ಜನ ಮನದ ನಾಡಿ ಮಿಡಿತ

Advertisement

ಮುಲ್ಕಿ: ಕೆಪಿಎಸ್‌ಕೆ ಶಾಲೆಯಲ್ಲಿ ಗಮನ ಸೆಳೆದ ಬೇಸಿಗೆ ಶಿಬಿರ

ಮುಲ್ಕಿ: ಗ್ರಾಮೀಣ ಪ್ರದೇಶದ ಅತಿಕಾರಿಬೆಟ್ಟು ವಿನ ಪಂಜಿನಡ್ಕ ಕೆಪಿಎಸ್‌ಕೆ ಸ್ಮಾರಕ ಅನುದಾನಿತ ಪ್ರೌಢಶಾಲೆಯು ಶಾಲಾ ಆಡಳಿತ ಮಂಡಳಿ, ಹಳೆ ವಿದ್ಯಾರ್ಥಿ ಸಂಘ ಮತ್ತು ಅಧ್ಯಾಪಕರ ತಂಡ ಅತ್ಯಂತ ಕ್ರೀಯಾಶೀಲವಾಗಿದ್ದು ಶಾಲೆಯಲ್ಲಿ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರವನ್ನು ಆಯೋಜಿಸಿ ಗ್ರಾಮೀಣ ಪ್ರದೇಶದಲ್ಲಿ ಒಂದು ಮಾದರಿ ಶಾಲೆಯಾಗಿ ಹೆಸರು ಗಳಿಸಿದೆ, ಸುಮಾರು ಐದು ದಿನಗಳ ಕಾಲ ನಡೆದ ಶಿಬಿರದಲ್ಲಿ ಶಾಲಾ ವಿದ್ಯಾರ್ಥಿಗಳಲ್ಲದೆ ಬೇರೆ ಶಾಲೆಯ ವಿದ್ಯಾರ್ಥಿಗಳ ಹಾಗೂ ಮುಂಬೈ ವಿದ್ಯಾರ್ಥಿಗಳು ಸೇರಿ 45 ವಿದ್ಯಾರ್ಥಿಗಳು ಬಾಗವಹಿಸಿದ್ದರು.


