ಬಂಟ್ವಾಳ: ತಾಲೂಕಿನಲ್ಲಿ ಕಳೆದ ಕೆಲವು ದಿನಗಳಿಂದ ಜ್ವರ ಬಾಧಿತ ಪ್ರಕರಣಗಳು ಕಂಡು ಬರುತ್ತಿದ್ದು,ಶಂಕಿತ ಡೆಂಗ್ಯೂ ಜ್ವರ ಎಂಬ ವದಂತಿಗಳು ಹರಡುತ್ತಿದ್ದು, ಆತಂಕಕ್ಕೆ ಕಾರಣವಾಗಿದೆ.
ಬಂಟ್ವಾಳ ತಾಲೂಕಿನ ಚೆನ್ನೈತ್ತೋಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಕೊಡಂಬೆಟ್ಟು ಗ್ರಾಮದ ಬಾಂಬಿಲ ಸಮೀಪದ ಗಟ್ಲೆಕೋಡಿ,ಮೂಂಡಾಬೈಲು ಎಂಬಲ್ಲಿ ನ ಗ್ರಾಮಸ್ಥರು ಜ್ವರದಿಂದ ನರಳುತ್ತಿದ್ದು, ಜ್ವರ ಬಾಧಿತರು ಔಷಧಿಗೆ ಹೋಗಿರುವ ಆಸ್ಪತ್ರೆಯಲ್ಲಿ ಶಂಕಿತ ಡೆಂಗ್ಯೂ ಎಂದು ಹೇಳಲಾಗಿದೆಯಂತೆ! ಇದರಿಂದ ಇಡೀ ಗ್ರಾಮದ ಜನತೆ ಹೆದರಿದ್ದಾರೆ.
ಬೊಂಡಾ ರಾಶಿಯಿಂದ ಸೊಳ್ಳೆಗಳು ಉತ್ಪಾದನೆ: ತುಂಗಪ್ಪ ಬಂಗೇರ ಆರೋಪ …
ಗಟ್ಲಕೋಡಿ ಎಂಬಲ್ಲಿ ರಾಶಿ ಹಾಕಲಾದ ಬೊಂಡ ರಾಶಿಯಿಂದಲೇ ಡೆಂಗ್ಯೂ ಸೊಳ್ಳೆಗಳು ಉತ್ಪತ್ತಿಯಾಗುವ ಸಾಧ್ಯತೆಗಳಿದ್ದು, ಕೂಡಲೇ ಅಲ್ಲಿಂದ ತೆರವು ಮಾಡುವಂತೆ ಗ್ರಾಮಸ್ಥರು ಸ್ಥಳೀಯ ಗ್ರಾ
ಪಂ.ಗೆ ಮನವಿ ಮಾಡಿದ್ದಾರೆ.
ಪಾಣೆಮಂಗಳೂರನಲ್ಲಿರುವ ಹೆಸರಾಂತ ಐಸ್ ಕ್ರೀಮ್ ಒಂದರ ಖಾಸಗಿ ಜಾಗದಲ್ಲಿ ಅವರು ಐಸ್ ಕ್ರೀಮ್ ಮಾಡಲು ಉಪಯೋಗಿಸಿದ ಬೊಂಡಾವನ್ನು ಬಳಿಕ ಒಣಗಲು ಇಲ್ಲಿ ರಾಶಿ ಹಾಕಿದ್ದಾರೆ, ಇದರಲ್ಲಿ ಕಳೆದ ವಾರ ಬಂದಿರುವ ಮಳೆ ನೀರು ನಿಂತಿದ್ದು,ಸೊಳ್ಳೆಗಳು ಉತ್ಪಾದನೆಯಾಗಿರಬಹುದು ಎಂಬ ಮಾತನ್ನು ಹೇಳುತ್ತಿದ್ದಾರೆ.
ಈಗಾಗಲೇ ಸಂಬಂಧಿಸಿದ ಇಲಾಖೆಯ ಸಿಬ್ಬಂದಿಗಳು ಸರ್ವೇ ಕಾರ್ಯವನ್ನು ಮಾಡಿದ್ದಾರೆ ಎಂದು ಸ್ಥಳೀಯರು ಹೇಳಿದ್ದು, ಅವರ ಗಮನಕ್ಕೆ ಬಂದಿರುವ ವಿಚಾರಗಳನ್ನು ಗ್ರಾ.ಪಂ.ಗೆ ಹಾಗೂ ಇಲಾಖೆಗೆ ತಿಳಿಸಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಮಾಣಿ- ಪೆರಾಜೆಯಲ್ಲಿದೆ ಜ್ವರ…
ತಾಲೂಕಿನ ಮಾಣಿ ಸಮೀಪದ ಪೆರಾಜೆ ಎಂಬಲ್ಲಿ ಕೂಡ ಜ್ವರದ ಪ್ರಕರಣಗಳು ಕಂಡು ಬಂದಿದ್ದು, ಅನೇಕ ಮಂದಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಲಾಗಿದೆ . ಖಾಸಗಿ ಆಸ್ಪತ್ರೆಯಲ್ಲಿ ಶಂಕಿತ ಡೆಂಗ್ಯೂ ಎಂದು ಚಿಕಿತ್ಸೆ ನೀಡಿದ್ದಾರೆ. ಆದರೆ ಪೆರಾಜೆಯ ಸುಮಾರು ಮನೆಗಳಲ್ಲಿ ಪ್ರಕರಣಗಳು ಕಂಡು ಬಂದಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಸರಪಾಡಿಯಲ್ಲಿಯೂ ಪ್ರಕರಣಗಳು ಕಂಡು ಬಂದಿದ್ದು, ಜ್ವರದಿಂದ ಬಳಲುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಲಾಗಿದೆ.
ಡೆಂಗ್ಯೂ ಪ್ರಕರಣಗಳು ಬರುವ ಸಾಧ್ಯತೆ ಬಹುತೇಕ ಕಡಿಮೆ…
ತಾಲೂಕಿನ ಬಹುತೇಕ ಎಲ್ಲಾ ಪ್ರಕರಣಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ಪರಿಣಾಮ ತಾಲೂಕುಆಸ್ಪತ್ರೆಗೆ ಈ ಬಗ್ಗೆ ಸ್ಪಷ್ಟವಾದ ಮಾಹಿತಿ ಲಭ್ಯವಾಗಿಲ್ಲ ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.
ಅಲ್ಲದೆ ಸುಡು ಬೇಸಿಗೆಯಲ್ಲಿ ಡೆಂಗ್ಯೂ ಸೊಳ್ಳೆಗಳು ಉತ್ಪತ್ತಿಯಾಗುವ ಅವಕಾಶಗಳು ಕೂಡ ಬಹುತೇಕ ಕಡಿಮೆಯೇ. ಬಿಟ್ಟು ಬಿಟ್ಟು ಮಳೆ ಬಂದು ಹೋದರೆ ಅವಕಾಶಗಳು ಜಾಸ್ತಿಯಿತ್ತು. ಡೆಂಗ್ಯೂ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಪರೀಕ್ಷೆಗಳು ಇವೆ….ಅದರಲ್ಲಿ ಪಾಸಿಟಿವ್ ಬಂದರೆ ಮಾತ್ರ ಡೆಂಗ್ಯೂ ಎಂದು ಖಚಿತಪಡಿಸಬಹುದು. ಹೊರತು ಪಡಿಸಿ ಯಾವುದೇ ಸ್ಪಷ್ಟವಾದ ಮಾಹಿತಿ ನೀಡಲು ಅಸಾಧ್ಯ ಎಂದು ತಿಳಿಸಿದ್ದಾರೆ.
ದೇಶಾದ್ಯಂತ ವ್ಯಾಪಕ ಸಂಚಲನ ಮೂಡಿಸಿದ್ದ ನೀಟ್-ಯುಜಿ (NEET-UG) ಪರೀಕ್ಷಾ ಅಕ್ರಮ ಹಾಗೂ ದೆಹಲಿಯ ಜಂತರ್ ಮಂತರ್‌ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿರುವ ತೀವ್ರ…
ನಗರದ ಲಾಲ್‌ಬಾಗ್ ಸಿಗ್ನಲ್ ಸಮೀಪ ಶನಿವಾರ ಮಧ್ಯಾಹ್ನ ಸಾರ್ವಜನಿಕರ ಕಣ್ಣೆದುರಲ್ಲೇ ಭೀಕರ ಮಾರಕಾಸ್ತ್ರ ದಾಳಿ ನಡೆದಿದ್ದು, ಪ್ರಸಿದ್ಧ ರೌಡಿಶೀಟರ್ ಒಬ್ಬ…
ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಚೇತನ್ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇದೀಗ ಆತನ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ವಿಷಸೇವನೆ…
ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ತ್ಯಾಜ್ಯ ನಿರ್ವಹಣೆ ಸಂಪೂರ್ಣ ಹದಗೆಟ್ಟಿದ್ದು, ಸಾರ್ವಜನಿಕರ ಆರೋಗ್ಯ ಹಾಗೂ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುವ…
ಯಕ್ಷಧ್ರುವ ಪಟ್ಲ ಫೌಂಡೇಷನ್ ಮಂಗಳೂರು ಇದರ ಜೊತೆ ಕಾರ್ಯದರ್ಶಿ ರವಿ ಶೆಟ್ಟಿ ಅಶೋಕ್ ನಗರ ಅಪಘಾತದಿಂದ ಮಂಗಳವಾರ (ಜು.21) ಮುಂಜಾನೆ…
ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ದಾಸೋಟ್ಟು-ಕುಕ್ಕಾಜೆ ನಿವಾಸಿ ರಮೇಶ್ ಪೂಜಾರಿ ಅವರ ಮನೆಯ ಹಿಂಭಾಗಕ್ಕೆ ಹೊಂದಿಕೊಂಡಿದ್ದ ಬಚ್ಚಲು ಮನೆ ಹಾಗೂ…