ಉಡುಪಿ: ಸುಡು ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ಮಂಗಳವಾರ ಸಂಜೆ ಸುರಿದ ಮಳೆಯು ತಂಪೆರೆಯಿತು.
ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಬಿಸಿಲು ಹೆಚ್ಚಾಗಿತ್ತು. ಮಧ್ಯಾಹ್ನದ ನಂತರ ಏಕಾಏಕಿ ಕಾರ್ಮೋಡ ಕವಿದು, ಭಾರಿ ಗುಡುಗಿನ ಸದ್ದಿನೊಂದಿಗೆ ಮಳೆಯಾಯಿತು. ಅರ್ಧ ತಾಸು ಎಡೆಬಿಡದೆ ಮಳೆ ಸುರಿಯಿತು.

ಏಕಾಏಕಿ ಸುರಿದ ಮಳೆಯಿಂದ ಕೆಲಸ ಬಿಟ್ಟು ಮನೆಗೆ ತೆರಳುವವರು ಕಿರಿಕಿರಿ ಅನುಭವಿಸಿದರು. ಕೆಲವರು ಕೊಡೆ ಹಿಡಿದುಕೊಂಡು ಹೋದರೆ, ಇನ್ನು ಕೆಲವರು ಅಂಗಡಿ, ಶಾಪ್ ಗಳಲ್ಲಿ ಮಳೆ ನಿಲ್ಲುವವರೆಗೆ ಆಶ್ರಯ ಪಡೆದರು.
ಉಡುಪಿ, ಮಣಿಪಾಲ, ಮಲ್ಪೆ, ಪರ್ಕಳ, ಹಿರಿಯಡಕ, ಅಲೆವೂರು ಮೊದಲಾದ ಕಡೆಗಳಲ್ಲಿ ಮಳೆಯಾಗಿದೆ.



