಮ್ಮಾಡಿ ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಯಾನಕ ವ್ಹೀಲಿಂಗ್ ಮಾಡಿದ ಯುವಕ ಕಳ್ಳತನ ಪ್ರಕರಣದಲ್ಲೂ ಭಾಗಿಯಾಗಿದ್ದು, ಈತನನ್ನು ಪೊಲೀಸರು ಬಂಧಿಸಿದ್ದಾರೆ. ಪೌಜಾನ್…