ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿಗೆ ರೋಟರಿ ಜಿಲ್ಲೆ 31 81 ಇದರ ಜಿಲ್ಲಾ ಗವರ್ನರ್ ಎಚ್.ಆರ್. ಕೇಶವ ಅವರು ಶನಿವಾರ ಅಧಿಕೃತ ಭೇಟಿ ನೀಡಿ ವಿವಿಧ ಕೊಡುಗೆಗಳು ಹಾಗೂ ಸಹಾಯಧನ ಹಸ್ತಾಂತರ ಮಾಡಿರುವರು.
ಪಂಜ ಸಿ.ಎ. ಬ್ಯಾಂಕ್ ಬಳಿ ಜಿಲ್ಲಾ ಗವರ್ನರ್ ಅವರನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನವರು ಬರಮಾಡಿಕೊಂಡರು. ಅಲ್ಲಿಂದ ಬಳ್ಳಕ್ಕ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ರೋ. ಮೈಲಪ್ಪ ಸಂಕೇಶ್ ಅವರು ಕೊಡ ಮಾಡಿದ 9 ಅಂಗನವಾಡಿ ಕೇಂದ್ರಗಳಿಗೆ ಅಡುಗೆ ಸ್ಟೌ ಗಳನ್ನ ಉಚಿತವಾಗಿ ವಿತರಣೆ ಮಾಡಲಾಯಿತು. ಮುಂದೆ ಬಳ್ಪ ಎಡೋಣ ಶಿಶುಮಂದಿರಕ್ಕೆ ಭೇಟಿ ನೀಡಿ ಅಲ್ಲಿ ಚಿಕ್ಕ ಮಕ್ಕಳಿಗೆ ಚೇರ್ ಹಾಗೂ ಅಡಿಗೆ ಪರಿಕರಗಳನ್ನು ವಿತರಣೆ ಮಾಡಲಾಯಿತು.
ಅಲ್ಲಿಂದ ಏನೇಕಲ್ಲು ಶಾರದಾ ಗುಡ್ಡೆ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ಕೈಗೊಳ್ಳಲಾದ ವರ್ಲಿ ಚಿತ್ರಗಳನ್ನು ಅನಾವರಣ ಮಾಡಲಾಯಿತು. ತದನಂತರ ಏನೇ ಕಲ್ಲು ಬಾನಡ್ಕದಲ್ಲಿ ಡಾ.ರವಿ ಕಕ್ಕೆ ಪದವು ಅವರು ದಾನ ರೂಪದಲ್ಲಿ ಕೊಡ ಮಾಡಿದ ತನ್ನ ಸ್ವಂತ ಜಾಗದಲ್ಲಿ ಫಲಾನುಭವಿಗೆ ಕಟ್ಟಿಕೊಟ್ಟ ಮನೆಯನ್ನ ಹಸ್ತಾಂತರಿಸಲಾಯಿತು. ನಂತರ ಏನೇ ಕಲ್ಲು ಬಸ್ ನಿಲ್ದಾಣದ ಪಕ್ಕ ರೋಟರಿ ಕ್ಲಬ್ ಅಧ್ಯಕ್ಷ ರೋ. ಪ್ರಶಾಂತ ಕೋಡಿಬೈಲ್ ತನ್ನ ಸ್ವಂತ ಖರ್ಚಿಯಲ್ಲಿ ದಾನವಾಗಿ ಕೊಡ ಮಾಡಿದ ಆಟೋರಿಕ್ಷಾ ನಿಲ್ದಾಣ ವನ್ನು ಲೋಕಾರ್ಪಣೆಗೊಳಿಸಲಾಯಿತು.
ಸಂಜೆ ಏನೆಕಲ್ಲು ಡಿ .ಇ. ರಾಯಲ್ ಹೋಟೆಲ್ ನಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಸಾಧನೆಗೇಯ್ದ ಸಾಧಕರುಗಳನ್ನು ಸನ್ಮಾನಿಸಲಾಯಿತು. ಹಾಗೆ ವಿವಿಧ ಕಡೆಗಳಲ್ಲಿ ಕೊಡುಗೆಯಾಗಿ ನೀಡಿದ ರೋಟರಿ ಕ್ಲಬ್ಬಿನ ದಾನಿಗಳನ್ನು ಗೌರವಿಸಲಾಯಿತು. ಈ ಎಲ್ಲಾ ಸಂದರ್ಭಗಳಲ್ಲಿ ರೋಟರಿ ಅಸಿಸ್ಟೆಂಟ್ ಗವರ್ನರ್ ಪುರಂದರ ರೈ ,ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಅಧ್ಯಕ್ಷರು ,ಪದಾಧಿಕಾರಿಗಳು, ಇನ್ನರ್ ವೇಲ್ ಕ್ಲಬ್ಬಿನ ಅಧ್ಯಕ್ಷರು, ಸದಸ್ಯರುಗಳು ,ಹಾಗೂ ರೋಟರಿ ಕ್ಲಬ್ಬಿನ ಎಲ್ಲಾ ಸದಸ್ಯರು ಹಾಜರಿದ್ದರು.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…