ಜನ ಮನದ ನಾಡಿ ಮಿಡಿತ

Advertisement

ಪೆರ್ಮುದೆಯಲ್ಲಿ ರಿಕ್ಷಾ ಅಪಘಾತ |ಚಾಲಕ ಮೃತ್ಯು

ಕುಂಬಳೆ: ಪೆರ್ಮುದೆಯಲ್ಲಿ ಉಂಟಾದ ಅವಘಡವೊಂದರಲ್ಲಿ ರಿಕ್ಷಾ ಚಾಲಕನೋರ್ವ ದಾರುಣ ಮೃತಪಟ್ಟ ಬಗ್ಗೆ ವರದಿಯಾಗಿದೆ. ಚೇವಾರು ಮಿತ್ತಡ್ಕದ ರಾಮ ಎಂಬವರ ಪುತ್ರ ರಿಕ್ಷಾ ಚಾಲಕನಾದ ಕಿಶೋರ್ (34) ಘಟನೆಯಲ್ಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಇಲ್ಲಿನ ರಸ್ತೆಯಲ್ಲಿ ಮಲೆನಾಡು ಹೈವೇ ನಿರ್ಮಾಣಕ್ಕಾಗಿ ಇಳಿಸಿದ ಇಂಟರ್‌ಲೋಕ್ ಲೋಡಿಗೆ ರಿಕ್ಷಾ ಬಡಿದು ಅಪಘಾತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಭಾನುವಾರ ಬೆಳಿಗ್ಗೆ 11 ಗಂಟೆಯ ವೇಳೆಗೆ ಅಪಘಾತ ಸಂಭವಿಸಿದ್ದು ಯಾವಗಲೂ ಚೇವಾರು ರಿಕ್ಷಾ ಸ್ಟಾಂಡಿನಲ್ಲಿಟ್ಟು ಬಾಡಿಗೆ ನಡೆಸುತ್ತಿದ್ದ ಕಿಶೋರ್ ಇಂದು ಪೆರ್ಮುದೆಗೆ ಔಷಧಿಗಾಗಿ ತೆರಳಿರುವ ವೇಳೆ ದುರ್ಘಟನೆ ಸಂಭವಿಸಿರುವುದಾಗಿ ತಿಳಿದು ಬಂದಿದೆ. ತಕ್ಷಣ ಇವರನ್ನು ಬಂದ್ಯೋಡಿನ ಖಾಸಗೀ ಆಸ್ಪತ್ರೆಗೆ ಕೊಂಡೊಯ್ದರು ಜೀವ ಉಳಿಸಲಾಗಿಲ್ಲ. ಮೃತರು ಸ್ಥಳಿಯ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದು ಜನಾನುರಾಗಿಯಾಗಿ ಗುರುತಿಸಿಕೊಂಡಿದ್ದರು. ರಾಮ- ಕಮಲ ದಂಪತಿಗಳ ಪುತ್ರನಾದ ಕಿಶೋರ್ ಸಹೋದರ ಪ್ರಶಾಂತ್, ಪತ್ನಿ ಪವಿತ್ರ ಮಕ್ಕಳಾದ ಜಿಷ್ಣು , ಆದೀಶ್ ಎಂಬಿವರನ್ನಗಲಿದ್ದಾರೆ. ಎಲ್ಲರ ಪ್ರೀತಿ ಪಾತ್ರರಾಗಿದ್ದ ಕಿಶೋರ್ ಅವರ ಅಗಲುವಿಕೆ ನಾಡಿನಲ್ಲಿ ಶೋಕ ಅವರಿಸಿದೆ.

Leave a Reply

Your email address will not be published. Required fields are marked *

ಮಂಗಳೂರು: ದಸರಾ ರಜೆ ವೇಳೆ ತರಗತಿ, ಪರೀಕ್ಷೆ ನಡೆಸಿದರೆ ಪ್ರತಿಭಟನೆ: ಪ್ರಮೋದ್ ಮುತಾಲಿಕ್

ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ಅಪರಿಚಿತ ಮಾನವನ ಅಸ್ಥಿಪಂಜರ ಪತ್ತೆ

ಉಡುಪಿ: ಉಡುಪಿಯಲ್ಲಿ ಸಾವಿರಾರು ರೆಕ್ಕೆ ಗೆದ್ದಲುಗಳ ಹಾರಾಟ; ಸಾರ್ವಜನಿಕರ ಗಮನ ಸೆಳೆದ ದೃಶ್ಯ

ಮುಂಬೈ: ಮುಂಬೈಯಲ್ಲಿ ಸಾರ್ವಜನಿಕ ಸತ್ಯನಾರಾಯಣ ಪೂಜಾ ಉದ್ಯಾಪನ…!

ಬಂಟ್ವಾಳ: ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಹಸಂಚಾಲಕರಾಗಿ ಪ್ರದೀಪ್ ಅಜ್ಜಿಬೆಟ್ಟು ನೇಮಕ

ಉಡುಪಿ: ಸರ್ಕಾರಿ ಜಾಗದಲ್ಲಿ ಅಕ್ರಮ ಕೆಂಪುಕಲ್ಲು ಗಣಿಗಾರಿಕೆ; ₹16 ಲಕ್ಷ ಮೌಲ್ಯದ ಸೊತ್ತು ವಶ

ಉಡುಪಿ: ಶ್ರೀಕೃಷ್ಣ ಮಠಕ್ಕೆ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಭೇಟಿ; ಶ್ರೀಕೃಷ್ಣ ದೇವರ ದರ್ಶನ..!

ಮಂಗಳೂರು: ಲೋಕಾಯುಕ್ತ ಬಲೆಗೆ ಬಿದ್ದ ಬಜ್ಪೆ ಇನ್ಸ್‌ಪೆಕ್ಟರ್‌ಗೆ 14 ದಿನಗಳ ನ್ಯಾಯಾಂಗ ಬಂಧನ

ಗುಜರಾತ್: 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ; ಕರಾವಳಿಯ ಮೂವರು ಪ್ರತಿಭೆಗಳಿಗೆ ರಾಷ್ಟ್ರ ಪ್ರಶಸ್ತಿ…!

error: Content is protected !!