ಸ್ಯಾನ್ ಫ್ರಾನ್ಸಿಸ್ಕೋ : ತನ್ನ ಸೂಪರ್ ಇಂಟೆಲಿಜೆಂಟ್ ಕೃತಕ ಬುದ್ಧಿಮತ್ತೆ (ಎಐ) ವ್ಯವಸ್ಥೆಗಳನ್ನು ನಿಯಂತ್ರಿಸಲು ಮತ್ತು ನಿರ್ವಹಿಸಲು ಉನ್ನತ ಮಷಿನ್ ಲರ್ನಿಂಗ್ ಸಂಶೋಧಕರು ಮತ್ತು ಎಂಜಿನಿಯರ್‌ಗಳ ತಂಡವನ್ನು ನಿಯೋಜಿಸುತ್ತಿರುವುದಾಗಿ ಮೈಕ್ರೋಸಾಫ್ಟ್ ಒಡೆತನದ OpenAI ಹೇಳಿದೆ.
ಸೂಪರ್ ಇಂಟೆಲಿಜೆನ್ಸ್ ಪರಿಕಲ್ಪನೆಯು ವಿಭಿನ್ನ ಕೌಶಲ್ಯಗಳ ವ್ಯಾಪಕ ಶ್ರೇಣಿಯಲ್ಲಿ ಉತ್ತಮವಾಗಿರುವ ಒಂದು ಕಾಲ್ಪನಿಕ AI ಮಾಡೆಲ್ ಆಗಿದೆ. ಇದು ಕೆಲ ಹಿಂದಿನ ಪೀಳಿಗೆಯ ಒಂದೇ ಡೊಮೇನ್ ಮಾದರಿಗಿಂತ ಭಿನ್ನವಾಗಿವೆ.
ಓಪನ್‌ಎಐನ ಮುಖ್ಯ ವಿಜ್ಞಾನಿ ಮತ್ತು ಕಂಪನಿಯ ಸಹ ಸಂಸ್ಥಾಪಕರಲ್ಲಿ ಒಬ್ಬರಾದ ಇಲ್ಯಾ ಸುಟ್‌ಸ್ಕೇವರ್ ಮತ್ತು ಸಂಶೋಧನಾ ಲ್ಯಾಬ್‌ನ ಅಲೈನ್‌ಮೆಂಟ್ ಮುಖ್ಯಸ್ಥ ಜಾನ್ ಲೈಕ್ ಇವರು ಜಂಟಿಯಾಗಿ ಹೊಸ ತಂಡದ ನೇತೃತ್ವ ವಹಿಸಲಿದ್ದಾರೆ.
“ಸೂಪರ್ ಇಂಟೆಲಿಜೆನ್ಸ್ ಇದು ಮಾನವರು ಆವಿಷ್ಕರಿಸಿದ ಅತ್ಯಂತ ಪ್ರಭಾವಶಾಲಿ ತಂತ್ರಜ್ಞಾನವಾಗಿದೆ ಮತ್ತು ಪ್ರಪಂಚದ ಅನೇಕ ಪ್ರಮುಖ ಸಮಸ್ಯೆಗಳನ್ನು ಪರಿಹರಿಸಲು ನಮಗೆ ಸಹಾಯ ಮಾಡುತ್ತದೆ. ಆದರೆ, ಸೂಪರ್ ಇಂಟೆಲಿಜೆನ್ಸ್‌ನ ಬೃಹತ್ ಶಕ್ತಿಯು ತುಂಬಾ ಅಪಾಯಕಾರಿಯಾಗಿದೆ ಮತ್ತು ಮಾನವೀಯತೆಯ ವಿನಾಶಕ್ಕೆ ಅಥವಾ ಮಾನವರ ಅಳಿವಿಗೆ ಕಾರಣವಾಗಬಹುದು” ಎಂದು ಓಪನ್ ಎಐ ಬುಧವಾರ ಬ್ಲಾಗ್‌ಪೋಸ್ಟ್‌ನಲ್ಲಿ ಹೇಳಿದೆ.
ಕಂಪನಿಯ ಪ್ರಕಾರ, ಇಂಥದೊಂದು ಮಾಡೆಲ್ ಈ ದಶಕದ ಅಂತ್ಯದ ಮೊದಲು ಸಿದ್ಧವಾಗಬಹುದು. ಸೂಪರ್ ಇಂಟೆಲಿಜೆನ್ಸ್ ಜೋಡಣೆಯ ಸಮಸ್ಯೆಯನ್ನು ಪರಿಹರಿಸಲು ಮುಂದಿನ ನಾಲ್ಕು ವರ್ಷಗಳಲ್ಲಿ ತಾನು ಇಲ್ಲಿಯವರೆಗೆ ಪಡೆದುಕೊಂಡಿರುವ ಕಂಪ್ಯೂಟ್‌ನ 20 ಪ್ರತಿಶತವನ್ನು ಸಮರ್ಪಿಸುವುದಾಗಿ ಕಂಪನಿ ಹೇಳಿದೆ.
ಆರ್ಟಿಫಿಶಿಯಲ್ ಸೂಪರ್ ಇಂಟೆಲಿಜೆನ್ಸ್ (ASI) ಎನ್ನುವುದು ಸಾಫ್ಟ್‌ವೇರ್ ಆಧಾರಿತ ವ್ಯವಸ್ಥೆಯಾಗಿದ್ದು, ಇದು ಹಲವಾರು ವಿಚಾರಗಳಲ್ಲಿ ಮಾನವರ ಬೌದ್ಧಿಕ ಶಕ್ತಿಗಳನ್ನು ಮೀರಿಸಲಿದೆ. ASI ಇನ್ನೂ ಅಸ್ತಿತ್ವಕ್ಕೆ ಬಂದಿಲ್ಲ ಮತ್ತು ಇದೊಂದು ಕಾಲ್ಪನಿಕ ಸ್ಥಿತಿಯಾಗಿದೆ. ಎಎಸ್ಐ ಸಾಮಾನ್ಯ ಕೃತಕ ಬುದ್ಧಿಮತ್ತೆ (AI) ಗಿಂತ ಭಿನ್ನವಾಗಿದೆ. ಇದು ಮಾನವ ಬೌದ್ಧಿಕ ಸಾಮರ್ಥ್ಯಗಳ ಸಾಫ್ಟ್‌ವೇರ್ ಆಧಾರಿತ ಸಿಮ್ಯುಲೇಶನ್ ಅನ್ನು ಒಳಗೊಂಡಿರುತ್ತದೆ. ಉದಾಹರಣೆಗೆ- ಮಾಹಿತಿಯ ಸ್ವಾಧೀನದ ಮೂಲಕ ಕಲಿಕೆ, ತಾರ್ಕಿಕತೆ ಮತ್ತು ಸ್ವಯಂ-ತಿದ್ದುಪಡಿಗಳು ಇದರ ವಿಶೇಷತೆಗಳಾಗಿರುತ್ತವೆ.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…