ಕರಾವಳಿ

ಮಿಸ್ ಟೀನ್ ಗ್ಲೋಬಲ್ ವರ್ಲ್ಡ್ ಇಂಡಿಯಾ ಓಶಿಯಾನ – 2024 ಪ್ರಶಸ್ತಿ ತನ್ನದಾಗಿಸಿಕೊಂಡ ಮಂಗಳೂರಿನ ಕುಮಾರಿ ಇಶಿಕಾ ಶೆಟ್ಟಿ

ಮಂಗಳೂರು: ದೆಹಲಿಯ ಬಾಲಕಟೋರ ಸ್ಟೇಡಿಯಂ ನಲ್ಲಿ ಗ್ಲೋಬಲ್ ಇಂಡಿಯಾ ಎಂಟರ್‌ ಟೈನ್ ಮೆಂಟ್ ಪ್ರೊಡಕ್ಷನ್ ಮತ್ತು ಆಲಿ ಶರ್ಮಾ ಜಂಟಿಯಾಗಿ ಪ್ರಸ್ತುತ ಪಡಿಸಿರುವ ಮಿಸ್ಸಸ್ /ಮಿಸ್ಟರ್‌ ಮತ್ತು ಮಿಸ್ ಹಾಗೂ ಮಿಸ್ ಟೀನ್ ಗ್ಲೋಬಲ್ ವಲ್ಡ್ ಸೌಂದರ್ಯ ಸ್ಪರ್ಧೆಯಲ್ಲಿ ಮಂಗಳೂರಿನ ಕುಮಾರಿ ಇಶಿಕಾ ಶೆಟ್ಟಿ “ಮಿಸ್ ಟೀನ್ ಗ್ಲೋಬಲ್ ವರ್ಲ್ಡ್ ಇಂಡಿಯಾ ಓಶಿಯಾನ – 2024” ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿರುತ್ತಾರೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತಾನಾಡಿದ ಇಶಿಕಾ ಶೆಟ್ಟಿ, “ತಂದೆ ತಾಯಿಯ ಸಹಕಾರದಿಂದ ನಾನು ಈ ಸ್ಪರ್ಧೆಯಲ್ಲಿ ಪಾಲ್ಗೊಂಡು ಗೆಲ್ಲಲು ಸಾಧ್ಯವಾಯಿತು. ಮಂಗಳೂರು ಕಮಿಷನರ್ ಅನುಪಮ್ ಅಗರ್ವಾಲ್, ರವೀಶ್ ನಾಯಕ್ ಅವರ ಸಹಕಾರಕ್ಕೆ ಧನ್ಯವಾದಗಳು” ಎಂದರು.

ತಂದೆ ಶರತ್ ಶೆಟ್ಟಿ ಮಾತಾಡಿ “ಇಶಿಕಾ ಕುರಿತು ಮಾತಾಡಲು ಹೆಮ್ಮೆ ಆಗ್ತಾ ಇದೆ, ಸೌಂದರ್ಯ ಸ್ಪರ್ಧೆಯಲ್ಲಿ ದೇಶದ ನಾನಾ ಭಾಗಗಳಿಂದ 65ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದು ಅವರಲ್ಲಿ ನನ್ನ ಮಗಳು ಪ್ರಥಮ ಸ್ಥಾನಿಯಾಗಿ ಗೆದ್ದಿರುವುದು ಅತೀವ ಸಂತಸ ಉಂಟುಮಾಡಿದೆ. ನನಗೆ ಪೊಲೀಸ್ ಇಲಾಖೆಯಲ್ಲಿ ಬಹಳ ಸಹಕಾರ ನೀಡಿದ್ದಾರೆ ಅವರೆಲ್ಲರಿಗೂ ನಾನು ಅಭಾರಿ” ಎಂದರು.

ಬಾಲಿವುಡ್‌ನ ಖ್ಯಾತ ಚಿತ್ರ ನಟಿ ಶಿಲ್ಪಾ ಶೆಟ್ಟಿ ಮತ್ತು ಖ್ಯಾತ ಮಾಡೆಲ್ ಮತ್ತು ಮೆಂಟರ್
ಜತಿನ್ ಕಿರ್ಬಾತ್ ರವರು ಅಂತಿಮ ಸುತ್ತಿನ ಜ್ಯೂರಿಯಾಗಿ ಪಾಲ್ಗೊಂಡಿದ್ದ ಈ ಸೌಂದರ್ಯ ಸ್ಪರ್ಧೆಗೆ ದೇಶದ ನಾನಾ ರಾಜ್ಯಗಳ ಒಟ್ಟು 65 ಮಂದಿ ಸ್ಪರ್ದಾಳುಗಳು ಭಾಗವಹಿಸಿದ್ದು, ಅದರಲ್ಲಿ ಇಶಿಕಾ ಶೆಟ್ಟಿ ಪ್ರಥಮ ಪ್ರಶಸ್ತಿಯನ್ನು ಪಡೆದಿದ್ದಾರೆ.


