ಕಿನ್ನಿಗೋಳಿ: ರೋಟರಿ ಜಿಲ್ಲೆ 3181 ರ ವಲಯ 1 ರ ನೂತನ ಸಹಾಯಕ ಗವರ್ನರ್ ಆಗಿ ಪತ್ರಕರ್ತ,ರಂಗ ಸಂಘಟಕ ಶರತ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ಇವರುರಂಗ ನಟ,ಯಕ್ಷಗಾನ ಕಲಾವಿದ.26 ವರ್ಷಗಳಿಂದ ಕಿನ್ನಿಗೋಳಿಯ ವಿಜಯಾ ಕಲಾವಿದರು ನಾಟಕ ಸಂಸ್ಥೆ ಯನ್ನು ಮುನ್ನಡೆಸುತ್ತಿದ್ದು ರಂಗಭೂಮಿ ಸಂಘಟನೆಗೆ 2005 ರಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ. ಹುಟ್ಟೂರು ಸಂಕಲಕರಿಯ ವಿಜಯಾ ಯುವಕ ಸಂಘ,ಸಂಕಲಕರಿಯ ಹಾಲು ಉತ್ಪಾದಕರ ಸಂಘ,ಮುಲ್ಕಿ ವಲಯ ಪತ್ರಕರ್ತರ ಸಂಘ,ಕಿನ್ನಿಗೋಳಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿ,ಐಕಳ ಪೊಂಪೈ ಕಾಲೇಜು ಹಳೆ ವಿದ್ಯಾರ್ಥಿ ಸಂಘ,ಮುಂಡ್ಕೂರು ವಿದ್ಯಾವರ್ಧಕ ಪದವಿಪೂರ್ವ ಕಾಲೇಜು ಹಳೆ ವಿದ್ಯಾರ್ಥಿ ಸಂಘ,ಶಿರ್ವ ಎಂ.ಎಸ್.ಆರ್.ಎಸ್ ಕಾಲೇಜು ವಿದ್ಯಾರ್ಥಿ ಸಂಘ,ಕಿನ್ನಿಗೋಳಿ ರೋಟರಾಕ್ಟ್ ಗಳಲ್ಲಿ ಅಧ್ಯಕ್ಷನಾಗಿ ,ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷನಾಗಿ ,ಕಿನ್ನಿಗೋಳಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಧನ್ಯತೆ.ಕಿನ್ನಿಗೋಳಿ ರೋಟರಿಯ ಶತಮಾನೋತ್ಸವ ಸಾಲಿನ ಕಾರ್ಯದರ್ಶಿ, ವಲಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.ಮುಂಡ್ಕೂರುಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಪತ್ನಿ ಮಮತಾ ಶೆಟ್ಟಿ ಕಿನ್ನಿಗೋಳಿ ಇನ್ನರ್ವೀಲ್ ನ ಮಾಜಿ ಅಧ್ಯಕ್ಷೆಯಾಗಿದ್ದು ಪುತ್ರಿ ಶಮ ಶೆಟ್ಟಿ ಮಂಗಳೂರಿನ ಎಜೆ ದಂತ ವೈದ್ಯಕೀಯ ಶಿಕ್ಷಣ ಸಂಸ್ಥೆಯಲ್ಲಿ ದಂತ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದು ಪುತ್ರ ಮನೀಶ್ ಶೆಟ್ಟಿ ಮೂಡಬಿದ್ರೆ ಆಳ್ವಾಸ್ ನಲ್ಲಿ ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದಾರೆ.ಸದಾ ಸೇವಾನಿರತ ಮನೋಭಾವನೆಳಿಂದ ಮಿತೃತ್ವ-ಭ್ರಾತೃತ್ವಗಳ ಮೂಲಕ ಎಲ್ಲರ ಜತೆ ಬೆರೆತು ಬಾಳುತ್ತಾ ರೋಟರಿಯೇ ನನ್ನ ಉಸಿರು ಎಂಬ ನಿರಂತರ ಉದ್ಘೋಷ ಶರತ್ ಶೆಟ್ಟಿಯವರದಾಗಿದ್ದು ರೋಟರಿ ಜಿಲ್ಲಾ ಗವರ್ನರ್ ರೊವಿಕ್ರಮ್ ದತ್ತ ರವರು ಇವರನ್ನು ವಲಯದ ಸಹಾಯಕ ಗವರ್ನರ್ ಆಗಿ ನಿಯುಕ್ತಿಗೊಳಿಸಿದ್ದಾರೆ.ಇವರು ಕಿನ್ನಿಗೋಳಿ,ಮುಲ್ಕಿ,ಬಜಪೆ ಹಾಗೂ ಮೂಡಬಿದ್ರೆ ಮಿಡ್ ಟೌನ್ ರೋಟರಿ ಸಂಸ್ಥೆಗಳಿಗೆ ಸಹಾಯಕ ಗವರ್ನರ್ ಆಗಿದ್ದಾರೆ.
ಬಾವಿಗೆ ಬಿದ್ದ ಹೆಣ್ಣು ಮಗುವನ್ನು ಸ್ಥಳೀಯ ಯುವಕ ರಕ್ಷಿಸಿದ ಘಟನೆ ವರದಿಯಾಗಿದೆ. ಉಳ್ಳಾಲದಲ್ಲಿ ಆಟವಾಡುತ್ತಾ ಎರಡೂವರೆ ಹರೆಯದ ಮಗುವೊಂದು ದಂಡೆಯಿಲ್ಲದ…
ಸಮಾಜದಲ್ಲಿ ಒಡಕುಂಟು ಮಾಡಿ, ದ್ವೇಷವನ್ನು ಬಿತ್ತುವ ಹಾಗೂ ಶಾಂತಿಯನ್ನು ಕದಡಲು ಪ್ರಚೋದನಾತ್ಮಕ ಭಾಷಣವನ್ನು ಯಾರು ಮಾಡಿದರೂ, ಅವರ ಮೇಲೆ ಪ್ರಕರಣ…
ಕರಾವಳಿಯ ಗಂಡುಕಲೆ ಎಂದೇ ಪ್ರಸಿದ್ಧ ಪಡೆದಿರುವ ಯಕ್ಷಗಾನ ಉತ್ತರ ಪ್ರದೇಶದ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಪ್ರಪ್ರಥಮ ಬಾರಿಗೆ ಪ್ರದರ್ಶನವಾಗಿದೆ.…
ಮಂಗಳೂರಿನ ಪತ್ರಿಕಾಭವನದಲ್ಲಿ `ಕೊಡಗಿನ ಕುಲದೇವತೆ ಕಾವೇರಿ' ಕೃತಿಯನ್ನು ಬಿಡುಗಡೆ ಮಾಡಲಾಯಿತು. ಅಮೃತ ಪ್ರಕಾಶನದ 45ನೇ ಸರಣಿ ಕೃತಿ ಕೊಡಗಿನ ಚಿತ್ರ…
ಕಳೆದ ವಾರಗಳಿಂದೀಚೆಗೆ ಸುರಿಯುತ್ತಿರುವ ಮಳೆಗೆ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಮನೆಯೊಂದಕ್ಕೆ ಹಾನಿಯಾಗಿದೆ. ಇಡ್ಕಿದು ಗ್ರಾಮದ ಬಡಜ ಸುಧಾ ಎಂಬವರ…
ಕೇಂದ್ರ ಸರಕಾರದ ಪಿಎಂಇಜಿಪಿ ಯೋಜನೆ ಅಡಿಯಲ್ಲಿ ಸಬ್ಸಿಡಿ ಲೋನ್ ಮಾಡಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂ. ಹಣ ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿ…