ಬಂಟ್ವಾಳ: ಪಾರ್ಕಿಂಗ್ ಮಾಡಿ ಕೆಲಸಕ್ಕೆ ಹೋಗಿದ್ದ ವ್ಯಕ್ತಿಯೋರ್ವರ ದ್ವಿಚಕ್ರವಾಹನವೊಂದು ಕಳವಾದ ಘಟನೆ ಬಿ.ಸಿ.ರೋಡಿನ ನಗರ ಪೋಲೀಸ್ ಠಾಣಾ ಸಮೀಪವೇ ನಡೆದಿದೆ.
ವಾಮದಪದವು ಇರ್ವತ್ತೂರು ಮಣ್ಣೂರು ನಿವಾಸಿ ಕಾರ್ತಿಕ್ ಎಂಬವರಿಗೆ ಸೇರಿದ ಸ್ಕೂಟರ್ ಕಳವಾಗಿರುವ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾರ್ತಿಕ್ ಅವರು ಮಾ. 23 ರಂದು ಶನಿವಾರ ಬೆಳಿಗ್ಗೆ ವಾಮದಪದವು ಮನೆಯಿಂದ ಬಂದು ಬಿಸಿರೋಡಿನ ಹಳೆಯ ತಾಲೂಕು ಪಂಚಾಯತ್ ಕಟ್ಟಡ ಕೆಡವಿದ ಖಾಲಿ ಜಾಗದಲ್ಲಿ ಸ್ಕೂಟರ್ ನಿಲ್ಲಿಸಿ , ಬಡಕಬೈಲು ಎಂಬಲ್ಲಿ ಕೆಲಸದ ನಿಮಿತ್ತ ಹೋಗಿದ್ದರು.
ಕೆಲಸ ಮುಗಿಸಿ ರಾತ್ರಿ ಬಂದು ನೋಡಿದಾಗ ಸ್ಕೂಟರ್ ನಿಲ್ಲಿಸಿದ ಜಾಗದಲ್ಲಿರದೆ ಕಾಣೆಯಾಗಿದ್ದು, ಕಳವಾಗಿರುವ ಸಂಶಯವನ್ನು ವ್ಯಕ್ತಪಡಿಸಿ, ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.ಸ್ಕೂಟರ್ ನಅಂದಾಜು ಮೌಲ್ಯ 55 ಸಾವಿರ ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪೋಲೀಸ್ ಠಾಣೆಯ ಸನಿಹದಲ್ಲೇ ಕಳವು
ಕಳೆದ ಕೆಲವು ಸಮಯಗಳಿಂದ ನಿರಂತರವಾಗಿ ವಾಹನಗಳ ಕಳವು ನಡೆಯುತ್ತಿದ್ದು, ವಾಹನ ಸವಾರರು ಪಾರ್ಕ್ ಮಾಡಿ ತೆರಳಲು ಹೆದರುತ್ತಿದ್ದಾರೆ.ಬಿಸಿರೋಡಿನ ಪ್ಲೈ ಓವರ್ ಅಡಿಭಾಗದಲ್ಲಿ ಅನೇಕ ವಾಹನಗಳು ಕಳವಾಗಿದ್ದು, ಇನ್ನೂ ಬಹುತೇಕ ವಾಹನಗಳ ಪತ್ತೆ ಕಾರ್ಯ ನಡೆಯದೆ ಕಗ್ಗಂಟಾಗಿ ಉಳಿದಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಅದರಲ್ಲೂ ಪೋಲೀಸ್ ಠಾಣೆಯ ಕೂಗಳತೆಯ ದೂರದಲ್ಲಿ ವಾಹನಗಳ ಕಳವು ನಡೆಯುವುತ್ತಿರುವುದು ಸಾರ್ವಜನಿಕ ವಲಯದಲ್ಲಿ ಒಂದಷ್ಟು ಆತಂಕ ವ್ಯಕ್ತವಾಗಿದೆ.
ನಗರ ಪ್ರದೇಶದಲ್ಲಿ ಅಲ್ಲಲ್ಲಿ ಸಿ.ಸಿ.ಕ್ಯಾಮರಾ ಅಳವಡಿಕೆಯಾಗಿದ್ದರೂ ಕೂಡ ಕ್ಯಾಮರಾದ ಕಣ್ತಪ್ಪಿಸಿ ಕಳವು ಮಾಡುವ ಕಳ್ಳರ ಕೈಚಳಕದ ಬಗ್ಗೆ ಪೋಲೀಸ್ ಇಲಾಖೆ ಸರಿಯಾದ ಕ್ರಮಗೊಳ್ಳಬೇಕು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಮಂಗಳೂರು: ಇತ್ತೀಚೆಗೆ ನಿಧನ ಹೊಂದಿದ ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜಿ ಕೋಶಾಧಿಕಾರಿ ಹಾಗೂ ಯೂನಿಯನ್ ಬ್ಯಾಂಕಿನ ನಿವೃತ್ತ…
ಮಂಗಳೂರು: ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ ನಡೆಯಲಿದ್ದು, ಅದರ ಭಾಗವಾಗಿ ಕರ್ನಾಟಕದಲ್ಲಿ 2027ರ ಜನಗಣತಿಯ…
ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಇದರ ಮಂಗಳೂರು ನಗರ ಘಟಕದ ಅಷ್ಟಮ ಸಂಭ್ರಮ ಕಾರ್ಯಕ್ರಮವು ಮಂಗಳೂರು ನಗರ ಘಟಕದ…
ಬಂಟ್ವಾಳ: ತಾಲೂಕಿನ ವಗ್ಗದ ನಿವಾಸಿ ಅಟೋ ಚಾಲಕನೋರ್ವ ಕಾಣೆಯಾದ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. …
ಕಾಸರಗೋಡು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕರ‍್ಯರ‍್ಶಿ ಹಾಗೂ ಕೇರಳದ ಚುನಾವಣಾ ಪ್ರಭಾರಿ ವಿನೋದ್ ಥಾವ್ಡೆ ಅವರು ನಿನ್ನೆ ಕಾಸರಗೋಡಿಗೆ…
ಮಾಣಿ ಸಮೀಪದ ಸೂರಿಕುಮೇರು ಜಂಕ್ಷನ್‌ನಲ್ಲಿ ಖಾಸಗಿ ಬಸ್‌ಗೆ ಹಿಂಬದಿಯಿಂದ ಪಿಕಪ್ ವಾಹನ ಡಿಕ್ಕಿ ಹೊಡೆದಿದ್ದು, ಪಿಕಪ್ ವಾಹನದ ಮುಂಭಾಗವು ಸಂಪೂರ್ಣ…