ಬಂಟ್ವಾಳ: ಇತಿಹಾಸ ಪ್ರಸಿದ್ಧ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನದ ಬಸವ ಶಂಕರ ಅನಾರೋಗ್ಯದಿಂದ ಕೆದ್ದಳಿಕೆಯ ಮನೆಯೊಂದರಲ್ಲಿ ಸೋಮವಾರ ಅಸು ನೀಗಿದೆ.
ಬಸವ ಶಂಕರ ಕಳೆದ 14ವರ್ಷಗಳಿಂದ ಕಾರಿಂಜ ದೇವಸ್ಥಾನದಲ್ಲಿ ಸೇವೆ ಸಲ್ಲಿಸುತ್ತಿದ್ದ. ಒಂದು ವರ್ಷ ಪ್ರಾಯದ ಬಸವನನ್ನು ದೇವರಿಗೆ ಹರಕೆ ರೂಪದಲ್ಲಿ ಒಪ್ಪಿಸಲಾಗಿತ್ತು. ಶಿವ ಕ್ಷೇತ್ರವಾದುದರಿಂದ ಶಂಕರ ಎಂದು ನಾಮಕರಣ ಮಾಡಲಾಗಿತ್ತು. ಸೌಮ್ಯ ಸ್ವಭಾವದ ಶಂಕರ ತನ್ನ ಗಾಂಭೀರ್ಯದಿಂದ ಜಾತ್ರೆ ಸಂದರ್ಭದಲ್ಲಿ ಆಕರ್ಷಣೆಯ ಕೇಂದ್ರವಾಗಿದ್ದ. ಜಾತ್ರೆ ಸಮಯದಲ್ಲಿ ಪ್ರತೀವರ್ಷ ಶಂಕರನಿಗೆ ರಾಜ ಪೋಶಾಕನ್ನು ಕಾವಳಕಟ್ಟೆಯ ದಿನೇಶ್ ಟೈಲರ್ ಅವರು ಸಿದ್ಧಪಡಿಸುತ್ತಿದ್ದರು. ಈ ಬಾರಿಯೂ ಹೊಸ ವಸ್ತ್ರ ತಯಾರಾಗಿತ್ತು. ಕೆಲವು ದಿನಗಳ ಹಿಂದೆ ಶಂಕರನನ್ನು ಆರೈಕೆಗಾಗಿ ಕೆದ್ದಳಿಕೆಗೆ ಕೊಂಡೊಯ್ಯಲಾಗಿತ್ತು. ಶಿವರಾತ್ರಿ ಜಾತ್ರೆಗೆ ಕೆಲವೇ ದಿನಗಳಿರುವಾಗ ಶಂಕರ ಮೃತಪಟ್ಟಿದ್ದು ಗ್ರಾಮಸ್ಥರಿಗೆ ದು:ಖವನ್ನುಂಟುಮಾಡಿದೆ. ಬಸವ ಶಂಕರನ ಅಂತಿಮ ಸಂಸ್ಕಾರವನ್ನು ಕೆದ್ದಳಿಕೆಯಲ್ಲಿ ನೆರವೇರಿಸಲಾಯಿತು.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…