ಮೂಲ್ಕಿ; ಹಳೆಯಂಗಡಿಯ ಸಹಕಾರಿ ಭೀಷ್ಮ ದಿವಂಗತ. ಎಚ್ ನಾರಾಯಣ ಸನಿಲ್ ಮತ್ತು ಸಹಕಾರಿ ಧುರೀಣ ದಿ.ಪಂಜದಗುತ್ತುಶಾಂತರಾಮ ಶೆಟ್ಟಿರವರ ಪ್ರೇರಣಾ ಶಕ್ತಿಯಿಂದಾಗಿ ಪ್ರಾರಂಭಗೊಂಡ ಹಳೆಯಂಗಡಿಯ ಪ್ರಿಯದರ್ಶಿನಿ ಕೋ-ಆಪರೇಟಿವ್ ಸೊಸೈಟಿ ಮಾಜಿ ಸಚಿವ ಕೆ ಅಭಯಚಂದ್ರಜೈನ್‌ರವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದೆ.
ಪರಿಸರದಲ್ಲಿ ಸಹಕಾರಿ ಸಾಧನೆಯನ್ನು ಮಾಡಬೇಕೆಂಬ ದೂರದೃಷ್ಟಿಯ ಸಹಕಾರಿ ತಂಡವು ಕೇವಲ ಅತ್ಯಲ್ಪಅವಧಿಯಲ್ಲಿ ಉತ್ತಮ ಸಾಧನೆಗೈದು ಇದೀಗ ಹಳೆಯಂಗಡಿ,ಪಡುಬಿದ್ರಿ ಬಳಿಕ ತನ್ನ ಮೂರನೇ ಶಾಖೆ ಕಿನ್ನಿಗೋಳಿ ಬೆತ್ಲೇಮ್ ಸ್ಟಾರ್ ಕಾಂಪ್ಲೇಕ್ಸ್ ನಲ್ಲಿ ಮಾರ್ಚ್ 31 ರಂದುಪ್ರಾರಂಭಗೊಳ್ಳಲಿದೆ. 2023-24ನೇ ಸಾಲಿನಲ್ಲಿ ಅಂದಾಜು ಸುಮಾರು 195 ಕೋಟಿ ರೂಪಾಯಿಗಳ ವಹಿವಾಟನ್ನು ನಿರ್ವಹಿಸಿದ್ದು, ಸ್ಥಳೀಯವಾಗಿ ಉತ್ತಮಕಾರ್ಯ ನಿರ್ವಹಣೆ ಮಾಡುತ್ತಿದೆ. 2023-24ನೇ ಸಾಲಿನಲ್ಲಿ ಉತ್ತಮ ರೀತಿಯ ಲಾಭಾಂಶದ ಗುರಿಯನ್ನುಇಟ್ಟುಕೊಂಡಿದ್ದು, ನಿರೀಕ್ಷೆಯಂತೆ ಲಾಭಾಂಶ ಬರುವಎಲ್ಲಾ ಅವಕಾಶಗಳು ಇದೆ ಎಂದುಅಂದಾಜಿಸಲಾಗಿದೆ.
ಕಿನ್ನಿಗೋಳಿ ಶಾಖೆ ಮಾರ್ಚ್ 31 ರ ಬೆಳಿಗ್ಗೆ10.30 ಕ್ಕೆ ಉದ್ಘಾಟನೆಗೊಳ್ಳಲಿದ್ದು, ಉದ್ಘಾಟನೆಯನ್ನುಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿ. ಬೆಂಗಳೂರು, ಹಾಗೂ ದ. ಕ. ಜಿಲ್ಲಾಕೇಂದ್ರ ಸಹಕಾರಿ ಬ್ಯಾಂಕ್ ಲಿ., ಮಂಗಳೂರುನ ಅಧ್ಯಕ್ಷ ಡಾ| ಎಂ. ಎನ್. ರಾಜೇಂದ್ರಕುಮಾರ್ ನೆರವೇರಿಸಲಿದ್ದಾರೆ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಸೀಮೆ ಅರಸರಾದ ಎಂ. ದುಗ್ಗಣ್ಣ ಸಾವಂತರು ವಹಿಸಲಿದ್ದು, ಕಲಾವಿದ ಆಕರ್ಷಣೆಯಾಗಿ ಭೋಜರಾಜ್ ವಾಮಂಜೂರು ಭಾಗವಹಿಸಲಿದ್ದಾರೆ.
