ಬಂಟ್ವಾಳ ತಾಲೂಕಿನ ಕೆಲವು ಕಡೆಗಳಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದಿದೆ. ಕೆಲವು ಮತಗಟ್ಟೆಯಲ್ಲಿ ಪ್ರಾರಂಭದಲ್ಲಿ ಮತಯಂತ್ರಗಳು ಕೈ ಕೊಟ್ಟರೆ ಇನ್ನುಕೆಲವು ಕಡೆಗಳ ಮತಯಂತ್ರಗಳು ಮಧ್ಯಾಹ್ನ ವೇಳೆ ಕೆಟ್ಟು ಹೋಗಿದೆ.
ಬಿ.ಸಿ.ರೋಡಿನ ಹೃದಯಭಾಗದಲ್ಲಿರುವ ಕೈಕುಂಜೆ ಎ.ಪಿ.ಎಂ.ಸಿ. ಮತಗಟ್ಟೆಯಲ್ಲಿ ಮಧ್ಯಾಹ್ನ 12 ಗಂಟೆಯಿಂದ 12.30 ರ ವರೆಗೆ ಅರ್ಧ ತಾಸುಗಳ ಕಾಲ ಯಂತ್ರ ಸ್ಥಗಿತಗೊಂಡ ಘಟನೆ ನಡೆಯಿತು.ಬಳಿಕ ಹೊಸ ಯಂತ್ರವನ್ನು ತರಿಸಿ , ಮತದಾನ ಮಾಡಲಾಗಿದೆ. ಇದೇ ರೀತಿ ಬಿ.ಸಿ.ರೋಡಿನ ಅಜ್ಜಿಬೆಟ್ಟು ಎಂಬಲ್ಲಿ ಸರಕಾರಿ ಶಾಲೆಯಲ್ಲಿನ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, 11 ಗಂಟೆಯಿಂದ 11.20 ರ ವರೆಗೆ 20 ನಿಮಿಷಗಳ ಕಾಲ ಮತದಾನ ಸ್ಥಗಿತಗೊಂಡಿತ್ತು. ಬಳಿಕ ಟೆಕ್ನೀಷಿಯನ್ ಬಂದು ಯಂತ್ರದ ರಿಪೇರಿ ಮಾಡಿ ಮತ್ತೆ ಮತದಾನ ಪ್ರಕ್ರಿಯೆ ಮುಂದುವರಿಯಿತು.
ಕೈಕೊಟ್ಟ ಕರೆಂಟ್
ಲೋಕಸಭಾ ಸಭಾ ಚುನಾವಣೆ ನಡೆಯುತ್ತಿರುವ ವೇಳೆ ಕರೆಂಟ್ ಅವಾಗ ಅವಾಗ ಕಣ್ಣು ಮುಚ್ಚಾಲೆ ಆಟ ಆಡುವುದು ಕಂಡು ಬಂತು. ಕೊಠಡಿಯೊಳಗೆ ಪ್ಯಾನ್ ಇಲ್ಲದೆ ಕೂರಲು ಸಾಧ್ಯವಾಗದ ಸಮಯದಲ್ಲಿ ಕರೆಂಟ್ ಕೈ ಕೊಟ್ಟಿರುವುದು ಸಾಕಷ್ಟು ತೊಂದರೆ ಉಂಟುಮಾಡಿತ್ತು. ಇನ್ನೊಂದು ಕಡೆಯಿಂದ ಕೊಠಡಿಗಳು ಕತ್ತಲೆಯಾಗಿದ್ದು,ಮತದಾನ ಮಾಡಲು ಯಂತ್ರಗಳು ಸರಿಯಾಗಿ ಕಾಣಿಸುತ್ತಿಲ್ಲ ಎಂಬ ಆರೋಪಗಳು ಕೂಡ ಕೇಳಿ ಬಂದಿವೆ.
ಉಳಿದ ದಿನಗಳಲ್ಲಿ ಕರೆಂಟ್ ನ ಪವರ್ ಕಟ್ ಆಟಗಳು ನಡೆಯುತ್ತಿರುವ ವಿಚಾರ ಸಾಮಾನ್ಯವಾದರೂ, ಇವತ್ತು ಚುನಾವಣೆಯ ದೃಷ್ಟಿಯಿಂದ ಇಡೀ ದಿನ ಪವರ್ ಕಟ್ ಮಾಡದೆ ಕರೆಂಟ್ ನೀಡಬೇಕಿತ್ತು ಎಂಬು ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂತು.
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…