ಪಡುಮಾರ್ನಾಡು ಪಂಚಾಯತ್ ಮಾಸಿಕ ಸಭೆ ಅರ್ಧದಲ್ಲಿ ಮುಂದೂಡಿಕೆ, ಪಡುಮಾರ್ನಾಡು ಗ್ರಾಮ ಪಂಚಾಯತ್ ಮಾಸಿಕ ಸಭೆಯು ಶುಕ್ರವಾರ 11.00 ಗಂಟೆಗೆ ಪ್ರಾರಂಭವಾಯಿತು.
ಇದೇ ಸಮಯದಲ್ಲಿ 20 ಮಂದಿ ಬನ್ನಡ್ಕ ನಿವಾಸಿಗಳು ತಮ್ಮ ಮನೆಯ ಸಮೀಪ ನಿರ್ಮಾಣಗೊಳ್ಳುತ್ತಿರುವ ಅನಧಿಕೃತ ಕೈಗಾರಿಕೆ ಕಟ್ಟಡ ಕಾಮಗಾರಿ ಹಾಗೂ ಬೃಹತ್ ಆಕಾರದ ಬಾಯ್ಲರ್ ತಯಾರಿಕ ಘಟಕ ಪ್ರಾರಂಭಗೊಂಡಿದೆ ಇದರಿಂದ ಸ್ಥಳೀಯ ಎಲ್ಲಾ ನಿವಾಸಿಗಳಿಗೆ ಶಬ್ದ ಮಾಲಿನ್ಯ ಹಾಗೂ ಕೃಷಿ ಆಸ್ತಿಗಳಿಗೆ ಪರಿಸರ ಮಾಲಿನ್ಯ ಆಗುತ್ತಿದೆ , ರಸ್ತೆ ಬ್ಲಾಕ್ ಆಗಿ ವಾಹನ ಸಂಚಾರಕ್ಕೆ ತೊಂದರೆ ಆಗಿದೆ ಎಂದು ಪಂಚಾಯತಿಗೆ ದೂರನ್ನು ಸಲ್ಲಿಸಲು ಬಂದಿದ್ದರು. ಈ ಕೈಗಾರಿಕೆಗೆ ಗ್ರಾಮ ಪಂಚಾಯತಿಯಿಂದ ಇದುವರೆಗೆ ಯಾವುದೇ ಪರವಾನಿಗೆ ನೀಡಿರುವುದಿಲ್ಲ ಆದರೂ ಅಧ್ಯಕ್ಷರ ಕುಮ್ಮಕ್ಕಿನ ಮೇರೆಗೆ ಈ ಕೈಗಾರಿಕೆ ರಾಜಾರೋಷವಾಗಿ ಉತ್ಪಾದನೆ ಹಾಗೂ ಬೃಹತ್ ಕಟ್ಟಡಗಳನ್ನು ಕಟ್ಟಿರುತ್ತಾರೆ.
ಕಟ್ಟಡ ಕಟ್ಟಲು ಕೂಡ ಯಾವುದೇ ಪರವಾನಿಯನ್ನು ಗ್ರಾಮ ಪಂಚಾಯತಿಯಿಂದ ಪಡೆದಿರುವುದಿಲ್ಲ ಈಗಾಗಲೇ ಈ ಜಾಗದ ಇಂಡಸ್ಟ್ರಿಯಲ್ ಕನ್ವೆರ್ಷನ್ ಮಾಡಿದನ್ನು ಮಾನ್ಯ ಸಹಾಯಕ ಆಯುಕ್ತರು ಮಂಗಳೂರು ಇವರು ತಡೆಯಾಜ್ಞ ನೀಡುತ್ತಾರೆ.
ಈ ಬಗ್ಗೆ ಸಮಸ್ಯೆ ಹೇಳಲು ಬಂದ ಗ್ರಾಮಸ್ಥರಿಗೆ ಪಂಚಾಯತ್ ಅಧ್ಯಕ್ಷರು ಯಾವುದೇ ಕಾರಣಕ್ಕೂ ಈ ಕಟ್ಟಡವನ್ನು ಅಥವಾ ತಯಾರಿಕ ಘಟಕಕ್ಕೆ ಬಂದು ಮಾಡಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು .
ಆದರೆ ಹಲವಾರು ಸದಸ್ಯರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಈ ಘಟಕವು ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದು ಯಾವುದೇ ಪರವಾನಿಗೆ ಪಡೆಯದೆ ಇಷ್ಟು ದೊಡ್ಡ ಉದ್ದಿಮೆಯನ್ನು ಸ್ಥಾಪಿಸುವುದು ಕಾನೂನುಬಾಹಿರವಾಗುತ್ತದೆ ಸದಸ್ಯರ ಒಮ್ಮತದ ಅಭಿಪ್ರಾಯದಂತೆ ನಿರ್ಣಯ ಕೈಗೊಂಡರೆ ಆ ಉದ್ದಿಮೆಯನ್ನು ನಾವು ಬಂದ್ ಮಾಡಬಹುದು ಎಂದು ಹೇಳಿದರು. ಆದರೆ ಅಧ್ಯಕ್ಷರು ಹಾಗೂ ಕೆಲವು ಸದಸ್ಯರು ಯಾವುದೇ ಕಾರಣಕ್ಕೂ ಬಂದ್ ಮಾಡಲು ನಿರ್ಣಯ ಕೈಗೊಳ್ಳುವುದಿಲ್ಲ ಎಂದು ಹೇಳಿದಾಗ ಗ್ರಾಮಸ್ಥರು ರೊಚ್ಚಿಗೆದ್ದು ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು. ಹಾಗೂ ಇದರ ಬಗ್ಗೆ ವ್ಯವಸ್ಥಿತ ಹೋರಾಟ ನಡೆಸಿ ಜಿಲ್ಲಾಧಿಕಾರಿಗೆ ಕಚೇರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಈ ಗ್ರಾಮ ಪಂಚಾಯತಿನ ದುರಹಸ್ಥೆ ಏನಂದರೆ ಇಷ್ಟು ದೊಡ್ಡ ಅನಧಿಕೃತ ಕಟ್ಟಡ ಹಾಗೂ ಉತ್ಪಾದನೆ ನಡೆಯುತ್ತಿರುವ ಉದ್ಯಮಗೆ ಯಾವುದೇ ಪರವಾನಿಗೆ ನೀಡದೆ ಉತ್ಪಾದನೆ ಘಟಕ ನಡೆಸುವುದು ಎಂದರೆ ಇದರ ಹಿಂದೆ ಯಾವ ಕಾಂಚಾಣದ ಸದ್ದು ಇದೆ ಎಂದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ. ಪ್ರತಿಭಟನಾಕಾರರ ಪರವಾಗಿ ಮಾತನಾಡಿದ ಸದಸ್ಯರಾದ ಮೊಹಮದ್ ಅಸ್ಲಾಂ ಸತೀಶ್ ಕರ್ಕೇರ, ಅಭಿನಂದನ್ ಬಲ್ಲಾಳ್ ಹಾಗೂ ರಮೇಶ್ ಯಸ್ ಶೆಟ್ಟಿ ಈ ಉದ್ದಿಮೆಯನ್ನು ಕೂಡಲೇ ಬಂದ್ ಮಾಡಲು ನಿರ್ಣಯ ಕೈಗೊಳ್ಳಬೇಕು ಎಂದರು.*ಇದಕ್ಕೆ ಒಪ್ಪದ ಅಧ್ಯಕ್ಷ ವಾಸುದೇವ ಭಟ್ ಯಾವುದೇ ಕಾರಣಕ್ಕೂ ಉದ್ದಿಮೆಯನ್ನು ನಿಲ್ಲಿಸಲಾಗುವುದಿಲ ತೊಂದರೆ ಇದ್ದರೆ ಅದನ್ನು ಪರಿಹರಿಸೋಣ ಎಂದರು *
ಈ ರೀತಿಯ ಬೇಜವಾಬ್ದಾರಿ ಹೇಳಿಕೆಯ ಹಿಂದೆ ಅಧ್ಯಕ್ಷರಿಗೆ ಕಪ್ಪ ಕಾಣಿಕೆ ಸಂದಯ ಆಗಿರಬಹುದು ಎಂದು ಜನರು ಗುಸು ಗಸು ಮಾತನಾಡುತ್ತಿದ್ದಾರೆ.
ಕನ್ನಡ ಚಿತ್ರರಂಗದ ಖ್ಯಾತ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕುಟುಂಬ ಸಮೇತರಾಗಿ ಆಗಮಿಸಿದ್ದಾರೆ. ರಿಷಬ್…
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು -ಸುಳ್ಯ ರಾಷ್ಟ್ರೀಯ ಹೆದ್ದಾರಿಯ ಕೌಡಿಚ್ಚಾರು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪಿಕಪ್ ವಾಹನ ಮೋರಿಗೆ…
ಸರ್ಕಾರಿ ಬಸ್ ಮತ್ತು ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಮಹಿಳೆಯೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಘಟನೆ ದಕ್ಷಿಣ…
ವಸತಿಗೃಹವೊಂದರ ಮುಂಭಾಗದಲ್ಲಿ ನಿಲ್ಲಿಸಲಾಗಿದ್ದ ಬೈಕ್ ಕಳವು ಮಾಡಿದ ಆರೋಪಿಗಳಿಬ್ಬರನ್ನು ಬಂಟ್ವಾಳ ನಗರ ಠಾಣಾ ಪೋಲೀಸರು ಬಂಧಿಸಿದ್ದಾರೆ. ಬಂಟ್ವಾಳ ಸಜೀಪ ಮುನ್ನೂರು…
ಮಂಗಳೂರು: ಇತ್ತೀಚೆಗೆ ನಿಧನ ಹೊಂದಿದ ಬಂಟರ ಯಾನೆ ನಾಡವರ ಮಾತೃ ಸಂಘದ ಮಾಜಿ ಕೋಶಾಧಿಕಾರಿ ಹಾಗೂ ಯೂನಿಯನ್ ಬ್ಯಾಂಕಿನ ನಿವೃತ್ತ…
ಮಂಗಳೂರು: ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸಂಪೂರ್ಣವಾಗಿ ಡಿಜಿಟಲ್ ಮಾದರಿಯಲ್ಲಿ ಜನಗಣತಿ ನಡೆಯಲಿದ್ದು, ಅದರ ಭಾಗವಾಗಿ ಕರ್ನಾಟಕದಲ್ಲಿ 2027ರ ಜನಗಣತಿಯ…