ಕಾವೂರಿನ ಶಿವ ನಗರದಲ್ಲಿ ವಾಸವಾಗಿರುವ ಇಶಿಕಾ ಶೆಟ್ಟಿ ಮಂಗಳೂರು ನಗರ ಪೊಲೀಸ್ ಇಲಾಖೆಯಲ್ಲಿ ಎ.ಎಸ್.ಐ ಆಗಿರುವ ಶರತ್ ಕುಮಾರ್ ಶೆಟ್ಟಿ ಹಾಗೂ ಶ್ವೇತಾ ಶರತ್ ಶೆಟ್ಟಿ ದಂಪತಿಯ ಪ್ರಥಮ ಪುತ್ರಿಯಾಗಿದ್ದಾರೆ. ಶಾರದಾ ವಿದ್ಯಾಲಯ ಮತ್ತು ಬೆಸೆಂಟ್ ಕಾಲೇಜ್ ನಲ್ಲಿ ವಿದ್ಯಾಭ್ಯಾಸ ಮುಗಿಸಿ ಪ್ರಸ್ತುತ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ಪದವಿ ವ್ಯಾಸಾಂಗ ಮಾಡುತ್ತಿರುತ್ತಾಳೆ.
ಇಶಿಕಾ ಶೆಟ್ಟಿ 2022ರಲ್ಲಿ ಮಂಗಳೂರಿನಲ್ಲಿ ನಡೆದ ಸೌದರ್ಯ ಸ್ಪರ್ಧೆಯಲ್ಲಿ ಆಗಿಯೂ ಹಾಗೂ 2023 ರಲ್ಲಿ ಬೆಂಗಳೂರಿನಲ್ಲಿ ಎನ್.ಬಿ ಮಿಸ್‌ಟನ್ ಮಂಗಳೂರು ಮಾಡೆಲಿಂಗ್ ಮ್ಯಾನೇಜ್ ಮೆಂಟ್ ರವರು ನಡೆಸಿರುವ ಸೌಂದರ್ಯ ಸ್ಪರ್ಧೆಯಲ್ಲಿ ಮಿಸ್ ಟೀನ್ ಕರ್ನಾಟಕ 2023 ರ ಪ್ರಶಸ್ತಿಯನ್ನು ಗೆದ್ದಿರುತ್ತಾರೆ.
ಬಾಲ್ಯದಿಂದಲೂ ಶಿಕ್ಷಣದ ಜೊತೆಯಲ್ಲಿ ನಟನೆ ನೃತ್ಯ ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲಿ
ಅಪಾರ ಆಸಕ್ತಿಯನ್ನು ಹೊಂದಿರುವ ಹಾಗೂ ಸಾಧನೆಯನ್ನು ಗೈಯುತ್ತಿರುವ ಈಕೆಯನ್ನು
ಹಲವಾರು ಸಂಘ ಸಂಸ್ಥೆಯವರು ಸನ್ಮಾನಿಸಿ ಗೌರವಿಸಿರುತ್ತಾರೆ. ಕಳೆದ ವರ್ಷ 2023 ರಂದು ಮಂಗಳೂರಿನ ಪುರಭವನದಲ್ಲಿ ನಡೆದ ಆರಕ್ಷಕರ ಕನ್ನಡೋತ್ಸವ ಸಂಭ್ರಮಾಚರಣೆಯಲ್ಲಿ ಪೊಲೀಸ್
ಇಲಾಖೆಯು ಈಕೆಯನ್ನು ಅತ್ಯಂತ ಗೌರವದಿಂದ ಸನ್ಮಾನಿಸಿ ಪುರಸ್ಕರಿಸಿರುವುದು ಈಕೆಯ ಪ್ರತಿಭೆಗೆ ಸಾಕ್ಷಿಯಾಗಿದೆ.
ಪತ್ರಿಕಾ ಗೋಷ್ಠಿಯಲ್ಲಿ ಸಾಯಿ ಕೃಷ್ಣ ಕುಡ್ಲ, ಶರತ್ ಕುಮಾರ್‌ ಶೆಟ್ಟಿ, ಶ್ವೇತಾ ಶರತ್ ಶೆಟ್ಟಿ, ರವಿಕಲಾ ಶೆಟ್ಟಿ ಉಪಸ್ಥಿತರಿದ್ದರು.

