ವಿಟ್ಲ: ಕರಾವಳಿ ಪರಿಸರದಾದ್ಯಂತ ಬಿಸಿಲಿನ ಅಬ್ಬರಕ್ಕೆ ಜನರು ಹೊರಗಡೆ ಕಾಲಿಡಲು ಹಿಂದೇಟು ಹಾಕುತ್ತಿದ್ದಾರೆ. ಇನ್ನೂ ವಾಹನ ಸವಾರರು ಮತ್ತು ಪಾದಾಚಾರಿಗಳು, ವ್ಯಾಪಾರಿಗಳು ಬವಣೆ ಅನುಭವಿಸುತ್ತಿದ್ದಾರೆ. ಇದರ ನಡುವೆಯೂ ವಿಟ್ಲದ ಎರಡು ಅಂಗಡಿಯವರು ಬಿಸಿಲಿನ ಉಷ್ಣಾಂಶವನ್ನು ತಡೆಯಲು ಅಂಗಡಿ ಮುಂಭಾಗ ನೀರಿನ ಫಾಗಿಂಗ್ ಮಾಡುವ ಮೂಲಕ ವಿಶೇಷ ಪ್ರಯೋಗ ಮಾಡಿದ್ದಾರೆ.
ವಿಟ್ಲ ನಾಲ್ಕು ಮಾರ್ಗ ರಸ್ತೆಯಲ್ಲಿರುವ ಕಿಟ್ ಕ್ಯಾಟ್ ಪೆಟ್ ಶಾಪ್ ಮಾಲಕ ಇಸ್ಮಾಯಿಲ್, ಮತ್ತು ಮೊಬೈಲ್ ಅಂಗಡಿ ಮಾಲಕ ಖಲಂದರ್ ಅವರು ತಮ್ಮ ಅಂಗಡಿ ಮುಂಭಾಗದ ಮೇಲ್ಭಾಗದಲ್ಲಿ ನೀರಿನ ಪೈಪ್ ಅಳವಡಿಸಿ ಫಾಗಿಂಗ್ ಮಾಡಿದ್ದಾರೆ. ಇದು ಕೇವಲ ಇವರ ಅಂಗಡಿಗೆ ಬರುವ ಗ್ರಾಹಕರಿಗೆ ಮಾತ್ರವಲ್ಲದೇ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಪಾದಾಚಾರಿಗಳಿಗೆ ಪ್ರಯೋಜನಕಾರಿಯಾಗಿದೆ. ಮಧ್ಯಾಹ್ನ ವೇಳೆ ಉಂಟಾಗುವ ಸುಡು ಬಿಸಿಲಿಗೆ ಹೆಚ್ಚಾಗಿ ಫಾಗಿಂಗ್ ಮಾಡಲಾಗುತ್ತಿದೆ. ನೀರಿನ ಅಭಾವವನ್ನು ಅರಿತು ದಿನಕ್ಕೆ ವಿವಿಧ ಸಮಯಗಳಲ್ಲಿ ದಿನಕ್ಕೆ ಒಂದು ಗಂಟೆ ಫಾಗಿಂಗ್ ಮಾಡಲಾಗುತ್ತಿದ್ದು, ಸುಡು ಬಿಸಿಲಿಗೆ ಫಾಗಿಂಗ್ ಆಗುವಾಗ ಜನರಿಗೆ ತಂಪೆರೆಯುತ್ತದೆ. ಒಂದು ಗಂಟೆ ಫಾಗಿಂಗ್ ಮಾಡಲು ೨೦ ಲೀಟರ್ ನೀರು ಬೇಕಾಗುತ್ತದೆ. ಇದು ಅಳವಡಿಸಿದ್ದರಿಂದ ಅಂಗಡಿ ಒಳಗಡೆ ನಿಂತು ವ್ಯಾಪಾರ ಮಾಡಲು ಹಾಗೂ ಗ್ರಾಹಕರಿಗೆ, ರಸ್ತೆಯಲ್ಲಿ ತೆರಳುವ ಸಾರ್ವಜನಿಕರಿಗೂ ಕೂಡಾ ಇದು ಪ್ರಯೋಜವಾಗಿದೆ ಎಂದು ಅಂಗಡಿ ಮಾಲಕ ಇಸ್ಮಾಯಿಲ್ ಅವರು ಹೇಳುತ್ತಾರೆ.
ಈ ಪ್ರಯೋಗದಿಂದ ಕೇವಲ ಇವರ ಎರಡು ಅಂಗಡಿಗಳಿಗೆ ಮಾತ್ರ ಪ್ರಯೋಜನವಲ್ಲ. ರಸ್ತೆಯಲ್ಲಿ ತೆರಳುವ ಪಾದಾಚಾರಿಗಳಿಗೂ ಪ್ರಯೋಜವಾಗಿದೆ. ಇವರ ಈ ರೀತಿಯ ಪ್ರಯೋಗದ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ (ರಿ) ದುಬೈ ಘಟಕದ ನಾಲ್ಕನೇ ವರ್ಷದ ದುಬೈ "ಗಡಿನಾಡ ಉತ್ಸವ -2025" ಕಾರ್ಯಕ್ರಮವು ನಗರದ…
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ ಕಾರ್ಯಕ್ರಮದಲ್ಲಿ ನೂಕು ನುಗ್ಗಲು ಉಂಟಾಗಿ 11ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು…
ಪ್ರತೀ ಕಲಾವಿದರ ಕುಟುಂಬದೊಂದಿಗೆ ಅವರ ಕಷ್ಟ ಸುಖದಲ್ಲಿ ಇರುವಂತಹ ವಾತಾವರಣ ನಿರ್ಮಿಸಬೇಕು. ಕಲಾವಿದರ ಸಂಘಟನಾತ್ಮಕ ಬಲವನ್ನು ಹೆಚ್ಚಿಸುವ ಕೆಲಸವಾಗಲು ಎಲ್ಲರ…