ಜನ ಮನದ ನಾಡಿ ಮಿಡಿತ

Advertisement

ಫೆ.24ರಂದು ರೋಟರ್ಯಾಕ್ಟ್ ಕ್ಲಬ್ ನಿಂದ ಕರೋಕೆ ಗಾಯನ

ಮೂಡುಬಿದಿರೆ: ರೋಟರ‍್ಯಾಕ್ಟ್ ಕ್ಲಬ್ ಮೂಡುಬಿದಿರೆ ಇದರ ಸುವರ್ಣ ಮಹೋತ್ಸವ ಆಚರಣೆ ಹಿನ್ನೆಲೆಯಲ್ಲಿ ಫೆಬ್ರವರಿ ೨೪ರಂದು ಸಮಾಜ ಮಂದಿರದಲ್ಲಿ ಕರೋಕೆ ಗಾಯನ ಹಾಗೂ ಫ್ಯಾಶನ್ ಶೋ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಫರಾಝ್ ಬೆದ್ರ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಗಾನ ಸುಧಾ ಸುದರ್ಶನ್ ಹೆಸರಿನಲ್ಲಿ ಕರೋಕೆ ಗಾಯನ ಮುಕ್ತ ಸ್ಪರ್ಧೆ ನಡೆಯಲಿದೆ. ಜಿಲ್ಲೆ, ಹೊರಜಿಲ್ಲೆಯವರು ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಸಲಾಗಿದೆ. ಫೆಬ್ರವರಿ ೧೧ಕ್ಕೆ ಸಮಾಜ ಮಂದಿರದಲ್ಲಿ ನಡೆಯುವ ಅರ್ಹತಾ ಸುತ್ತಿನಲ್ಲಿ ೧೨ ಮಂದಿ ಸ್ಪರ್ಧಿಗಳನ್ನು ಫೈನಲ್‌ಗೆ ಆಯ್ಕೆ ಮಾಡಲಾಗುವುದು. ಸ್ಥಳದಲ್ಲೆ ಹೆಸರು ನೋಂದಾಯಿಸಬಹುದು. ಫೈನಲ್‌ನಲ್ಲಿ ಪ್ರತಿ ಗಾಯಕರಿಗೆ ಕನ್ನಡ ಸಹಿತ ಮೂರು ಭಾಷೆಗಳಲ್ಲಿ ಹಾಡುಗಳನ್ನು ಹಾಡಲು ಅವಕಾಶವಿರುತ್ತದೆ ಎಂದು ಸ್ಪರ್ಧೆಯ ಸಂಯೋಜಕ ನವೀನ್ ಟಿ.ಆರ್ ಹೇಳಿದರು.
ಫ್ಯಾಶನ್ ಶೋ sಸ್ಪರ್ಧೆ ನಡೆಯಲಿದ್ದು ೧೦ರಿಂದ ೧೭ ವರ್ಷದೊಳಗಿನ ಬಾಲಕರಿಗೆ ಮಿಸ್ಟರ್ ಟೀನ್' ಮತು ಅದೇ ವಿಭಾಗದ ಬಾಲಕಿಯರಿಗೆಮಿಸ್ ಟೀನ್’ ಸ್ಪರ್ಧೆ ಹಾಗೂ ೧೮ರಿಂದ ೨೫ ವರ್ಷದೊಳಗಿನವರಿಗೆ ಮಿಸ್ಟರ್ ಮೂಡುಬಿದಿರೆ' ಮತ್ತುಮಿಸ್ ಮೂಡುಬಿದಿರೆ’ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ಭಾಗವಹಿಸುವ ಸ್ಪರ್ಧಿಗಳಿಗೆ ಆನ್ಲೈಲ್ ನಲ್ಲಿ ಅರ್ಹತಾ ಸುತ್ತಿನ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು ಭಾವಚಿತ್ರಗಳೊಂದಿಗೆ ಹೆಸರು ನೋಂದಾಯಿಸಲು ಫೆಬ್ರವರಿ ೧೦ ಕಡೇ ದಿನವಾಗಿರುತ್ತದೆ. ಸ್ಪರ್ಧೆಗೆ ಪ್ರವೇಶ ಶುಲ್ಕ ಇರುವುದಿಲ್ಲ.
ವಿವರಗಳಿಗೆ ಫರಾಝ್ ಮೊಬೈಲ್ ಸಂಖ್ಯೆ 8095239231 ಸಂಪರ್ಕಿಸಬಹುದೆಂದು ತಿಳಿಸಿದರು.

ಎಂ.ಜೆ. ಸ್ಟೆಪ್ ಅಪ್ ಡ್ಯಾನ್ಸ್ ಸ್ಟುಡಿಯೋ ಇದರ ಕೊರಿಯೊಗ್ರಾಫರ್ ಅನೀಶ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

ಮಂಗಳೂರು: ಮಂಗಳೂರಿನಲ್ಲಿ ಸಾರ್ವಜನಿಕ ಭೇಟಿ ನಡೆಸಿದ ಚೌಟ…!

ಬಂಟ್ವಾಳ: ಕಚೇರಿ ಪ್ರವೇಶ ದಾರಿಯಲ್ಲಿ ತ್ಯಾಜ್ಯ: ಅಧಿಕಾರಿಗಳ ಮೌನಕ್ಕೆ ಟೀಕೆ…!

ಬಂಟ್ವಾಳ: ಸಂಚರಿಸುತ್ತಿದ್ದ ಲಾರಿಯಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆ*ಂಕಿ…!

ಬಂಟ್ವಾಳ: ಹಗ್ಗ ಕಡಿದು ಬಾವಿಗೆ ಬಿದ್ದ ಇಬ್ಬರು ಕಾರ್ಮಿಕರು ಪಾರು….!

ಕಡೇಶಿವಾಲಯ: ನೆತ್ತರ ಬಾಬು ಪೂಜಾರಿಯವರ ಮನೆಗೆ ಸಿಡಿಲು ಬಡಿದು ಹಾನಿ….!

ಬಂಟ್ವಾಳ: ಸಿಡಿಲು ಬಡಿದ ಇಳಿಯೂರು ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಭೇಟಿ ನೀಡಿದ ಬಿಜೆಪಿ ಮುಖಂಡ ಸಂದೇಶ್ ಶೆಟ್ಟಿ ಅರೆಬೆಟ್ಟು..!

ಬಂಟ್ವಾಳ: ಕರಾವಳಿಯ ಕಾರಣೀಕ ದೈವ ಕೊರಗಜ್ಜನಿಗೆ ಕೋಲ ಸೇವೆ ಸಲ್ಲಿಸಿದ ಖ್ಯಾತ ಚಲನಚಿತ್ರ ನಟಿಯಾಗಿರುವ ರಚಿತರಾಮ್..!

ಬಂಟ್ವಾಳ: ಬಂಟ್ವಾಳ ತಾಲೂಕಿನ ಮಹತೋಬಾರ ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೆ ಬಡಿದ ಸಿಡಿಲು..!

ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಕೆಲ ಮನೆಗಳಿಗೆ ಸಿಡಿಲು ಬಡಿದು ಹಾನಿ..!

error: Content is protected !!