ದೀಪ ಪ್ರಜ್ವಲನೆಯನ್ನು ಮಾಜಿ ಸಚಿವ ಕೆ. ಅಭಯಚಂದ್ರರವರು,ಭದ್ರತಾಕೊಠಡಿಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿಯವರು, ಪ್ರಿಯದರ್ಶಿನಿ ಸ್ವಸಹಾಯ ಗುಂಪಿಗೆ ಚಾಲನೆಯನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ಎಂ ರೈರವರು, ಅಮೃತ ನಗದು ಪತ್ರಠೇವಣಿ ಬಿಡುಗಡೆಯನ್ನು ಕಿನ್ನಿಗೋಳಿಯ ಕೊಸೆಸಾಂವ್ ಅಮ್ಮನವರ ಚರ್ಚ್ ನ ಧರ್ಮ ಗುರುಗಳಾದ ಫಾ| ಫಾವುಸ್ತಿನ್ ಲುಕಾಸ್ ಲೋಬೋ ರವರು,ಠೇವಣಿ ಪತ್ರ ಬಿಡುಗಡೆಯನ್ನು ದುರ್ಗಾದಯ ಕಿನ್ನಿಗೋಳಿಯ ಮಾಲಕ ಸೀತಾರಾಮ ಶೆಟ್ಟಿಯವರು, ಉಳಿತಾಯ ಖಾತೆಯ ಪಾಸ್‌ಬುಕ್ ವಿತರಣೆಯನ್ನುಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿ., ಬೆಂಗಳೂರುನ ನಿರ್ದೇಶಕ ಡಾ| ಐಕಳಬಾವ ದೇವಿ ಪ್ರಸಾದ್ ಶೆಟ್ಟಿಯವರು, ಮಾಸಿಕ ಠೇವಣಿ ಪತ್ರ ಬಿಡುಗಡೆಯನ್ನು ಸಿ.ಎಸ್.ಐ ಅಮ್ಮನ್ ಮೆಮೊರಿಯಲ್‌ಚರ್ಚ್ ಹಳೆಯಂಗಡಿಯ ಸಭಾಪಾಲಕ ರೇ| ಅಮೃತ್‌ರಾಜ್‌ಖೋಡೆರವರು, ಪ್ರಥಮ ವಾಹನ ಸಾಲ ವಿತರಣೆಯನ್ನು ವ್ಯವಸ್ಥಾಪನಾ ಸಮಿತಿ, ಶ್ರೀ ಮಹಾಲಿಂಗೇಶ್ವರ ಮಹಾಗಣಪತಿದೇವಸ್ಥಾನ ಪಾವಂಜೆಯ ಅಧ್ಯಕ್ಷ ಬಿ. ಸೂರ್ಯಕುಮಾರ್‌ರವರು, ನಿತ್ಯನಿಧಿ ಪಾಸ್‌ಬುಕ್ ವಿತರಣೆಯನ್ನು ಲಯನ್ ಜಿಲ್ಲಾ ಗವರ್ನರ್ ಡಾ|| ಮೆಲ್ವಿನ್ ಡಿ ಸೋಜ ರವರು ನೆರವೇರಿಸಲಿದ್ದಾರೆ.
