ಪುತ್ತೂರು ಕಳೆದ 2 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಅಂತರ್ಜಾತಿ ಪ್ರೇಮಿಗಳಿಗೆ ಹುಡುಗನ ಕಡೆಯಿಂದ ಆಕ್ಷೇಪ ಇದ್ದುದರಿಂದ ಕಂಕಣ ಭಾಗ್ಯ ಒದಗಿಸಿದ ಸ್ಥಾಪಕ ಜಿಲ್ಲಾ ಅಧ್ಯಕ್ಷ ರಾಜು ಹೊಸಮಠ ಇವರ ನೇತೃತ್ವದಲ್ಲಿ 1/5/2024 ರಂದು ಪುತ್ತೂರು ಶ್ರೀ ಲಕ್ಷ್ಮಿ ಹೋಟೆಲ್ ಸಭಾಂಗಣದಲ್ಲಿ ಪುತ್ತೂರು ತಾಲೂಕು ಕೆಯ್ಯೂರು ಗ್ರಾಮದ ಆನಂದ ಕೌಡಿಚಾರ್ ಇವರ ಮಗಳು ಆಶಾ ಕೌಡಿಚಾರ್ ಮತ್ತು ಕಡಬ ತಾಲೂಕು ದಿವಂಗತ ಗಣೇಶ್ ಮಡಿವಾಳ ಇವರ ಪುತ್ರ ಶಶಾಂಕ್ ಅಲಂಕಾರ್ ಇವರ ಅಂತರ್ಜಾತಿ ಸರಳ ವಿವಾಹ ನಡೆಯಿತು.
ಶುಭ ವಿವಾಹದ ಮೊದಲಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರಕ್ಕೆ ರಾಜು ಹೊಸಮಠರವರು ದೀಪ ಬೆಳಗಿಸಿ ಶುಭಹಾರೈಸಿದರು. ದಲಿತ ಮುಖಂಡರಾದ
ಅಣ್ಣಿ ಎಳ್ತಿಮಾರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಹಾರರ್ಪಣೆ ಮಾಡಿದರು. ಈ ವಿವಾಹ ಅಂಬೇಡ್ಕರ್ ರವರ ತತ್ವ ಸಿದ್ಧಾಂತ ಒಳಗೊಂಡು ನೆರವೇರಿತು. ನೂತನ ವಧು-ವರರು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಗೌರವ ಅರ್ಪಿಸಿದರು. ಈ ಸರಳ ವಿವಾಹದಲ್ಲಿ 40ಕ್ಕೂ ಹೆಚ್ಚು ಮಂದಿ ವಧು ವರರನ್ನು ಶುಭ ಹಾರೈಸಿದರು. ಸಮಾರಂಭದಲ್ಲಿ ಸಂಕಪ್ಪ ನಿಡ್ಪಳ್ಳಿ. ಪ್ರವೀಣ್ ಕುಮಾರ್ ಹೇಮಾಜೆ.
ಲೋಕೇಶ್ ಹಿರೇಬಂಡಾಡಿ. ಪದ್ಮನಾಭ ಬಪ್ಪಳಿಗೆ. ಚಿದಾನಂದ ಕೆಯ್ಯೂರು. ವಿಠಲ ನಾಯಕ್. ಆಪತ್ಬಾಂಧವ ರಕ್ತದಾನಿ ಗ್ರೂಪ್ ಅಡ್ಮಿನ್ ಶಶಿಧರ್ ಕೆಯೂರು.. ಸುರೇಶ್ ಬುಳೇರಿಕಟ್ಟೆ.
ಸುಮತಿ ಭಕ್ತಕೋಡಿ. ಶ್ರೀಮತಿ ಧರಣಿ ಕೆಯ್ಯೂರು. ಇವರುಗಳು ಉಪಸ್ಥಿತರಿದ್ದು ಸಹಕರಿಸಿದರು.ವಧುವಿನ ತಂದೆ ಆನಂದ ಕೌಡಿಚಾರ್ ರವರು ಬಂದಿರುವ ಅತಿಥಿಗಳಿಗೆ ಶಾಲು ಹಾಕಿ ಗೌರವಿಸಿದರು. ಪ್ರವೀಣ್ ಕುಮಾರ್ ಹೇಮಾಜೆ ಯವರು ಭೋಜನ ಬಡಿಸುವ ವ್ಯವಸ್ಥೆಯಲ್ಲಿ ಸಹಕರಿಸಿದರು*
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…