ಕಬಕ ಗ್ರಾಮದ ಕಬಕಬೈಲು ಪ್ರದೇಶವೂ ಸಂಪೂರ್ಣ ಜಲಾವೃತಗೊಂಡಿದ್ದು, ರಸ್ತೆ ಯಾವುದು ತೋಟ ಯಾವುದು ಅನ್ನೋದೆ ಮರೆತಂತಾಗಿದೆ. ಇದಕ್ಕೂ ಮೊದಲು ಹಲವಾರು ಬಾರಿ ಇಲ್ಲಿನ ಸ್ಥಳೀಯರು ಸಮಸ್ಯೆ ಬಗ್ಗೆ ಗ್ರಾಮ ಪಂಚಾಯತ್ ಗೆ ತಿಳಿಸಿದ್ದರೂ ಇಲ್ಲಿವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಅನ್ನೋದು ಸ್ಥಳೀಯರ ಆರೋಪ..

ದಿನಾ ನೂರಾರು ಜನ ಓಡಾಡುವ ರಸ್ತೆ ಇದೀಗ ಸಂಪೂರ್ಣ ಜಲಾವೃವಾಗಿದ್ದು ರಸ್ತೆಯಿಂದ ರಭಸವಾಗಿ ನೀರು ಹರಿದು ಕೃಷಿ ತೋಟಕ್ಕೆ ಹರಿಯುತ್ತಿದೆ. ಕೃಷಿಕರಿಗೆ ಕೃಷಿ ಹಾನಿ ಬಗ್ಗೆ ಚಿಂತೆಯಾದ್ರೆ ದಿನಾ ಓಡಾಡೋ ಜನತೆಗೆ ಇಲ್ಲಿ ಹೇಗೆ ಹೋಗೋದಪ್ಪ ಅನ್ನೋ ಚಿಂತೆ. ಇನ್ನು ಶಾಲಾ ಮಕ್ಕಳ ಪರಿಸ್ಥಿತಿ ಬಗ್ಗೆ ಕೇಳೊದೆ ಬೇಡ. ದೊಡ್ಡವರೇ ನೀರಿನಲ್ಲಿ ಕೊಚ್ಚಿಕೊಂಡು ಹೋಗ್ತಾರೊ ಅನ್ನೋ ಪರಿಸ್ಥಿಯಲ್ಲಿರುವಾಗ ಇನ್ನು ಮಕ್ಕಳ ಪರಿಸ್ಥಿತಿ ಹೇಗಿರ್ಬೇಡ ಹೇಳಿ.
ಅದೇನೆ ಇರಲಿ ಈ ಬಾರಿ ಮಳೆರಾಯ ರಕ್ಕಸ ರೂಪ ತಾಳಿದ್ದು, ಜನತೆಗೆ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಿದೆ.