ಅಭಿಮತ ಟಿವಿ

Abhimatha TV is a trusted channel renowned for its dedication to honest journalism and its unwavering commitment to showcasing the rich culture, heritage, and traditions of Tulunadu. With a focus on delivering unbiased news and promoting the region's vibrant art forms, rituals, and cultural events, Abhimatha TV has become a beacon of authenticity and pride for the community. Established in 2018, the channel was founded by Mamatha P. Shetty (Managing Partner) and Kanyana Sadhashiva Shetty (Chief Promoter) with a mission to provide truthful reporting and celebrate the essence of our heritage.

Recent Posts

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಮಂಜುನಾಥ್ ಶೆಟ್ಟಿ ದಂಪತಿಗೆ ಸನ್ಮಾನ

ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪೋಷಕ ಸದಸ್ಯರೂ, ಬಂಟ್ಸ್ ಅಸೋಸಿಯೇಷನ್ ನಾರ್ತ್ ಅಮೆರಿಕಾ (BANA) ಅಧ್ಯಕ್ಷರೂ ಆದ ಶ್ರೀ ಮಂಜುನಾಥ್…

16 hours ago

ಉಡುಪಿ: ಕರಾವಳಿ ನಿವಾಸಿಗಳ ಸಂಕಷ್ಟಕ್ಕೆ ಸ್ಪಂದಿಸಿದ ಜಿಲ್ಲಾಡಳಿತ…!

ಉಡುಪಿ ತಾಲೂಕಿನಲ್ಲಿ ಕಡಲ್ಕೊರೆತದಿಂದ ಹಾನಿಗೊಳಗಾಗಿರುವ ಹೆಜಮಾಡಿ, ಪಡುಬಿದ್ರಿ, ಎರ್ಮಾಳು, ಕಾಪು, ಪೊಲಿಪು ಹಾಗೂ ಕಟಪಾಡಿ-ಮಟ್ಟು ಪ್ರದೇಶಗಳಿಗೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ.…

17 hours ago

ಬಂಟ್ವಾಳ: ಮಾಣಿ ಸಮೀಪ ಜೋಗಿಬೆಟ್ಟು ರಸ್ತೆ ಕೆರೆಯಂತಾದ ದೃಶ್ಯ….!

ಮಳೆ ಸುರಿದರೆ ಸಾಕು, ಬಂಟ್ವಾಳ ತಾಲೂಕಿನ ಮಾಣಿ ಸಮೀಪದ ಪೆರಾಜೆ ಗ್ರಾಮದ ಜೋಗಿಬೆಟ್ಟು ರಸ್ತೆಯಲ್ಲಿ ಸಂಚಾರ ದುಸ್ತರವಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಗೆ…

17 hours ago

ವಾಷಿಂಗ್ಟನ್: ಉತ್ತರ ಅಮೆರಿಕಾ ಬಂಟರ ಸಂಘದ `ದಿಬ್ಬಣ’ ಮಹಾ ಅಧಿವೇಶನ..!

ಭಾರತ ಮತ್ತು ಅಮೆರಿಕಾಗಳು ಅನೇಕ ಸಾಮಾನ್ಯ ಅಂಶಗಳನ್ನು ಹೊಂದಿವೆ. ಅಮೆರಿಕಾ ಅವಕಾಶಗಳ ನಗರ. ಇಲ್ಲಿಗೆ ವಲಸೆ ಬಂದು ವಾಸಿಸುತ್ತಿರುವ ಭಾರತೀಯರು…

21 hours ago

ಮಂಗಳೂರು: ಮಂಗಳೂರಿನಲ್ಲಿ ಎಐ ಸಿ.ಸಿ ಕ್ಯಾಮರಾಗಳ ಅಳವಡಿಕೆ….!

ವಾಹನ ದಟ್ಟಣೆ ಹೆಚ್ಚುತ್ತಿರುವ ನಗರದಲ್ಲಿ ಸುಗಮ ಸಂಚಾರಕ್ಕೆ ಸ್ಮಾರ್ಟ್ ಸಿಟಿ ಯೋಜನೆಯಡಿ 181ಕ್ಕೂ ಅಧಿಕ ಎಐ ಸಿ.ಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.…

21 hours ago

ಬಂಟ್ವಾಳ: ಮಳೆ ಅನಾಹುತ: ರಾಯಿಯ ಜೀವನ್ ಪಿಂಟೋ ಮೃತದೇಹ ಪ*ತ್ತೆ…..!

ರಾಯಿ ಗ್ರಾಮದ ಪಾಂಚಕೋಡಿ ನಿವಾಸಿ ಜೋಸೆಫ್ ಪಿಂಟೋ ಎಂಬವರ ಪುತ್ರ ಜೀವನ್ ಪಿಂಟೊ ಅವರ ಚಪ್ಪಲಿ ಮತ್ತು ಟಾರ್ಚ್ ಶನಿವಾರ…

21 hours ago