ದ.ಕ. ಮತ್ತು ಉಡುಪಿ ಜಿಲ್ಲೆಯ ಸಹಕಾರ ಸಂಘಗಳ ಉಪ ನಿಬಂಧಕರಾದ ಎಚ್. ಎನ್ ರಮೇಶ್, ಕಿನ್ನಿಗೋಳಿ ಪಟ್ಟಣ ಪಂಚಾಯತ್‌ನ ಮುಖ್ಯಾಧಿಕಾರಿ ಎಮ್. ಎಲ್. ನಾಗರಾಜ್, ಇನ್ನರ್ ವಿಲ್ ಕ್ಲಬ್ ಕಿನ್ನಿಗೋಳಿಯ ಅಧ್ಯಕ್ಷ ಸವಿತಾ ಶೆಟ್ಟಿ, ಖಲಿರಿಯಾಜುಮ್ಮಾ ಮಸೀದಿ ಗುತ್ತಕಾಡುನ ಅಧ್ಯಕ್ಷ ಅಬೂಬಕ್ಕರ್, ಕಿನ್ನಿಗೋಳಿ ಧರ್ಮಕೇಂದ್ರ – ಪಾಲನಾ ಮಂಡಳಿ ಉಪಾಧ್ಯಕ್ಷ ವಿಲಿಯಂ ಡಿಸೋಜ, ಎ.ಪಿ.ಎಮ್.ಸಿ ಮಾಜಿ ಅಧ್ಯಕ್ಷ ಪ್ರಮೋದ್ ಕುಮಾರ್,ಜಿ ಪಂ ಮಾಜೀ ಸದಸ್ಯೆ ಶೈಲಾ ಸಿಕ್ವೇರಾ, ಕಿನ್ನಿಗೋಳಿ ಗ್ರಾ ಪಂನ ಮಾಜಿ ಅಧ್ಯಕ್ಷ ಟಿ. ಎಚ್ ಮಯ್ಯದ್ದಿ,, ದ.ಕ. ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರಾದ ಜಯಂತಿ, ಕಾಳಿಕಾಂಬ ಜ್ಯುವೆಲರ್ಸ್ ಮಾಲಕ ಯೋಗೀಶ್ ಆಚಾರ್ಯ, ಬೆತ್ಲೇಮ್ ಸ್ಟಾರ್ ಕಾಂಪ್ಲೇಕ್ಸ್ ಮಾಲಕ ಕೆ. ದೀಪಕ್ ಎ. ರೊಡ್ರಿಗಸ್‌ರವರು, ಕಟ್ಟಡದ ಮಾಲೀಕ ಗೋಪಾಲಕೃಷ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಿಯದರ್ಶಿನಿ ಸೊಸ್ಯೆಟಿಯ ಅಧ್ಯಕ್ಷ ಎಚ್ ವಸಂತ ಬೆರ್ನಾಡ್ ತಿಳಿಸಿದ್ದಾರೆ. ಈ ಸಂಧರ್ಭದಲ್ಲಿ ಸೊಸೈಟಿಯ ಉಪಾಧ್ಯಕ್ಷ ಪ್ರತಿಭಾ ಕುಳಾಯಿ, ಮುಖ್ಯಕಾರ್ಯನಿರ್ವಹಣಾಧಿಕಾರಿ ಸುದರ್ಶನ್, ನಿರ್ದೇಶಕರಾದ ಡಾ|| ಗಣೇಶ್‌ಅಮೀನ್ ಸಂಕಮಾರ್, ಗೌತಮ್‌ಜೈನ್, ಉಮಾನಾಥ್‌ಜೆ ಶೆಟ್ಟಿಗಾರ್, ಗಣೇಶ್ ಪ್ರಸಾದ್‌ದೇವಾಡಿಗ, ತನುಜಾ ಶೆಟ್ಟಿ, ವಿಜಯಕುಮಾರ್ ಸನಿಲ್, ಮಿರ್ಜಾಅಹಮ್ಮದ್, ನವೀನ್ ಸಾಲ್ಯಾನ್ ಉಪಸ್ಥಿತರಿದ್ದರು
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…