ಜನ ಮನದ ನಾಡಿ ಮಿಡಿತ

Advertisement

ತೆಂಕನಿಡಿಯೂರು ಗ್ರಾಪಂ ಅಧ್ಯಕ್ಷೆ ಬಿಜೆಪಿಯಿಂದ ಉಚ್ಚಾಟನೆ


ಉಡುಪಿ: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ತೆಂಕನಿಡಿಯೂರು ಗ್ರಾಪಂ ಅಧ್ಯಕ್ಷೆ ಶೋಭಾ ಡಿ. ನಾಯ್ಕ್ ಅವರನ್ನು ಉಚ್ಚಾಟಿಸಿ ಆದೇಶಿಸಲಾಗಿದೆ.


ಉಡುಪಿ ವಿಧಾನಸಭಾ ಕ್ಷೇತ್ರದ ತೆಂಕನಿಡಿಯೂರು ಗ್ರಾಮ ಪಂಚಾಯತ್‌ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರು, ಪಕ್ಷದ ಚೌಕಟ್ಟು ಮೀರಿ ತೆಂಕನಿಡಿಯೂರು ಗ್ರಾಮ ಪಂಚಾಯತ್‌ ಸದಸ್ಯರು ಮತ್ತು ನಾಯಕರ ಮೇಲೆ ಸುಳ್ಳು ಕೇಸನ್ನು ದಾಖಲಿಸಿದ್ದು, ಪಕ್ಷಕ್ಕೆ ತಾವು ಮುಜುಗರ ಮಾಡುವಂತ ಸನ್ನಿವೇಶವನ್ನು ನಿರ್ಮಾಣ ಮಾಡಿದ ಕಾರಣಕ್ಕಾಗಿ ಉಚ್ಚಾಟಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.


ಈಗಾಗಲೇ ಪಂಚಾಯತ್‌ಗೆ ಸಂಬಂಧ ಪಟ್ಟಕೆಲವೊಂದು ನಿರ್ಧಾರಗಳನ್ನು ಪಕ್ಷದ ಪಂಚಾಯತ್ ಸದಸ್ಯರ ಗಮನಕ್ಕೆ ತರದೆ ಭ್ರಷ್ಟಾಚಾರ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದು ಹಾಗು ತಮ್ಮ ಅಶಿಸ್ತಿನ ವರ್ತನೆಗಾಗಿ ತಮ್ಮನ್ನು ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಲಾಗಿದೆ ಎಂದು ಬಿಜೆಪಿ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *

ರಾಷ್ಟ್ರ ಪ್ರಶಸ್ತಿ ವಿಜೇತೆ ರೂಪಶ್ರೀ ವರ್ಕಾಡಿಗೆ ಬಿಜೆಪಿ ಜಿಲ್ಲಾ ಘಟಕದಿಂದ ಸನ್ಮಾನ…!

ಬಿಜೆಪಿ ರಾಷ್ಟ್ರೀಯ ವಕ್ತಾರ ಹುದ್ದೆಗೆ ಪೂನಾವಾಲಾ ಗುಡ್‌ಬೈ?…

ಚಿನ್ನದ ದರದಲ್ಲಿ ಬದಲಾವಣೆ; ಹೊಸ ಬೆಲೆ ಪ್ರಕಟ…!

ತುಮಕೂರು: ಪೊಲೀಸ್ ಪುತ್ರನೇ ಹೈಡ್ರೋ ಗಾಂಜಾ ಜಾಲದ ರೂವಾರಿ..!

ಪಾಕಿಸ್ತಾನದಲ್ಲಿ ಭೀಕರ ಗಣಿ ಸ್ಫೋಟ; 32 ಕಾರ್ಮಿಕರ ದುರ್ಮರಣ…!

ಬೀರತಮ್ಮನಹಳ್ಳಿ ಕೆರೆಯಲ್ಲಿ ಮೀನುಗಳ ಮಾರಣಹೋಮ; ತನಿಖೆ ಆರಂಭ…!

ಕುಂದಾಪುರ: ಐವನ್ ಮಸ್ಕರೇನಸ್ ಹತ್ಯೆ; ಪೊಲೀಸ್ ತನಿಖೆಯಲ್ಲಿ ಹೊಸ ಮಾಹಿತಿ..!

ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ದಾಳಿ…!

ಬಂಟ್ವಾಳ: ಭಾರೀ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಕುಸಿತಗೊಂಡ ಮನೆಯ ಚಾವಣಿ…!

error: Content is protected !!