ಶಾಲೆಯಲ್ಲಿ ಮುಖ್ಯ ಕಲಾ ಶಿಕ್ಷಕರಾಗಿರುವ ವೆಂಕಿ ಫಲಿಮಾರ್ ರವರು ಶಿಬಿರದಲ್ಲಿ ಮುಖ್ಯವಾಗಿ ಮಕ್ಕಳಿಗೆ ಪೇಪರ್ ಕ್ರಾಪ್ಟ್, ಅವೆ ಮಣ್ಣಿನ ಕಲಾಕೃತಿ ರಚಿಸುವ ಬಗ್ಗೆ ಮಾಹಿತಿ ನೀಡಿದ್ದು ಬಳಿಕ ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ಶ್ಲೋಕ, ಭಾರತೀಯ ಸಂಸ್ಕೃತಿ ಬಗ್ಗೆ ಮಕ್ಕಳಿಗೆ ತಿಳಿ ಹೇಳಲಾಗಿದೆ.
ಕಲಾಕೃತಿಗಳಲ್ಲಿ ಮುಖ್ಯವಾಗಿ ಹಳೆಯ ಬಾಟಲ್ ವಿವಿಧ ಬಣ್ಣಗಳಿಂದ, ಹೂವಿನ ಚಿತ್ರಗಳಿಂದ ಆಕರ್ಷಿಣೀಯವಾದರೆ, ಹಾಳಾದ ತೆಂಗಿನ ಕಾಯಿ ಮತ್ತು ಗೆರಟೆ ಒಂದು ಮನುಷ್ಯನನ್ನು ಹೋಲುವ ರೂಪ ಪಡೆದಿದೆ, ಹಳೆಯ ಪೇಪರ್ ಬುಲೆಟ್ ನ ಪ್ರತಿಕೃತಿ ಹೊಂದಿದರೆ, ಹಳೆಯ ರಟ್ಟು ರಕ್ಕಸನ ರೂಪ ಪಡೆದಿದೆ, ಸ್ಪಂಜ್ ವಿವಿಧ ಗೊಂಬೆಯ ರೂಪ ಪಡೆದು ಆಕರ್ಷಣೀಯ ಅಲ್ಲದೆ ಮಕ್ಕಳಿಗೆ ಶ್ಲೋಕ ಪಾಠ, ಪ್ರಾಣಯಾಮ ಮತ್ತಿತರ ವಿಷಯಗಳ ಬಗ್ಗೆ ತರಬೇತಿ ನೀಡಲಾಯಿತು.
ಸರಕಾರಿ ಶಾಲೆಗಳೂ ಮುಚ್ಚುತ್ತಾ ಬಂದರೂ ಈ ಅನುದಾನಿತ ಶಾಲೆಯನ್ನು ಶಾಲಾ ಆಡಳಿತ ಮಂಡಳಿ ಹಳೆ ವಿಧ್ಯಾರ್ಥಿ ಸಂಘ ಶಾಲಾ ಶಿಕ್ಷಕರ ಹಾಗೂ ದಾನಿಗಳ ಸಹಕಾರದಿಂದ ಬೇಕು ಬೇಕಾದ ಸವಲತ್ತುಗಳನ್ನು ಉಚಿತವಾಗಿ ನೀಡಿ ಮಾದರಿಯನ್ನಾಗಿ ರೂಪಿಸಿ, ವಿಧ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವಂತೆ ನೋಡಿಕೊಳ್ಳುತ್ತಿದ್ದಾರೆ

Leave a Reply

Your email address will not be published. Required fields are marked *

ಉಡುಪಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ….!

ಬಂಟ್ವಾಳ: ಬಡಗಬೆಳ್ಳೂರಿನಲ್ಲಿ ಕುಸಿದು ಬಿದ್ದ ಸೇತುವೆ; ಜನ ಸಂಚಾರಕ್ಕೆ ಭಾರೀ ಸಂಕಷ್ಟ…..!

ಬಂಟ್ವಾಳ: ಜ್ವರದಿಂದ ಬಳಲುತ್ತಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ನಿಧನ….!

ಬಂಟ್ವಾಳ: ಮಿನಿ ವಿಧಾನಸೌಧ ಮುಂಭಾಗದ ಕ್ಯಾಂಟೀನ್‌ನಲ್ಲಿ ಅನಿಲ ಸೋರಿಕೆ ಆತಂಕ….!

ಕಾಸರಗೋಡು: ಸಮುದ್ರದಲ್ಲಿ ಕೊಚ್ಚಿಹೋದ ಇಬ್ಬರು ಕಾಲೇಜು ವಿದ್ಯಾರ್ಥಿಗಳು..!

ಕಡಬ: ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕಪ್ ಪಲ್ಟಿ..!

ಕಡಬ: ಗೋಳಿತ್ತಡಿ-ಏಣಿತ್ತಡ್ಕ-ಕುದುಲೂರು ಸಂಪರ್ಕಿತ ರಸ್ತೆ; ರಸ್ತೆಯುದ್ದಕ್ಕೂ ಹೊಂಡಮಯ..!

ಬಂಟ್ವಾಳ: ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಮುಂಭಾಗದ ಸರ್ವೀಸ್ ರಸ್ತೆಯಲ್ಲಿ ಹೊಂಡಗುಂಡಿ…!

ಉಡುಪಿ: ಮಾದಕ ದ್ರವ್ಯ ಸಾಗಾಟ- ಮಾರಾಟ ಪ್ರಕರಣ: ಪಿಐಟಿ- ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿಯ ಬಂಧನ…!

error: Content is protected !!