ಈ ಚಿಕ್ಕೋಡಿ DDPI ಆಫೀಸಿನಲ್ಲಿ ನಡೀತಿದೆ ಹಾಡಹಗಲೇ ಭ್ರಷ್ಟಾಚಾರ.
ಕುಂಬಳಕಾಯಿ ಕಳ್ಳ ಹೆಗಲು ಮುಟ್ಟಿ ನೋಡಿಕೊಂಡ, ಅಂದಂಗ ಪತ್ರಾಂಕಿತ ಸಹಾಯಕ ಅಂದ್ರೆ ಗೆಜೆಟೆಡ್ ಅಸಿಸ್ಟಂಟ್ ಟಿ. ಜಿ. ಮಂಜುನಾಥ್ ಸಾರ್ವಜನಿಕರ ಅಧಿಕಾರಿ ಅನ್ನೋದನ್ನ ಮರೆತು ತನ್ನಿಷ್ಟದಂತೆ ಆಫೀಸಿನಲ್ಲಿ, ಶಾಲಾ ಧಾಖಲಾತಿಯಲ್ಲಿ ಲೋಪ ವಿದೆ ಅಂತಾ ವಿದ್ಯಾರ್ಥಿಗಳ ಪಾಲಕರು ಬಂದ್ರೆ ಪಾಲಕರಿಗೆ ಹಣದ ಬೇಡಿಕೆ ಇಡುತ್ತಾನೆ ಈ ಭ್ರಷ್ಟ ಅಧಿಕಾರಿ ಮಂಜುನಾಥ .

ಹಣ ಯಾಕೆ ಪಡಿತಿದ್ದೀರಿ ಅಂತಾ ಕೇಳೋಕೆ ಹೋದ್ರೆ DDPI ಸೇರಿದಂತೆ ಸಮರ್ಥನೆ ಮಾಡಿಕೊಳ್ಳೊಕ್ಕೆ ಮುಂದಾಗುತ್ತಾರೆ ಮತ್ತು ಪ್ರಶ್ನೆ ಮಾಡಿದ್ರೆ, ಕೇಸ್ ಹಾಕ್ತಿನಿ ಪೊಲೀಸರನ್ನ ಕರಿಸ್ತೀನಿ ವಿಡಿಯೋ ಮಾಡುವ ಅಧಿಕಾರ ಇಲ್ಲಾ.. ಯಾರ್ ಕೊಟ್ಟಿದ್ದು ಅಧಿಕಾರ!… ವಿಡಿಯೋ ಡಿಲೀಟ್ ಮಾಡಿ ಎಂದು ಗುಂಡಾಗಿರಿ ಮಾಡೋದಕ್ಕೆ ಮುಂದಾಗುತ್ತಾರೆ.
ಆಫೀಸಿನಲ್ಲಿ ಒಂದು ಫೈಲ್ಗೆ 3ಸಾವಿರ ಕೊಟ್ರೆ ನಿಮ್ನ ಕೆಲಸಾ ಫಿಕ್ಸ್ ಅನ್ನುತ್ತಾನೆ ಈ ಭ್ರಷ್ಟ ಹರಾಮಿ ಅಧಿಕಾರಿ. ಮತ್ತೆ… ಎನ್ ಹೇಳ್ತಾನ್ ಅಂದ್ರೆ ಅವರಿಗೆ ಒಂದು ಸಾವಿರ ನನಗೊಂದು ಸಾವಿರ ಒಳಗೊಂದು ಸಾವಿರ. ಇಲ್ಲವಾದ್ರೆ ಎಷ್ಟು ದಿನಾ ಹೋಗುತ್ತೋ ಗೊತ್ತಿಲ್ಲ ಅನ್ನುತ್ತಾನೆ ಈ ಹೇಸಿಕೆ ಅಧಿಕಾರಿ. ಕಳ್ಳನಿಗೆ ಪಿಳ್ಳೆ ನೆವ ಅನ್ನುವ ಹಾಂಗ್.. ಇವನಿಗೆ ಹಣಬೇಕು ಅಷ್ಟೇ. ಬಡವರು ಸಾಲ-ಸುಲ ಮಾಡಿ ಆದ್ರೂ ಇವನಿಗೆ ಹಣ ಕೊಟ್ಟು ದಾಖಲೆ ತಿದ್ದುಪಡಿ ಮಾಡಬೇಕಿದೆ.
ಪಾಲಕರು ಪ್ರಶ್ನೆ ಮಾಡಿದರೆ ಅಧಿಕಾರಿಗಳು ಸೇರಿ, ಪಾಲಕರ ವಿಡಿಯೋ ಮಾಡಿ ಫೋಟೋ ತಗೆದು ಹೆದರಿಸಲು ಮುಂದಾಗುತ್ತಾರೆ.
ಒಟ್ಟಿನಲ್ಲಿ ಇಂತಹ ಭ್ರಷ್ಟ ಅಧಿಕಾರಿಗಳಿಗೆ ತಕ್ಕ ಶಿಕ್ಷೆ ಆಗಬೇಕು ಅನ್ನುವುದೇ ನಮ್ಮ ಒತ್ತಾಯ.



