ಬಂಟ್ವಾಳ: ಕೇರಳ ರಾಜ್ಯದಿಂದ ಕರ್ನಾಟಕ್ಕೆ ಬಂದು ಖೋಟಾ ನೋಟಗಳನ್ನು ಅಸಲಿ ನೋಟುಗಳಾಗಿ ಪರಿವರ್ತಿಸುವ ಸಮಯದಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ಜೈಲು ಪಾಲಾಗಿದ್ದ ಆರೋಪಿಗಳಿಂದ ಇದೀಗ ಮತ್ತೆ ಲಕ್ಷಾಂತರ ರೂ ಹಣವನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ವಶಕ್ಕೆ ಪಡೆದುಕೊಂಡ ಘಟನೆ ನಡೆದಿದ್ದು, ಖೋಟಾ ನೋಟು ಜಾಲದ ಪತ್ತೆಗಾಗಿ ಪೋಲೀಸ್ ತಂಡ ಕೇರಳ ರಾಜ್ಯಕ್ಕೆ ತೆರಳಿದೆ.
ಕೇರಳ ರಾಜ್ಯದ ಕಾಸರಗೋಡು ತಾಲೂಕು ಕೂಡ್ಲು ಗ್ರಾಮದ ಚೂರಿ ಎಂಬಲ್ಲಿನ ಮೊಹಮ್ಮದ್ ಸಿ.ಎ ಹಾಗೂ ಕಮರುನ್ನೀಸಾ ಎಂಬವರನ್ನು ಕಳೆದ ಮೂರು ನಾಲ್ಕುದಿನಗಳ ಹಿಂದೆ ಪೋಲೀಸರು ಬಂಧಿಸಿದ್ದರು.
ಆರೋಪಿಗಳು ವಿನಿಮಯಕ್ಕಾಗಿ ಸ್ವಾಧೀನದಲ್ಲಿಟ್ಟುಕೊಂಡಿದ್ದ 23 ಸಾವಿರ ಖೋಟಾ ನೋಟುಗಳನ್ನು ವಶಪಡಿಸಿಕೊಂಡಿದ್ದರು. ಬಂಟ್ವಾಳ ನಗರ ಠಾಣಾ ಪೊಲೀಸರು ಮೇ.10 ರಂದು ಕೇರಳ ರಾಜ್ಯದ ಕಾಸರಗೋಡು ತಾಲೂಕು ಕೂಡ್ಲು ಗ್ರಾಮದ ಚೂರಿ ಎಂಬಲ್ಲಿನ ಮೊಹಮ್ಮದ್ ಸಿ.ಎ ಹಾಗೂ ಕಮರುನ್ನೀಸಾ ಎಂಬವರು KL 14-T-777 ನೇ ಕಾರಿನಲ್ಲಿ ಸ್ವಾಧೀನದಲ್ಲಿಟ್ಟುಕೊಂಡಿದ್ದ 500/- ರೂಪಾಯಿ ಮುಖಬೆಲೆ 46 ನೋಟುಗಳು ಸೇರಿ ಒಟ್ಟು 23 ಸಾವಿರ ಹಣವನ್ನು ಸ್ವಾಧೀನಪಡಿಸಿಕೊಂಡು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಿದ್ಸರು.
ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ. ಆದರೆ ಆರೋಪಿಗಳ ಹೆಚ್ಚಿನ ತನಿಖೆ ನಡೆಸುವ ಉದ್ದೇಶದಿಂದ ಬಂಟ್ವಾಳ ನಗರ ಪೊಲೀಸ್ ಠಾಣೆಯ ಪೊಲೀಸರು ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ತನಿಖೆ ನಡೆಸಿದಾಗ, ಆರೋಪಿಗಳು ಅಸಲಿ ನೋಟುಗಳನ್ನಾಗಿ ಮಾಡಲು ಕೇರಳದಲ್ಲಿ ಸ್ವಾಧೀನದಲ್ಲಿಟ್ಟುಕೊಂಡಿದ್ದ ಒಟ್ಟು 2,30,000/- ರೂಪಾಯಿ ಮೌಲ್ಯದ 500/- ರೂಪಾಯಿಯ 460 ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನು ಬಂಧಿಸಿದ ದಿನ ವಶ ಪಡಿಸಿಕೊಂಡ 23 ಸಾವಿರ ರೂ ಹೀಗೆ ಒಟ್ಟು 2,53,000/- ರೂಪಾಯಿ ಮೌಲ್ಯದ 500/- ರೂಪಾಯಿ ಮುಖಬೆಲೆಯ 506 ಖೋಟಾ ನೋಟುಗಳನ್ನು ಹಾಗೂ 6 ಲಕ್ಷ ಮೌಲ್ಯದ ಕಾರನ್ನು ಸ್ವಾಧೀನಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗಳಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ.ಬಿ. ರಿಷ್ಯಾಂತ್, ಐ.ಪಿ.ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗದೀಶ್ ಮತ್ತು ರಾಜೇಂದ್ರ ಕೆ.ವಿ., ಬಂಟ್ವಾಳ ಉಪಾಧೀಕ್ಷಕ ವಿಜಯ ಪ್ರಸಾದ್ ರವರುಗಳ ಮಾರ್ಗದರ್ಶನದಲ್ಲಿ ಬಂಟ್ವಾಳ ನಗರ ಠಾಣಾ ಪೊಲೀಸ್ ನಿರೀಕ್ಷಕ ಅನಂತ ಪದ್ಮನಾಭ ರವರ ನೇತೃತ್ವದಲ್ಲಿ ಪೊಲೀಸ್ ಉಪ ನಿರೀಕ್ಷಕ ಆಂಜನೇಯ ರೆಡ್ಡಿ ಹಾಗೂ ರಾಮಕೃಷ್ಣ, ಸಿಬ್ಬಂದಿಗಳಾದ ರಾಜೇಶ್ ಎಸ್, ಇರ್ಷಾದ್ ಪಿ , ಮನೋಹರ, ಗಣೇಶ್, ಮೋಹನ್, ಬಸವರಾಜ್ ಕಮ್ಮಾರ್, ರಂಗನಾಥ್, ಕುಮಾರಿ ಅರ್ಪಿತಾ ರವರು ಕಾರ್ಯಚರಣೆಯಲ್ಲಿ ಸಹಕರಿಸಿದ್ದಾರೆ.
ದ.ಕ.ಜಿಲ್ಲಾ ಪೊಲೀಸ್ ಅಧೀಕ್ಷಕರವರು, ಪತ್ತೆ ತಂಡವನ್ನು ಪ್ರಶಂಸಿ ನಗದು ಬಹುಮಾನವನ್ನು ಘೋಷಿಸಿರುತ್ತಾರೆ.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…