ಕುಂಬಳೆ: ಪೆರ್ಮುದೆಯಲ್ಲಿ ಉಂಟಾದ ಅವಘಡವೊಂದರಲ್ಲಿ ರಿಕ್ಷಾ ಚಾಲಕನೋರ್ವ ದಾರುಣ ಮೃತಪಟ್ಟ ಬಗ್ಗೆ ವರದಿಯಾಗಿದೆ. ಚೇವಾರು ಮಿತ್ತಡ್ಕದ ರಾಮ ಎಂಬವರ ಪುತ್ರ ರಿಕ್ಷಾ ಚಾಲಕನಾದ ಕಿಶೋರ್ (34) ಘಟನೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಇಲ್ಲಿನ ರಸ್ತೆಯಲ್ಲಿ ಮಲೆನಾಡು ಹೈವೇ ನಿರ್ಮಾಣಕ್ಕಾಗಿ ಇಳಿಸಿದ ಇಂಟರ್‌ಲೋಕ್ ಲೋಡಿಗೆ ರಿಕ್ಷಾ ಬಡಿದು ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಭಾನುವಾರ ಬೆಳಿಗ್ಗೆ 11 ಗಂಟೆಯ ವೇಳೆಗೆ ಅಪಘಾತ ಸಂಭವಿಸಿದ್ದು ಯಾವಗಲೂ ಚೇವಾರು ರಿಕ್ಷಾ ಸ್ಟಾಂಡಿನಲ್ಲಿಟ್ಟು ಬಾಡಿಗೆ ನಡೆಸುತ್ತಿದ್ದ ಕಿಶೋರ್ ಇಂದು ಪೆರ್ಮುದೆಗೆ ಔಷಧಿಗಾಗಿ ತೆರಳಿರುವ ವೇಳೆ ದುರ್ಘಟನೆ ಸಂಭವಿಸಿರುವುದಾಗಿ ತಿಳಿದು ಬಂದಿದೆ. ತಕ್ಷಣ ಇವರನ್ನು ಬಂದ್ಯೋಡಿನ ಖಾಸಗೀ ಆಸ್ಪತ್ರೆಗೆ ಕೊಂಡೊಯ್ದರು ಜೀವ ಉಳಿಸಲಾಗಿಲ್ಲ. ಮೃತರು ಸ್ಥಳಿಯ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದು ಜನಾನುರಾಗಿಯಾಗಿ ಗುರುತಿಸಿಕೊಂಡಿದ್ದರು. ರಾಮ- ಕಮಲ ದಂಪತಿಗಳ ಪುತ್ರನಾದ ಕಿಶೋರ್ ಸಹೋದರ ಪ್ರಶಾಂತ್, ಪತ್ನಿ ಪವಿತ್ರ ಮಕ್ಕಳಾದ ಜಿಷ್ಣು , ಆದೀಶ್ ಎಂಬಿವರನ್ನಗಲಿದ್ದಾರೆ. ಎಲ್ಲರ ಪ್ರೀತಿ ಪಾತ್ರರಾಗಿದ್ದ ಕಿಶೋರ್ ಅವರ ಅಗಲುವಿಕೆ ನಾಡಿನಲ್ಲಿ ಶೋಕ ಅವರಿಸಿದೆ.



