ಸ್ಫೋರ್ಟ್ಸ್ ಕ್ಲಬ್ ನ ವತಿಯಿಂದ ಮಕ್ಕಳಿಗೆ ಇನ್ನಷ್ಟು ಕಾರ್ಯಕ್ರಮಗಳು ಮೂಡಿಬರಲಿ – ಶ್ರೀ ರಮೇಶ್ ಅಮೀನ್ ಮುಂಬೈ.
ಜಿಲ್ಲಾ,ರಾಜ್ಯ,ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ 2021 ನೇ ಸಾಲಿನ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ,ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್(ರಿ) ತೋಕೂರು, ಹಳೆಯಂಗಡಿ ಇದರ ಆಶ್ರಯದಲ್ಲಿ,
▪️ದಿನಾಂಕ : 21.04.2024, ರವಿವಾರ ಬೆಳಿಗ್ಗೆ ಘಂಟೆ 9.00 ಕ್ಕೆ ಸ್ಪೋರ್ಟ್ಸ್ ಕ್ಲಬ್ ನ ಸಭಾಂಗಣದಲ್ಲಿ ಎಪ್ರಿಲ್ 14 ನೇ ತಾರೀಕಿನಿಂದ 21 ರ ವರೆಗೆ ನಡೆಸಲಾದ ಉಚಿತ “ಮಕ್ಕಳ ಬೇಸಿಗೆ ಶಿಬಿರ” ದ ಸಮಾರೋಪ ಸಮಾರಂಭ ಹಾಗೂ ಮಕ್ಕಳಿಗೆ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮ ನೆರವೇರಿತು.
▪️ ಮುಖ್ಯ ವೇದಿಕೆಯಲ್ಲಿ ಬೇಸಿಗೆ ಶಿಬಿರದ ತರಬೇತುದಾರರಾಗಿ ಸಹಕರಿಸಿದ ಶ್ರೀ ಸುಹಾಸ್ ನಾನಿಲ್,ಶ್ರೀ ಅಜಿತ್ ಕೆರೆಕಾಡು, ಶ್ರೀ ನವೀನ್ ಪೂಜಾರಿ ಕೊಡೆತ್ತೂರು,ಶ್ರೀ ಕಿರಣ್ ತುಳುವ, ಶ್ರೀಮತಿ ಜಯಲಕ್ಷ್ಮಿ.ಎಸ್, ಶ್ರೀ ಸುಶನ್ ದೇವಾಡಿಗ, ಕುಮಾರಿ ಆಕ್ಷಿತಾ, ಕುಮಾರಿ ಪಲ್ಲವಿ, ತಮ್ಮ ತಮ್ಮ ಅನುಭವಗಳನ್ನು ಮಕ್ಕಳೊಂದಿಗೆ ಹಂಚಿಕೊಂಡರು.
▪️ಸಂಸ್ಥೆಯ ಗೌರವಾಧ್ಯಕ್ಷರಾದ ಶ್ರೀ ಪ್ರಶಾಂತ್ ಕುಮಾರ್ ಬೇಕಲ್, ಅಧ್ಯಕ್ಷರಾದ ಶ್ರೀ ಜಗದೀಶ್ ಕುಲಾಲ್ , ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಯಶೋಧ ದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.
▪️ಸಂಸ್ಥೆಯ ಗೌರವ ಮಾರ್ಗದರ್ಶಕರಾದ ಶ್ರೀ ರಮೇಶ್ ಅಮೀನ್ ಮುಂಬೈ ಇವರು ಸಂಸ್ಥೆಯು 7 ದಿನಗಳಲ್ಲಿ ಉತ್ತಮವಾಗಿ ಶಿಬಿರವನ್ನು ಸಂಘಟಿಸಿದೆ. ಮಕ್ಕಳಿಗೆ ತರಬೇತಿ ಚೆನ್ನಾಗಿ ನಡೆದಿರುವುದು ಕಂಡುಬಂದಿದೆ. ಮುಂದಿನ ದಿನಗಳಲ್ಲಿ ಈ ಸಂಸ್ಥೆಯಿಂದ ಮಕ್ಕಳಿಗೆ ಇನ್ನಷ್ಟು ಕಾರ್ಯಕ್ರಮಗಳು ಮೂಡಿಬರಲಿ ಎಂದರು.
▪️ಈ ಸಂದರ್ಭದಲ್ಲಿ ಸಂಸ್ಥೆಯ ಗೌರವ ಮಾರ್ಗದರ್ಶಕರಾದ ಶ್ರೀ ಯೋಗೀಶ್ ಕೋಟ್ಯಾನ್,ಸಂಸ್ಥೆಯ ನಿಕಟ ಪೂರ್ವ ಕಾರ್ಯಾಧ್ಯಕ್ಷ ಶ್ರೀ ಸುರೇಶ್ ಶೆಟ್ಟಿ, ಕಾರ್ಯಾಧ್ಯಕ್ಷ ಶ್ರೀ ಸಂತೋಷ್ ದೇವಾಡಿಗ,ನಿಕಟ ಪೂರ್ವ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ಶೋಭಾ.ವಿ.ಅಂಚನ್, ಮಹಿಳಾ ಕಾರ್ಯದರ್ಶಿ ಶ್ರೀಮತಿ ಸುರೇಖಾ, ಜೊತೆ ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀಮತಿ ಪ್ರಮೀಳಾ.ಜೆ.ಪಿ, ನಿಕಟ ಪೂರ್ವ ಮಹಿಳಾ ಕಾರ್ಯದರ್ಶಿ ಶ್ರೀಮತಿ ನೀಮಾ ಸನಿಲ್, ಮಾಜಿ ಮಹಿಳಾ ಕಾರ್ಯಾಧ್ಯಕ್ಷೆ ಶ್ರೀಮತಿ ವಾಣಿ ಮಹೇಶ್, ಮಹಿಳಾ ಸದಸ್ಯೆಯರಾದ ಶ್ರೀಮತಿ ಸುಜಾತಾ ಜಿ.ಕೆ.,ಶ್ರೀಮತಿ ಚಂದ್ರಿಕಾ ಎಸ್, ಮತ್ತು ಸದಸ್ಯರು,ಸದಸ್ಯೆಯರು,ಮಕ್ಕಳು, ಪೋಷಕರು, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
▪️ಸುಮಾರು 70 ಮಕ್ಕಳು ಈ ಬೇಸಿಗೆ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು ಹಾಗೂ ಸಂಸ್ಥೆಯ ಗೌರವ ಮಾರ್ಗದರ್ಶಕರು ಹಾಗೂ ತನು ಎಲೆಕ್ಟ್ರಿಕಲ್ಸ್ ನ ಮಾಲಕರು ಶ್ರೀ ಅಜಿತ್ ಕೆರೆಕಾಡು ಇವರ ವತಿಯಿಂದ ಶಾಲಾ ಪರಿಕರಗಳನ್ನು ಒಳಗೊಂಡ ಕಿಟ್ಗಳನ್ನು ಎಲ್ಲಾ ಮಕ್ಕಳಿಗೆ ನೀಡಿದರು.
▪️ಬೇಸಿಗೆ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಕ್ಕಳಿಗೆ ನೃತ್ಯ ಕರಾಟೆ ಚಿತ್ರಕಲೆ ಇನ್ನಿತರ ವಿಷಯಗಳಲ್ಲಿ ತರಬೇತಿ ನೀಡಿರುವವರಿಗೆ ಸಂಸ್ಥೆಯ ವತಿಯಿಂದ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
▪️ಮಕ್ಕಳು ಶಿಬಿರದ ಬಗ್ಗೆ ತಮ್ಮ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು
▪️ ನಿಯತಿ ಎಂ. ಅಂಚನ್ ಮತ್ತು ನಿಮೋಕ್ಷ ಎಂ.ಅಂಚನ್ ಪ್ರಾರ್ಥಿಸಿದರು.
▪️ಸಂಸ್ಥೆಯ ಅಧ್ಯಕ್ಷರಾದ ಶ್ರೀ ಜಗದೀಶ್ ಕುಲಾಲ್ ಅತಿಥಿ ಗಣ್ಯರನ್ನು ಸ್ವಾಗತಿಸಿದರು.
▪️ಪ್ರಧಾನ ಕಾರ್ಯದರ್ಶಿ ಶ್ರೀ ದೀಪಕ್ ಸುವರ್ಣ ವಂದಿಸಿದರು.
▪️ ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀಮತಿ ಗೀತಾ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು.
▪️ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯ ಗೊಳಿಸಲಾಯಿತು.
▪️ ಶ್ರೀ ರಾಜೇಶ್ ಕುಲಾಲ್, ಶ್ರೀ ಮನೋಜ್ ಕಿರೋಡಿಯನ್,ಶ್ರೀ ನಾಗೇಶ್ ಶೆಟ್ಟಿಗಾರ್ ಉಪಹಾರದ ವ್ಯವಸ್ಥೆಗೆ ಸಹಕರಿಸಿದರು.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…