ಚುನಾವಣಾ ಸಮಯದಲ್ಲಿ ರೈತರ ಪರವಾನಗಿ ಇರುವ ಬಂದೂಕುಗಳನ್ನು ಠಾಣೆಗಳಲ್ಲಿ ಠೇವಣಿ ಇಡುವುದರಿಂದ ವಿನಾಯಿತಿ ನೀಡಬೇಕೆಂದು ಸಂಬoಧಪಟ್ಟ ಅಧಿಕಾರಿಗಳಿಗೆ ಎಷ್ಟೇ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ, ಇನ್ನು ಕಾನೂನು ಹೋರಾಟವೊಂದೇ ದಾರಿ ಈ ಹಿನ್ನೆಲೆಯಲ್ಲಿ ಬಂದೂಕು ಹೊಂದಿರುವ ರೈತರ ಸಮಾಲೋಚನಾ ಸಭೆಯನ್ನು ಕಡಬ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಕರೆಯಲಾಗಿದೆ ಎಂದು ರೈತ ಮುಖಂಡ ವಿಕ್ಟರ್ ಮಾರ್ಟಿಸ್ ಹೇಳಿದರು.
ಅಭಿಮತ ಕಡಬ
ಅವರು ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಬಂದೂಕು ಠೇವಣಿ ಇಡುವ ವಿಚಾರದಲ್ಲಿ ರೈತರಿಗೆ ಇನ್ನಿಲ್ಲದ ಕಿರಿಕಿರಿ ನೀಡಲಾಗುತ್ತದೆ, ಕೃಷಿ ಹಾಗೂ ನಮ್ಮ ರಕ್ಷಣೆಗೆೆ ಇರುವ ಕೋವಿಯನ್ನು ಠೇವಣಿ ಇಡುವುದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದರೆ ಯಾವುದೇ ಪ್ರಯೋಜನವಾಗಿಲ್ಲ. ಜನಪ್ರತಿನಿಧಿಗಳಾಗಲಿ, ಸರಕಾರವಾಗಲಿ ನಮ್ಮ ಬೇಡಿಕೆಗೆ ಮನ್ನಣೆ ನೀಡುತ್ತಿಲ್ಲ. ಹಾಗಾಗಿ ಜಿಲ್ಲೆಯ ಎಲ್ಲಾ ಕೋವಿ ಬಳಕೆದಾರರನ್ನು ಒಗ್ಗೂಡಿಸಿ, ಸಮಿತಿ ರಚಿಸಿಕೊಂಡು ಉಚ್ಛ ನ್ಯಾಯಾಲಯದಲ್ಲಿ ಕಾನೂನು ಸಮರಕ್ಕೆ ಸಿದ್ದತೆ ನಡೆಸಲು ಸಭೆ ಕರೆಯಲಾಗಿದೆ ಎಂದು ಹೇಳಿದರು. ಕೇಂದ್ರ ಚುನಾವಣಾ ಆಯೋಗವೇನೋ ಕೋವಿಗಳನ್ನು ಠೇವಣಿ ಇಡಲು ಸೂಚನೆ ನೀಡಿದೆ. ಆದರೆ ರಾಜ್ಯ ಸರಕಾರ ಯಾಕೆ ಸಮ್ಮನಿದೆ, ಕನಿಷ್ಟ ಈ ಕಾನೂನಿನ ವಿರುದ್ಧ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ದಾವೆ ಹೂಡಿ ರಾಜ್ಯದ ರೈತ ಹಿತ ಕಾಯಬಹುದಿತ್ತು. ಆದರೆ ಅದರ ಬದಲು ರೈತರನ್ನು ದ್ವೇಷಿಗಳಂತೆ, ಉಗ್ರಗಾಮಗಳಂತೆ ನೋಡುತ್ತಿದೆ ಎಂದು ಆರೋಪಿಸಿದರು. ರಾಜ್ಯ ಸರಕಾರ ರೈತರ ಪರವಾಗಿ ಭಾಷಣ ಮಾಡಿದರೆ ಸಾಲದು, ಈ ನಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಹುಡಕಬೇಕು, ಈ ವಿಚಾರದಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ, ಕೋವಿ ಠೇವಣಿಯಿಂದ ವಿನಾಯಿತಿ ನೀಡಬೆಕೆಂದು ಜಿಲ್ಲಾಡಳಿತಕ್ಕೆ ನೀಡಿದ ೩೦೭ ಅರ್ಜಿಗ ಪೈಕಿ ಕೇವಳ ಏಳು ಅರ್ಜಿಗಳನ್ನು ಮಾತ್ರ ಮಾನ್ಯ ಮಾಡಲಾಗಿದೆ. ಅಧಿಕಾರಿಗಳು ಹಾಗೂ ನಮ್ಮ ಸಮಯ ವ್ಯರ್ಥವಾಗಿರುವುದು ಬಿಟ್ಟರೆ ಯಾವುದೇ ಪ್ರಯೋಜನವಾಗಿಲ್ಲ. ಚುನಾವಣೆ ವೇಳೆ ಅಷ್ಟೊಂದು ಪೋಲೀಸ್ ಪೋರ‍್ಸ್ ಇರುವಾಗ ನಮ್ಮ ಕೋವಿಯನ್ನು ಯಾಕೆ ಠೇವಣಿ ಇಡುವುದರಿಂದ ಪೋಲೀಸ್ ಇಲಾಖೆಯಲ್ಲಿ ವೈಫಲ್ಯ ಇದೆ ಎಂದು ಅನುಮಾನ ಮೂಡುತ್ತದೆ. ಹಿಂದೆ ಕೋವಿ ಪರವಾನಗಿ ಅಥವಾ ಅದರ ನವೀಕರಣಕ್ಕೆ ಯಾವುದೇ ಶುಲ್ಕವಿರಲಿಲ್ಲ. ಆದರೆ ಈಗ ೨೫೦೦ ರೂ ಪಾವತಿ ಮಾಡಬೇಕು ತಪ್ಪಿದರೆ ಮತ್ತಷ್ಟು ದಂಢ ವಿಧಿಸಲಾಗುತ್ತದೆ, ನಿಮ್ಮ ಖಜಾನೆ ತುಂಬಲು ರೈತರ ಬಂದೂಕಿನ ದುಡ್ಡು ಬೇಕಾ ಎನ್ನುವ ಪ್ರಶ್ನೆ ಬರುತ್ತದೆ. ಕೋವಿ ಠೇವನಾತಿಯ ವಿನಾಯಿತಿ ವಿಚಾರದಲ್ಲಿ ಸ್ಕ್ರೀನ್ oಗ್ ಕಮಿಟಿ ಯಲ್ಲಿ ಪ್ರಗತಿಪರ ಕ್ರಷಿಕರನ್ನು , ಚಿಂತಕರನ್ನು, ಬುದ್ದಿಜೀವಿಗಳನ್ನು ಸೇರಿಸಬೇಕು ಎನ್ನುವುದು ನಮ್ಮ ಅಗ್ರಹವಾಗಿದೆ ಎಂದು ಹೇಳಿದ ವಿಕ್ಟರ್ ಮಾರ್ಟಿಸ್ ಕಡಬದ ಅಂಬೇಡ್ಕರ್ ಭವನವನ್ನು ರೈತರ ಸಭೆ ನಡೆಸಲು ಉಚಿತವಾಗಿ ನೀಡಬೇಕು ಎಂದು ಅಗ್ರಹಿಸಿದರು.
ಈಲ್ಲಾ ಪಮಚಾಯಿತಿ ಮಾಜಿ ಸದಸ್ಯ ಶಿವಣ್ಣ ಗೌಡ ಇಡ್ಯಾಡಿ ಮಾತನಾಡಿ ಕೊಡುಗು ಹಾಗೂ ಕೇರಳದಲ್ಲಿ ಚುನಾವಣೆ ಸಂದರ್ಭದಲ್ಲಿ ಕೋವಿ ಠೇವಣಿ ಇಡುವ ಕಾನೂನು ಇಲ್ಲ, ನಮ್ಮಲ್ಲಿ ಅನಗತ್ಯ ತೊಂದರೆ ನೀಡಲಾಗುತ್ತಿದೆ. ಈ ವಿಚಾರದಲ್ಲಿ ರೈತರೆಲ್ಲಾ ಒಗ್ಗಟ್ಟಾಗಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಇದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕುಂತೂರು ಪದವು ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಜೇಮ್ಸ್ ತೋಮಸ್ ವಿ.ಎಂ., ನಾಟಿ ವೈದ್ಯ ವಾಸುದೇವ ಇಡ್ಯಾಡಿ, ರೈತ ಮುಖಂಡರಾದ. ಉಮ್ಮರಬ್ಬ ಮುಳಾರ್, ಸಂತೋಷ್ ಉಳಿಪ್ಪು ಮತ್ತಿತರರು ಉಪಸ್ಥಿತರಿದ್ದರು.
ಸರ್ಕಾರ ಅಧಿಕೃತವಾಗಿ ಘೋಷಿಸಿರುವ ದಸರಾ ರಜೆಯ ಅವಧಿಯಲ್ಲಿ ತರಗತಿ ಹಾಗೂ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿರುವ ಶ್ರೀರಾಮ ಸೇನೆಯ ರಾಷ್ಟ್ರೀಯ…
ತಾಲೂಕಿನ ನಾಲ್ಕೂರು ಗ್ರಾಮದ ಪಾಡಿ ಎಂಬಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಮಾನವನ ಅಸ್ಥಿಪಂಜರ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಬಳಂಜ ಪಾಡಿ…
ನಗರದ ಗೀತಾಂಜಲಿ ಸಿಲ್ಕ್ಸ್ ರಸ್ತೆಯಲ್ಲಿ ಸಾವಿರಾರು ರೆಕ್ಕೆ ಗೆದ್ದಲುಗಳು ಏಕಕಾಲದಲ್ಲಿ ಹಾರಾಡಿದ್ದು, ಸಾರ್ವಜನಿಕರ ಗಮನ ಸೆಳೆಯಿತು. ರಸ್ತೆಯ ಇಕ್ಕೆಲಗಳಲ್ಲಿರುವ ಅಂಗಡಿಗಳ…
ಬಂಟರ ಸಂಘ ಮುಂಬೈನ ಜ್ಞಾನ ಮಂದಿರ ಸಮಿತಿಯ ವತಿಯಿಂದ ಸಾರ್ವಜನಿಕ ಸತ್ಯನಾರಾಯಣ ಪೂಜಾ ಉದ್ಯಾಪನ ಕಾರ್ಯಕ್ರಮವು ಸೆ.26ರಂದು ಕುರ್ಲಾದ ಶ್ರೀಮತಿ…
ಎಬಿವಿಪಿ ಸಂಘಟನೆಯ ಮೂಲಕ ಸಾಮಾಜಿಕ ಹಾಗೂ ಸಂಘಟನಾ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಪ್ರದೀಪ್ ಅಜ್ಜಿಬೆಟ್ಟು ಅವರನ್ನು ಹಿಂದೂ ಜಾಗರಣಾ ವೇದಿಕೆಯ…
ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಬ್ಯಾಟಿಯಾಣಿ ಎಂಬಲ್ಲಿ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕೆಂಪುಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ಬೈಂದೂರು ಪೊಲೀಸರು…